Asianet Suvarna News Asianet Suvarna News

ಕರ್ನಾಟಕದ ಹೊಯ್ಸಳ ದೇಗುಲಗಳಿಗೆ ವಿಶ್ವ ಮಾನ್ಯತೆ: ಮನ್‌ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ ಮೆಚ್ಚುಗೆ

ಕರ್ನಾಟಕದ ಹೊಯ್ಸಳ ದೇಗುಲಗಳಿಗೆ ಯುನೆಸ್ಕೋ ಮಾನ್ಯತೆ ಅಥವಾ ವಿಶ್ವ ಪಾರಂಪರಿಕ ತಾಣದ ಪಟ್ಟಿಗೆ ಮಾನ್ಯತೆ ದೊರೆತಿರುವುದಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

modi mann ki baat september pm talks about hoysala temples getting unesco recognition ash
Author
First Published Sep 24, 2023, 12:20 PM IST

ನವದೆಹಲಿ (ಸೆಪ್ಟೆಂಬರ್ 24, 2023): ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್‌ ಕೀ ಬಾತ್‌ನ 105 ನೇ ಸಂಚಿಕೆಯನ್ನು ಉದ್ದೇಶಿಸಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ, ಪ್ರಧಾನಿ ಮೋದಿ ಇಸ್ರೋ ಚಂದ್ರಯಾನ - 3 ಯಶಸ್ಸು ಹಾಗೂ ಜಿ - 20 ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, ಕರ್ನಾಟಕದ ಹೊಯ್ಸಳ ದೇಗುಲಗಳಿಗೆ ಯುನೆಸ್ಕೋ ಮಾನ್ಯತೆ ಅಥವಾ ವಿಶ್ವ ಪಾರಂಪರಿಕ ತಾಣದ ಪಟ್ಟಿಗೆ ಮಾನ್ಯತೆ ದೊರೆತಿರುವುದಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಇಂದು ಸೆಪ್ಟೆಂಬರ್ ತಿಂಗಳ ಕೊನೆಯ ಭಾನುವಾರ ಅದ್ದರಿಂದ ಮೋದಿ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್‌ ಕೀ ಬಾತ್‌ನಲ್ಲಿ ಮಾತನಾಡಿದ್ದಾರೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ಮಿಷನ್ ಲ್ಯಾಂಡಿಂಗ್ ಸಮಯದಲ್ಲಿ 80 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದ ವಿಡಿಯೋವನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ. "ಚಂದ್ರಯಾನ 3 ರ ಲ್ಯಾಂಡರ್ ಚಂದ್ರನ ಮೇಲೆ ಇಳಿಯಲಿರುವಾಗ, ಕೋಟಿಗಟ್ಟಲೆ ಜನರು ಈ ಘಟನೆಯ ಪ್ರತಿಯೊಂದು ಕ್ಷಣವನ್ನು ವಿವಿಧ ಮಾಧ್ಯಮಗಳ ಮೂಲಕ ಏಕಕಾಲದಲ್ಲಿ ವೀಕ್ಷಿಸುತ್ತಿದ್ದರು. #ISRO ಯ ಯೂಟ್ಯೂಬ್ ಲೈವ್ ಚಾನೆಲ್‌ನಲ್ಲಿ 80 ಲಕ್ಷಕ್ಕೂ ಹೆಚ್ಚು ಜನರು ಈ ಘಟನೆಯನ್ನು ವೀಕ್ಷಿಸಿದ್ದಾರೆ ಎಂದು ಮೋದಿ ಹೇಳಿದರು. ಆಗಸ್ಟ್ 23 ರಂದು ಪ್ರಗ್ಯಾನ್ ರೋವರ್ ಜೊತೆಗೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್‌ ಲ್ಯಾಂಡಿಂಗ್ ಮಾಡಿದ್ದು, ಆ ದಿನವನ್ನು 'ರಾಷ್ಟ್ರೀಯ ಬಾಹ್ಯಾಕಾಶ ದಿನ' ಎಂದು ಘೋಷಿಸಲಾಗಿದೆ. ಇನ್ನು, ಜಿ20 ಪ್ರತಿಯೊಬ್ಬ ಭಾರತೀಯನ ಸಂತೋಷವನ್ನು ದ್ವಿಗುಣಗೊಳಿಸಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನು ಓದಿ: Mann ki baat: ಚಂದ್ರಯಾನ ಮಿಷನ್ ನವ ಭಾರತದ ಸ್ಪೂರ್ತಿ, ನಾರಿ ಶಕ್ತಿಯ ಜೀವಂತ ಉದಾಹರಣೆ: ಪ್ರಧಾನಿ ಮೋದಿ

