ಜಾತಿ ಆಧಾರದಲ್ಲಿ ದೇಶ ವಿಭಜನೆಗೆ ಯತ್ನ: ಬಿಹಾರ ಜಾತಿ ಸಮೀಕ್ಷೆ ಬಿಡುಗಡೆ ಬೆನ್ನಲ್ಲೇ ಮೋದಿ ಸಿಡಿಮಿಡಿ

ವಿಪಕ್ಷಗಳು ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಮಾಡುವಲ್ಲಿ ಸೋತಿದ್ದಾರೆ. ಆದರೆ ಈಗ ಬಡವರ ಭಾವನೆಗಳ ಜೊತೆ ಆಟವಾಡುತ್ತಿದ್ದಾರೆ. ಜಾತಿಯ ಆಧಾರದಲ್ಲಿ ಯಾವುದೇ ವಿಭಜನೆ ಮಾಡುವುದು ಪಾಪ ಎಂದು ಮೋದಿ ಹೇಳಿದರು. 

trying to divide country pm modi after bihar releases caste survey report congress demands nationwide survey ash

ನವದೆಹಲಿ (ಅಕ್ಟೋಬರ್ 3, 2023): ‘ವಿಪಕ್ಷಗಳು ಜಾತಿ ಆಧಾರದಲ್ಲಿ ದೇಶ ವಿಭಜನೆಗೆ ಯತ್ನಿಸುತ್ತಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಆರೋಪಿಸಿದ್ದಾರೆ. ಬಿಹಾರ ಜಾತಿ ಸಮೀಕ್ಷಾ ವರದಿ ಬಿಡುಗಡೆಯಾದ ಬೆನ್ನಲ್ಲೇ ಈ ಹೇಳಿಕೆ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಚುನಾವಣಾ ಹೊಸ್ತಿಲಲ್ಲಿರುವ ಮಧ್ಯಪ್ರದೇಶದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ವಿಪಕ್ಷಗಳು ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಮಾಡುವಲ್ಲಿ ಸೋತಿದ್ದಾರೆ. ಆದರೆ ಈಗ ಬಡವರ ಭಾವನೆಗಳ ಜೊತೆ ಆಟವಾಡುತ್ತಿದ್ದಾರೆ. ಈ ಮೊದಲು ಸಹ ಅವರು ಜಾತಿಯ ಆಧಾರದಲ್ಲಿ ದೇಶವನ್ನು ಭಾಗ ಮಾಡಿದ್ದರು. ಇಂದೂ ಸಹ ಇದೇ ಪಾಪವನ್ನು ಮಾಡುತ್ತಿದ್ದಾರೆ. ಮೊದಲು ಸಹ ಭ್ರಷ್ಟಾಚಾರ ಎಸಗಿದ್ದರು. ಈಗ ಇನ್ನೂ ಹೆಚ್ಚು ಭ್ರಷ್ಟರಾಗಿದ್ದಾರೆ. ಜಾತಿಯ ಆಧಾರದಲ್ಲಿ ಯಾವುದೇ ವಿಭಜನೆ ಮಾಡುವುದು ಪಾಪ ಎಂದು ಹೇಳಿದರು.

ಇದನ್ನು ಓದಿ: ಮೋದಿ ಕರೆಗೆ ಒಗ್ಗೂಡಿದ ಜನತೆ: ದೇಶದ 6.4 ಲಕ್ಷ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನ; ಆಂದೋಲನದಲ್ಲಿ ಭಾಗಿಯಾದ ಪ್ರಧಾನಿ

ಇದಕ್ಕೂ ಮೊದಲು ಮಧ್ಯಪ್ರದೇಶದಲ್ಲಿ ಮಾತನಾಡಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ನಾವು ಅಧಿಕಾರಕ್ಕೆ ಬಂದರೆ ದೇಶಾದ್ಯಂತ ಜಾತಿ ಗಣತಿ ನಡೆಸುವುದಾಗಿ ಹೇಳಿದ್ದರು.

