ಭಾರತ ಹಾಗೂ ದಕ್ಷಿಣ ಏಷ್ಯಾದ ಟ್ವೀಟರ್‌ ಘಟಕದ ಸಾರ್ವಜನಿಕ ನೀತಿ ನಿರೂಪಣೆಗಳ ನಿರ್ದೇಶಕಿ| ಟ್ವೀಟರ್‌ ಇಂಡಿಯಾ ಹಿರಿಯ ಅಧಿಕಾರಿ ಮಹಿಮಾ ರಾಜೀನಾಮೆ

ನವದೆಹಲಿ(ಫೆ.08): ಭಾರತ ಹಾಗೂ ದಕ್ಷಿಣ ಏಷ್ಯಾದ ಟ್ವೀಟರ್‌ ಘಟಕದ ಸಾರ್ವಜನಿಕ ನೀತಿ ನಿರೂಪಣೆಗಳ ನಿರ್ದೇಶಕರಾಗಿದ್ದ ಮಹಿಮಾ ಕೌಲ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

‘ವೈಯಕ್ತಿಕ ಕಾರಣಕ್ಕಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ನೀಡಿದ್ದಾಗ್ಯೂ ಮಹಿಮಾ ಕೌಲ್‌ ಅವರು ಮಾರ್ಚ್‌ವರೆಗೆ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ’ ಎಂದು ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಂಗನಾ ಟ್ವಿಟರ್ ಅಕೌಂಟ್ ಬ್ಯಾನ್ ಮಾಡುವ ಅರ್ಜಿಗೆ 1.29 ಲಕ್ಷ ಜನರ ಸಹಿ

ಆದರೆ, ದಿಲ್ಲಿ ಗಡಿಗಳಲ್ಲಿ ರೈತರ ಪ್ರತಿಭಟನೆಗಳಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಹಾಗೂ ಪ್ರಚೋದನಾತ್ಮಕ ಟ್ವೀಟ್‌ಗಳನ್ನು ಮಾಡಿದ್ದ 250 ಖಾತೆಗಳನ್ನು ರದ್ದುಗೊಳಿಸಬೇಕೆಂಬ ತನ್ನ ಆಜ್ಞೆಯನ್ನು ಪಾಲಿಸದ್ದಕ್ಕೆ ಟ್ವೀಟರ್‌ ವಿರುದ್ಧ ಕೇಂದ್ರ ಸರ್ಕಾರ ಆಕ್ರೋಶ ವ್ಯಕ್ತಪಡಿಸಿತ್ತು.

ಜೊತೆಗೆ ಸರ್ಕಾರದ ಆದೇಶ ಪಾಲಿಸದೇ ಇದ್ದಲ್ಲಿ ಕಾನೂನು ಕ್ರಮ ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿತ್ತು. ಇದರ ಬೆನ್ನಲ್ಲೇ, ಮಹಿಮಾ ರಾಜೀನಾಮೆ ಪ್ರಕಟವಾಗಿದೆ.