ಅಲ್ಲದೆ, ಮುಂಬರುವ ‘ವರ್ಡ್ ಟೂರಿಸಂ ಡೇ’ ಕುರಿತು ಮೋದಿ ಪ್ರಸ್ತಾಪಿಸಿದ್ದಾರೆ. ಸೆಪ್ಟೆಂಬರ್ 27ರಂದು ವಿಶ್ವ ಪ್ರವಾಸೋದ್ಯಮ ದಿನ'. ಕೆಲವರು ಪ್ರವಾಸೋದ್ಯಮವನ್ನು ಪ್ರವಾಸ ಮತ್ತು ಪ್ರಯಾಣದ ಸಾಧನವಾಗಿ ನೋಡುತ್ತಾರೆ, ಆದರೆ ಪ್ರವಾಸೋದ್ಯಮದ ಅತ್ಯಂತ ದೊಡ್ಡ ಅಂಶವು ಉದ್ಯೋಗಕ್ಕೆ ಸಂಬಂಧಿಸಿದೆ ಎಂದು ಈ ವೇಳೆ ಮೋದಿ ಹೇಳಿದ್ದಾರೆ. ಈ ಮಧ್ಯೆ,  ಭಾರತೀಯ ಸಂಸ್ಕೃತಿಯ ಉತ್ಸಾಹಿ ಜರ್ಮನ್ ಯುವತಿ ಕ್ಯಾಸ್ಸಂಡ್ರಾ ಮೇ ಭಾರತೀಯ ಹಾಡು ಹಾಡುವುದನ್ನು ಪ್ರಶಂಸಿಸಿದ್ದು, ಆಕೆ ಹಾಡಿರುವ 2 ಭಾರತೀಯ ಹಾಡನ್ನು ಮನ್‌ ಕೀ ಬಾತ್‌ನಲ್ಲಿ ಪ್ಲೇ ಮಾಡಲಾಯ್ತು. 

ಕರ್ನಾಟಕದ ಹೊಯ್ಸಳ ದೇಗುಲಗಳಿಗೆ ಯುನೆಸ್ಕೋ ವಿಶ್ವ ಪಾರಂಪರಿಕ ತಾಣವೆಂದು ಮಾನ್ಯತೆ ನೀಡಿರುವ ಬಗ್ಗೆಯೂ ಮೋದಿ ಪ್ರಸ್ತಾಪಿಸಿದ್ದು, ಶ್ಲಾಘಿಸಿದ್ದಾರೆ. ಈ ದೇಗುಲಗಳ ಅದ್ಭುತ ಶಿಲ್ಪಕಲೆ 13ನೇ ಶತಮಾನದ್ದಾಗಿದ್ದು, ಇದಕ್ಕೆ ಯುನೆಸ್ಕೋ ಮಾನ್ಯತೆ ನೀಡಿದೆ. ಇದು ಭಾರತದ ದೇವಾಲಯ ನಿರ್ಮಾಣಕ್ಕೆ ಗೌರವವನ್ನು ಸೂಚಿಸುತ್ತದೆ ಎಂದೂ ಮೋದಿ ಹೇಳಿದ್ದಾರೆ. 

