ಬಾಂಗ್ಲಾ ವಿಮೋಚನೆಗೆ ಮೋದಿ ಸತ್ಯಾಗ್ರಹ ಸತ್ಯ; ಟೀಕಿಸಿದವರಿಗೆ ದಾಖಲೆ ಸಮೇತ ಉತ್ತರ!
ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾದೇಶ ಪ್ರವಾಸದಲ್ಲಿದ್ದಾರೆ. ಬಾಂಗ್ಲಾ ವಿಮೋಚನೆ ಹಾಗೂ ಶೇಖ್ ಮುಜಿಬುರ್ ರೆಹಮಾನ್ ಜನ್ಮಶತಮಾನೋತ್ಸವದಲ್ಲಿ ಪಾಲ್ಗೊಂಡ ಮೋದಿ, 50 ವರ್ಷದ ಹಿಂದಿನ ಘಟನೆ ಬಿಚ್ಚಿಟ್ಟಿದ್ದರು. ಆದರೆ ಅಷ್ಟೇ ವೇಗದಲ್ಲಿ ಮೋದಿ ಯಾವ ಸತ್ಯಾಗ್ರಹವೂ ನಡೆಸಿಲ್ಲ. ಭಾರತದಲ್ಲಿ ಸುಳ್ಳು ಹೇಳಿದ ಮೋದಿ ಇದೀಗ ಬಾಂಗ್ಲಾದಲ್ಲಿ ಮುಂದುವರಿಸಿದ್ದಾರೆ ಎಂದು ಟೀಕಿಸಿದ್ದರು. ಆದರೆ ಟೀಕಿಸಿದವರು ಇದೀಗ ನಾಪತ್ತೆಯಾಗಿದ್ದಾರೆ.
ಢಾಕಾ(ಮಾ.26): ಬಾಂಗ್ಲಾದೇಶ ಸ್ವಾತಂತ್ರ್ಯ ಸಂಭ್ರಮದ 50ನೇ ವರ್ಷಾಚರಣೆ ಹಾಗೂ ಶೇಕ್ ಮುಜೀಬುರ್ ರಹೆಮಾನ್ ಜನ್ಮಶತಮಾನೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾದೇಶಕ್ಕೆ ತೆರಳಿದ್ದಾರೆ. ಬಾಂಗ್ಲಾ ಪ್ರವಾಸದಲ್ಲಿ ಮೋದಿ 1971ರ ಯುದ್ಧದಲ್ಲಿ ಮಡಿದ ವೀರ ಯೋಧರಿಗೆ ಗೌರವ ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಮೋದಿ ಬಾಂಗ್ಲಾ ವಿಮೋಚನೆ ವೇಳೆ ನಡೆಸಿದ ಸತ್ಯಾಗ್ರಹ ನನ್ನ ರಾಜಕೀಯ ಜೀವನದ ಮೊದಲ ಹೋರಾಟ ಎಂದು 50 ವರ್ಷ ಹಿಂದಿನ ಘಟನೆ ನೆಪಿಸಿದ್ದರು.
ಬಾಂಗ್ಲಾ ವಿಮೋಚನೆ ಪ್ರತಿಭಟನೆಯಲ್ಲಿ ಜೈಲು ಸೇರಿದ್ದೆ; ಮೊದಲ ಹೋರಾಟ ನೆನಪಿಸಿದ ಮೋದಿ!
ಮೋದಿ ಸತ್ಯಾಗ್ರಹ ಮಾತಿಗೆ ಭಾರತದಲ್ಲಿ ಕೆಲ ಟೀಕೆಗಳು ವ್ಯಕ್ತವಾಗಿತ್ತು.20 ರಿಂದ 22 ವರ್ಷದವನಿದ್ದಾಗ ಬಾಂಗ್ಲಾ ವಿಮೋಚನೆಗೆ ಸತ್ಯಾಗ್ರಹ ಮಾಡಿ ಜೈಲು ಸೇರಿದ್ದೆ ಎಂದಿದ್ದರು. ಮೋದಿ ಇದೇ ಮಾತನ್ನು ವಿರೋಧಿಗಳು ಸುಳ್ಳು ಎಂದು ಬಂಬಿಸಿದ್ದರು. ಈ ರೀತಿಯಾ ಯಾವುದೇ ಸತ್ಯಾಗ್ರಹ ಭಾರತದಲ್ಲಿ ನಡೆದಿಲ್ಲ. ಅಷ್ಟೇ ಅಲ್ಲ ಬಾಂಗ್ಲಾ ವಿಮೋಚನೆಗಾಗಿ ಭಾರತದಲ್ಲಿ ಯಾರು ಬಂಧಿಸಲ್ಪಟ್ಟಿಲ್ಲ ಎಂಬ ಟೀಕೆಗಳು ವ್ಯಕ್ತವಾಗಿತ್ತು.
