Asianet Suvarna News Asianet Suvarna News

ತಿರುಪತಿ: ಜೂ.30ರ ವರೆಗೆ ವಿಐಪಿ ದರ್ಶನ ರದ್ದು, ಕಾರಣ ಇಲ್ಲಿದೆ!

ಇಲ್ಲಿನ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ವಿಐಪಿ ದರ್ಶನವನ್ನು ಜೂ.30ರ ವರೆಗೂ ರದ್ದು ಗೊಳಿಸಲಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್‌ (ಟಿಟಿಡಿ) ಶನಿವಾರ ತಿಳಿಸಿದೆ.

TTD Cancels VIP Darshans till June 30 at Tirumala tirumala temple rav
Author
First Published May 26, 2024, 7:49 AM IST

ತಿರುಪತಿ (ಮೇ.26): ಇಲ್ಲಿನ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ವಿಐಪಿ ದರ್ಶನವನ್ನು ಜೂ.30ರ ವರೆಗೂ ರದ್ದು ಗೊಳಿಸಲಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್‌ (ಟಿಟಿಡಿ) ಶನಿವಾರ ತಿಳಿಸಿದೆ.

ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಮುಗಿದಿದ್ದು, ಬೇಸಿಗೆ ರಜೆ ಕಳೆಯಲು ಬರುತ್ತಾರೆ ಹಾಗೂ ಚುನಾವಣೆ ಕೂಡ ಮುಕ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ತಿಮ್ಮಪ್ಪನ ದರ್ಶನ ಪಡೆಯಲು ಬರುತ್ತಿರುವ ಭಕ್ತಾದಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. 

ಆದ್ದರಿಂದ ಪ್ರತಿ ವಾರ ಶುಕ್ರವಾರ, ಶನಿವಾರ ಹಾಗೂ ಭಾನುವಾರ ವಿಐಪಿ ದರ್ಶನವನ್ನು ರದ್ದು ಗೊಳಿಸಿ, ಉಚಿತ ದರ್ಶನಕ್ಕೆ ಅವಕಾಶ ಮಾಡಿಕೊಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಟಿಟಿಡಿ ತಿಳಿಸಿದೆ. ಈ ಅವಧಿಯಲ್ಲಿ ಭಕ್ತರ ದರ್ಶನ ಶಿಫಾರಸು ಪತ್ರಗಳನ್ನು ಸ್ವೀಕರಿಸದಿರಲು ತೀರ್ಮಾನಿಸಿದೆ.

ವಿಮಾನ ರದ್ದು: ತಿರುಪತಿಯಲ್ಲಿ ಬೆಳಗಾವಿ ಪ್ರಯಾಣಿಕರ ಪರದಾಟ

Latest Videos
Follow Us:
Download App:
  • android
  • ios