ಇದನ್ನೂ ಓದಿ: Mann Ki Baat: ಹುತಾತ್ಮರ ಸ್ಮರಣೆಗೆ ಶೀಘ್ರದಲ್ಲೇ 'ಮೇರಿ ಮಾತಿ ಮೇರಾ ದೇಶ್' ಅಭಿಯಾನ: ಮೋದಿ ಘೋಷಣೆ
 
'G20 ವಿಶ್ವವಿದ್ಯಾಲಯ ಸಂಪರ್ಕ ಕಾರ್ಯಕ್ರಮ'
ಐಐಟಿ, ಐಐಎಂ, ಎನ್‌ಐಟಿ ಮತ್ತು ವೈದ್ಯಕೀಯ ಕಾಲೇಜುಗಳಂತಹ ಅನೇಕ ಪ್ರತಿಷ್ಠಿತ ಸಂಸ್ಥೆಗಳು ಜಿ20 ಯೂನಿವರ್ಸಿಟಿ ಕನೆಕ್ಟ್ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ ಎಂದು ಮನ್ ಕಿ ಬಾತ್‌ನ 105ನೇ ಸಂಚಿಕೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ. “#G20 ಸಮಯದಲ್ಲಿ ಭಾರತದ ಯುವ ಶಕ್ತಿಯು ಈ ಘಟನೆಯೊಂದಿಗೆ ತನ್ನನ್ನು ತಾನು ಸಂಯೋಜಿಸಿಕೊಂಡ ರೀತಿಯಲ್ಲಿ ವಿಶೇಷ ಉಲ್ಲೇಖದ ಅಗತ್ಯವಿದೆ. ವರ್ಷವಿಡೀ ಜಿ-20ಗೆ ಸಂಬಂಧಿಸಿದ ಕಾರ್ಯಕ್ರಮಗಳು ದೇಶದ ಹಲವು ವಿಶ್ವವಿದ್ಯಾಲಯಗಳಲ್ಲಿ ನಡೆದಿವೆ ಎಂದು ಪ್ರಧಾನಿ ಪ್ರಸ್ತಾಪಿಸಿದ್ದಾರೆ. 

"ಕಳೆದ ಕೆಲವು ವರ್ಷಗಳಲ್ಲಿ, ದೇಶದಲ್ಲಿ, ಸಿಂಹಗಳು, ಹುಲಿಗಳು, ಚಿರತೆಗಳು ಮತ್ತು ಆನೆಗಳ ಸಂಖ್ಯೆಯಲ್ಲಿ ಶ್ಲಾಘನೀಯ ಏರಿಕೆ ಕಂಡುಬಂದಿದೆ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇನ್ನು, ಮುಂಬರುವ ಹಬ್ಬದ ಋತುವಿನಲ್ಲಿ 'ಲೋಕಲ್ ಫಾರ್ ವೋಕಲ್' ಅನ್ನು ಪರಿಗಣಿಸುವಂತೆ ಮೋದಿ ನಾಗರಿಕರಿಗೆ ಮನವಿ ಮಾಡಿದ್ದಾರೆ. “ನಮ್ಮ ದೇಶದಲ್ಲಿ ಹಬ್ಬಗಳ ಕಾಲ ಆರಂಭವಾಗಿದೆ. ನೀವೆಲ್ಲರೂ ಮನೆಯಲ್ಲಿ ಹೊಸದನ್ನು ಖರೀದಿಸಲು ಯೋಜಿಸುತ್ತಿರಬಹುದು. ನವರಾತ್ರಿಯ ಸಮಯದಲ್ಲಿ ಮಂಗಳಕರ ಕೆಲಸವನ್ನು ಪ್ರಾರಂಭಿಸಲು ಕಾಯುತ್ತಿರುತ್ತಾರೆ. ಈ ಉತ್ಸಾಹದ ವಾತಾವರಣದಲ್ಲಿ, ನೀವು ‘ವೋಕಲ್ ಫಾರ್ ಲೋಕಲ್’ ಎಂಬ ಮಂತ್ರವನ್ನು ನೆನಪಿಸಿಕೊಳ್ಳಬೇಕು” ಎಂದು ಪ್ರಧಾನಿ ಮೋದಿ ತಮ್ಮ 105ನೇ ಮನ್‌ ಕೀ ಬಾತ್‌ನಲ್ಲಿ ಹೇಳಿದ್ದಾರೆ. 

ಇದನ್ನೂ ಓದಿ: Mann Ki Baat: ತುರ್ತು ಪರಿಸ್ಥಿತಿ ಭಾರತ ಇತಿಹಾಸದ ಕರಾಳ ದಿನ; ಸಂವಿಧಾನವೇ ಸರ್ವೋಚ್ಚ: ಪ್ರಧಾನಿ ಮೋದಿ

Follow Us:
Download App:
  • android
  • ios