Asianet Suvarna News Asianet Suvarna News

ಟ್ವಿಟ್ಟರ್‌ನಲ್ಲಿ ಟ್ರೆಂಡ್‌ಗೆ ಬಂತು ಕಳೆದುಹೋದ ಆರ್ಕುಟ್

  • ವಯಸ್ಸನ್ನು ಹೇಳದೇ  ವಯಸ್ಸು ತಿಳಿಸುವ ಟ್ರೆಂಡ್
  • ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್‌ ಆದ ಆರ್ಕುಟ್
  • ಟ್ರೆಂಡ್‌ನಲ್ಲಿ ಭಾಗವಹಿಸಿದ ಸ್ವರಾ ಭಾಸ್ಕರ್, ಪೇಟಿಎಂ ಸಿಇಒ
Twitter users reveal their age without revealing their age create new trend akb
Author
Bangalore, First Published Jan 28, 2022, 4:41 PM IST

ಟ್ವಿಟ್ಟರ್‌ ಬಳಕೆದಾರರು ಟ್ವಿಟ್ಟರ್‌ನಲ್ಲಿ ಹೊಸ ಟ್ರೆಂಡ್‌ ಒಂದನ್ನು ಶುರು ಮಾಡಿದ್ದು ಪೇಟಿಎಂ ಸಿಇಒ ವಿಜಯ್ ಶೇಖರ್‌ ಶರ್ಮಾ (Vijay Shekhar Sharma) ನಟಿ ಸ್ವರ ಭಾಸ್ಕರ್‌ ಸೇರಿದಂತೆ ಅನೇಕರು ಈ ಟ್ರೆಂಡ್‌ನಲ್ಲಿ ಭಾಗವಹಿಸಿದ್ದಾರೆ. ಈ ಟ್ವಿಟ್ಟರ್‌ನಲ್ಲಿ ಹಾಸ್ಯ ಹಾಗೂ ತಮಾಷೆಯ ಸುರಿ ಮಳೆಯೇ ಆಗುತ್ತಿದೆ. ಹಾಗಿದ್ರೆ ಈ ಹೊಸ ಟ್ರೆಂಡ್‌ ಏನು ಇಲ್ಲಿದೆ ನೋಡಿ. ಈ ಟ್ರೆಂಡ್ ಪ್ರಕಾರ ನಮ್ಮ ವಯಸ್ಸನ್ನು ಹೇಳದೇ ನಮಗೆಷ್ಟು ವಯಸ್ಸು ಎಂಬುದನ್ನು ಪ್ರಸ್ತುತಪಡಿಸಬೇಕು ಎಂಬುದು.

'ನಿಮ್ಮ ವಯಸ್ಸನ್ನು ಬಾಯ್ಬಿಟ್ಟು ಹೇಳದೇಯೇ ನಿಮ್ಮ ವಯಸ್ಸನ್ನು ತಿಳಿಸಲು ಸಾಧ್ಯವೇ' ಎಂಬ ಈ ಟ್ರೆಂಡ್‌ನಲ್ಲಿ  ಕಾರ್ಪೊರೇಟ್ ವಲಯದ ನಾಯಕರು, ನಟರು ಮತ್ತು ಸಾಮಾಜಿಕ  ಜಾಲತಾಣದಲ್ಲಿ ಪ್ರಭಾವಿಗಳಾಗಿರುವವರು ಟ್ವಿಟರ್‌ನಲ್ಲಿ ಈ ಹೊಸ ಟ್ರೆಂಡ್ ಫಾಲೋ ಮಾಡಲು ಶುರು ಮಾಡಿದರು. ಇದರಂತೆ ಜನರು ತಮ್ಮ ಬಾಲ್ಯವನ್ನು ನೆನಪಿಸಿಕೊಂಡು ಮತ್ತು ಅವರ ಪೀಳಿಗೆಗೆ ಮಾತ್ರ ಅರ್ಥವಾಗುವುದನ್ನು ಉಲ್ಲೇಖಿಸುವ ಮೂಲಕ ತಮ್ಮ ವಯಸ್ಸನ್ನು ತಿಳಿಸುವ ಕಲ್ಪನೆ ಇದಾಗಿತ್ತು. ಈ ಟ್ರೆಂಡ್‌ನಲ್ಲಿ ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ, ನಟಿ ಸ್ವರಾ ಭಾಸ್ಕರ್ ಮತ್ತು ಅನೇಕರು ಭಾಗವಹಿಸಿದ್ದರು. ಸ್ವರಾ ಅವರು ಖಾಲಿ ಕರೆ ಎಂದು ಸುಳಿವು ನೀಡುವ ಮೂಲಕ ತಮ್ಮ ವಯಸ್ಸನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ.

ಟ್ವೀಟರ್‌ ಬಳಿಕ ಈಗ ಯುಟ್ಯೂಬ್‌ನಲ್ಲೂ NFT: ಹೊಸ ವೈಶಿಷ್ಟ್ಯದ ‌ಸುಳಿವು ನೀಡಿದ ಸಿಇಓ!