ಬಾಂಗ್ಲಾದೇಶ ಯವಕರಿಗೆ ಸ್ವರ್ಣ ಜಯಂತಿ ವಿದ್ಯಾರ್ಥಿ ವೇತನ ಘೋಷಿಸಿದ ಮೋದಿ!.
ಆದರೆ 50 ವರ್ಷ ಹಿಂದೆ ಬಾಂಗ್ಲಾದೇಶವನ್ನು ಪಾಕಿಸ್ತಾನ ಕಪಿಮುಷ್ಠಿಯಿಂದ ಸ್ವತಂತ್ರಗೊಳಿಸಲು ಭಾರತೀಯ ಜನ ಸಂಘ(RSS) ಸತ್ಯಾಗ್ರಹ ನಡೆಸಿತ್ತು. ಸುಮಾರು 1000 ಹೆಚ್ಚು ಮಂದಿಯನ್ನು ಬಂಧನ ಮಾಡಲಾಗಿತ್ತು. ಈ ಕುರಿತು ಅಂದಿನ ಪತ್ರಿಕೆಗಳಲ್ಲಿ ಬಂದ ವರದಿಗಳು ಇದೀಗ ವೈರಲ್ ಆಗಿದೆ.
ಸತ್ಯ ಹೊರಬೀಳುತ್ತಿದ್ದಂತೆ ಇದೀಗ ಟೀಕಿಸಿದ ಮಂದಿ ನಾಪತ್ತೆಯಾಗಿದ್ದಾರೆ. ಮೋದಿ ಮಾತು ಸುಳ್ಳು ಎಂದ ಮಂದಿ ಮುಖಭಂಗಕ್ಕೆ ಒಳಗಾಗಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕೂಡ ಬಾಂಗ್ಲಾದೇಶ ವಿಮೋಚನೆಗಾಗಿ ಸತ್ಯಾಗ್ರಹವನ್ನು ಉಲ್ಲೇಖಿಸಿದ್ದರು. 1978ರಲ್ಲಿ ಬರೆದ ಪುಸ್ತಕದಲ್ಲಿ ಮೋದಿ ಬಾಂಗ್ಲಾದೇಶ ಸತ್ಯಾಗ್ರಹ ಸಮಯದಲ್ಲಿ ತಿಹಾರ್ ಜೈಲಿಗೆ ಹೋದ ಕುರಿತು ಉಲ್ಲೇಖಿಸಲಾಗಿದೆ.
ಪ್ರಧಾನಿ ಮೋದಿ ಬಾಂಗ್ಲಾದೇಶ ಭೇಟಿ ಇದೀಗ ಉಭಯ ದೇಶದಲ್ಲಿ ಸಂಚಲನ ಮೂಡಿಸಿದೆ. ಕೋರೋನಾ ವಕ್ಕರಿಸಿದ ಬಳಿಕ ಮೋದಿ ಕೈಗೊಂಡ ಮೊದಲ ವಿದೇಶ ಪ್ರವಾಸ ಇದಾಗಿದೆ. ಇಷ್ಟೇ ಅಲ್ಲ ಈ ಪ್ರವಾಸ ಪಶ್ಚಿಮ ಬಂಗಾಳ ಚುನಾವಣೆ ಮೇಲೂ ಪರಿಣಾಮ ಬೀರಲಿದೆ ಅನ್ನೋ ಮಾತುಗಳು ಕೇಳಿ ಬಂದಿದೆ.