ಏರ್‌ಪೋರ್ಟ್‌ನಲ್ಲಿ ನಲ್ಲಿ ಮಹಾಂತೇಶ್ ಹಾಗೂ ಸಹ ಪ್ರಯಾಣಿಕರ ಆಕ್ರೋಶ ವ್ಯಕ್ತಪಡಿಸಿದ್ದು, ತಿರುಪತಿ ತಿಮ್ಮಪ್ಪ ದರ್ಶನಕ್ಕೆ ತೆರಳಿದ್ದ ಬೆಳಗಾವಿ ಜಿಲ್ಲೆ ಅಥಣಿ ಮೂಲದ ವಕೀಲ ಸುಭಾಷ್ ನಾಯಕ್, ‌ಬಸಯ್ಯ ಅವರವಾಡ್, ಮಹಾಂತೇಶ, ಮಲ್ಲಪ್ಪ, ಸಂತೋಷ ಸೇರಿ ಒಟ್ಟು 8 ಜನ ಪ್ರಯಾಣಿಕರಿಗೆ ಅನಾನೂಕೂಲವಾಗಿದೆ. 

ಬೆಳಗಾವಿ(ಮೇ.21):  ತಿರುಪತಿ ಏರ್‌ಪೋರ್ಟ್‌ನಲ್ಲಿ ವಿಮಾನ ಸಿಗದೆ ಬೆಳಗಾವಿ ಮೂಲದ ಪ್ರಯಾಣಿಕರ ಪರದಾಟ ನಡೆಸಿದ ಘಟನೆ ಸೋಮವಾರ ನಡೆದಿದೆ‌.

ಇದ್ದಕ್ಕಿದ್ದಂತೆ ವಿಮಾನ ರದ್ದು ಮಾಡಿದ ಸ್ಟಾರ್ ಏರ್‌ಲೈನ್‌ ರಿಸರ್ವೆಶನ್ ಮಾಡಿದ್ದ ವಿಮಾನಯಾನ ರದ್ದಾಗಿದೆ. ಬೆಳಗಾವಿಗೆ ವಾಪಸ್ ಆಗಬೇಕಿದ್ದ ಪ್ರಯಾಣಿಕರು ಪರದಾಟ ನಡೆಸಿದ್ದಾರೆ. ಪ್ರಯಾಣಿಕ ಮಹಾಂತೇಶ್ ಎಂಬುವರ ಮನೆಯಲ್ಲಿ ಕುಟುಂಬ ಸದಸ್ಯರೊಬ್ಬರು ನಿಧನರಾಗಿದ್ದಾರೆ‌. ಹೀಗಾಗಿ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಬೇಕಿತ್ತು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶೇಗುಣಸಿ ಮೂಲದ ಮಹಾಂತೇಶ್ ವಾಪಸ್ ಊರಿಗೆ ಬರಲು ವಿಮಾನದ ಟಿಕೆಟ್‌ ಬುಕ್ ಮಾಡಿದ್ದರು. ಆದರೆ ಏಕಾಏಕಿ ಸ್ಟಾರ್ ಏರ್‌ಲೈನ್ಸ್ ವಿಮಾನ ಹಾರಾಟ ರದ್ದು ಮಾಡಿದ್ದರಿಂದ ಮಹಾಂತೇಶ್ ಅವರಿಗೆ ತೀವ್ರ ತೊಂದರೆಯಾಗಿದೆ.

ಸುಳ್ಳು ಹೇಳುವುದೇ ಬಿಜೆಪಿಯವರ ಸಾಧನೆ: ಶಾಸಕ ಲಕ್ಷ್ಮಣ ಸವದಿ ಲೇವಡಿ