ನಿಮಗೆ ಇಷ್ಟು ವಯಸ್ಸಾಗಿದೆ ಎಂದು ಹೇಳದೆ, ಇಂದಿನ ಯುವಕನಿಗೆ ಅರ್ಥವಾಗದ ಏನನ್ನಾದರೂ ಹೇಳಿ ಎಂದು ಕೇಳುವ ಪೋಸ್ಟ್‌ನಿಂದ ಈ ಟ್ರೆಂಡ್‌ ಆರಂಭವಾಗಿದೆ.. ಕೆಹ್ ಕೆ ಪೆಹೆನೊ ( Keh Ke Peheno )ಎಂಬ ಹೆಸರಿನ ಟ್ವಿಟರ್ ಖಾತೆಯಲ್ಲಿ ಆಂಟೆನಾದ ಛಾಯಾಚಿತ್ರಗಳು ಮತ್ತು ದೂರದರ್ಶನ ಫೋಟೋ ಹಾಕಿ ಈ ಖಾತೆದಾರರು ತಮ್ಮ ಕಾಲದ ಸುಳಿವು ನೀಡಿ ಅವರ ವಯಸ್ಸನ್ನು ಗ್ರಹಿಸಲು ನೆಟ್ಟಿಗರಿಗೆ ಹೇಳಿದ್ದಾರೆ. ಹೀಗೆ ಶುರುವಾದ ಟ್ವಿಟ್ಟರ್ ಟ್ರೆಂಡ್ ಕಾಲದ ತೆಕ್ಕೆಗೆ ಸಿಲುಕಿ ಕಳೆದುಹೋದ  ಸಾಮಾಜಿಕ ಜಾಲತಾಣ ಆರ್ಕುಟ್‌ನನ್ನು ಕೂಡ ಟ್ರೆಂಡ್‌ ಆಗಿಸಿತ್ತು. 

ಹೀಗೆ ಟ್ವಿಟ್ಟರ್‌ನಲ್ಲಿ #Orkut ಟ್ರೆಂಡ್ ಆಗುತ್ತಿದ್ದಂತೆ, ಮೆಮೆಗಳು, ಜೋಕ್‌ಗಳು ಧಾರಾಳವಾಗಿ ಟ್ವಿಟ್ಟರ್‌ನಲ್ಲಿ ಹರಿದು ಬಂದವು. ಮೆಟಾ ಮತ್ತು ಸ್ನ್ಯಾಪ್‌ಚಾಟ್‌ ಬಳಸುವ ಇಂದಿನ ಯುವ ಪೀಳಿಗೆಗೆ ಆರ್ಕುಟ್ ಅನ್ನು ವಿವರಿಸಲು ಮೆಮೆಗಳು  ಪ್ರಯತ್ನಿಸಿದವು, ಅಲ್ಲದೇ ವಿವಾದಗಳಿಲ್ಲದ ಆನ್‌ಲೈನ್ ಜಗತ್ತಿನ ಒಂದು ಉತ್ತಮ ಹಳೆಯ ಸಮಯವನ್ನು ನೆನಪಿಸಿಕೊಂಡರು. ಕಳೆದ ವರ್ಷ, ಭಾರತದಲ್ಲಿ ಟ್ವಿಟರ್ ಮತ್ತು ಫೇಸ್‌ಬುಕ್ ಅನ್ನು ನಿಷೇಧಿಸಬಹುದು ಎಂಬ ಊಹಾಪೋಹಗಳು ಹರಡಿದಾಗ ಇದೇ ರೀತಿಯ ಟ್ರೆಂಡ್ ನಡೆದಿತ್ತು. 

ಕೇಂದ್ರ ಸರ್ಕಾರದ ಒತ್ತಡದಿಂದ ತಮ್ಮ ಟ್ವೀಟರ್‌ ಫಾಲೊವರ್ಸ್ ಸಂಖ್ಯೆ ಕುಸಿತ: ರಾಹುಲ್ ಗಾಂಧಿ ಆರೋಪ!

ಗೂಗಲ್‌ನೊಂದಿಗೆ ಕೆಲಸ ಮಾಡುತ್ತಿದ್ದ ಟರ್ಕಿಶ್ ಎಂಜಿನಿಯರ್ Orkut Büyükkökten ಎಂಬುವರು ಈ ಆರ್ಕುಟ್‌ ಅನ್ನುಸ್ಥಾಪನೆ ಮಾಡಿದ್ದರು.  2004 ರಲ್ಲಿ ಆರಂಭವಾದ ಈ ಸಾಮಾಜಿಕ ಜಾಲತಾಣ 2007-08 ರಲ್ಲಿ ವಿಶೇಷವಾಗಿ ಬ್ರೆಜಿಲ್ ಮತ್ತು ಭಾರತದಲ್ಲಿ ವ್ಯಾಪಕವಾಗಿ ಜನಪ್ರಿಯತೆ ಗಳಿಸಿತು. ಆರ್ಕುಟ್ ಆರಂಭವಾದ ವರ್ಷವೇ ಫೇಸ್‌ಬುಕ್ ಕೂಡ ಆರಂಭವಾಗಿತ್ತು.

ಆದರೆ 2014 ರ ಸೆಪ್ಟೆಂಬರ್ 30 ರಂದು ಇದನ್ನು ಬಂದ್ ಮಾಡುವುದಾಗಿ ಘೋಷಣೆ ಮಾಡಲಾಯಿತು. ನಂತರ ಇದರ ಸಂಸ್ಥಾಪಕ ಆರ್ಕುಟ್ Büyükkökten ಹೆಲೋ ಹೆಸರಿನ ಮತ್ತೊಂದು ಸೋಶಿಯಲ್ ಸೈಟ್‌ ಅನ್ನು ಸೃಷ್ಟಿ ಮಾಡಿದರು. ಆದರೆ ಇದು ಆರ್ಕುಟ್‌ನಷ್ಟು ಖ್ಯಾತಿ ಗಳಿಸಲು ಸಾಧ್ಯವಾಗಿಲ್ಲ. 

Follow Us:
Download App:
  • android
  • ios