ಕರ್ನಾಟಕ, ಬಿಹಾರ ರೀತಿ ದೇಶಾದ್ಯಂತ ಜಾತಿಗಣತಿ ನಡೆಸಿ: ಕಾಂಗ್ರೆಸ್‌ ಆಗ್ರಹ
ಸಾಮಾಜಿಕ ನ್ಯಾಯವನ್ನು ಕಲ್ಪಿಸಲು ಜಾತಿ ಗಣತಿಯಿಂದ ಮಾತ್ರ ಸಾಧ್ಯ ಎಂದು ಹೇಳಿರುವ ಕಾಂಗ್ರೆಸ್‌, ಕರ್ನಾಟಕ ಮತ್ತು ಬಿಹಾರ ರಾಜ್ಯಗಳ ರೀತಿ ದೇಶಾದ್ಯಂತ ಜಾತಿ ಗಣತಿ ನಡೆಸಬೇಕು ಎಂದು ಕೇಂದ್ರ ಸರ್ಕಾರವನ್ನು ಸೋಮವಾರ ಒತ್ತಾಯಿಸಿದೆ.

ವಾಜಪೇಯಿ ಕಲಿಸಿದ ಚದುರಂಗದಾಟ ಆಡಿದ್ರಾ ಪ್ರಧಾನಿ..? ಜಗತ್ತು ಗೆಲ್ಲೋಕೆ ಮೋದಿ ಬಳಿ ಅಟಲ್ ಸೂತ್ರ!

ಬಿಹಾರ ಜಾತಿಗಣತಿ ವರದಿ ಬಿಡುಗಡೆಯಾದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಪಕ್ಷ, ಸಾಮಾಜಿಕ ನ್ಯಾಯ ಒದಗಿಸಲು, ಸಾಮಾಜಿಕ ಸಬಲೀಕರಣ ಕಾರ್ಯಕ್ರಮಗಳನ್ನು ಕೈಗೊಳ್ಳಲು ಜಾತಿ ಗಣತಿ ಸಹಾಯ ಒದಗಿಸಲಿದೆ ಎಂದು ಹೇಳಿದೆ. ಈ ಕುರಿತಾಗಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ, ಬಿಹಾರದ ಜಾತಿ ಗಣತಿಯಿಂದ ರಾಜ್ಯದಲ್ಲಿರುವ ಶೇ.84ರಷ್ಟು ಮಂದಿ ಹಿಂದುಳಿದ ವರ್ಗ, ಪ. ಜಾತಿ ಮತ್ತು ಪಂಗಡಕ್ಕೆ ಸೇರಿದವರು ಎಂಬುದು ತಿಳಿದುಬಂದಿದೆ. ಇದೀಗ ಅವರ ಪ್ರಮಾಣದ ಆಧಾರದಲ್ಲಿ ಅವರ ಪಾಲನ್ನು ನೀಡಬಹುದಾಗಿದೆ. ಕೇಂದ್ರ ಸರ್ಕಾರದ 90 ಕಾರ್ಯದರ್ಶಿಗಳಲ್ಲಿ ಮೂವರು ಮಾತ್ರ ಓಬಿಸಿಗಳಾಗಿದ್ದಾರೆ. ಇವರು ಭಾರತದ ಬಜೆಟ್‌ನ ಶೇ.5ರಷ್ಟನ್ನು ಮಾತ್ರ ನಿರ್ವಹಣೆ ಮಾಡುತ್ತಿದ್ದಾರೆ. ಹೀಗಾಗಿ ದೇಶದ ಜಾತಿ ಸಂಖ್ಯೆಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ’ ಎಂದು ಹೇಳಿದ್ದಾರೆ.

‘ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಜಾತಿ ಗಣತಿ ನಡೆಸಿತ್ತು. ಆದರೆ ಮೋದಿ ಸರ್ಕಾರ ಅದನ್ನು ಬಿಡುಗಡೆ ಮಾಡಲಿಲ್ಲ. ಬಿಹಾರ ಇದೀಗ ತಾನು ನಡೆಸಿದ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಿದೆ. ಈ ಮೊದಲು ಕರ್ನಾಟಕದಲ್ಲೂ ಜಾತಿ ಗಣತಿ ನಡೆಸಲಾಗಿತ್ತು. ಇದೇ ರೀತಿ ದೇಶಾದ್ಯಂತ ಜಾತಿ ಗಣತಿ ನಡೆಸಬೇಕು ಎಂದು ಕಾಂಗ್ರೆಸ್‌ ಆಗ್ರಹಿಸುತ್ತದೆ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಹೊಯ್ಸಳ ದೇಗುಲಗಳಿಗೆ ವಿಶ್ವ ಮಾನ್ಯತೆ: ಮನ್‌ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ ಮೆಚ್ಚುಗೆ

Latest Videos
Follow Us:
Download App:
  • android
  • ios