ಬಾಂಗ್ಲಾದೇಶ ಯವಕರಿಗೆ ಸ್ವರ್ಣ ಜಯಂತಿ ವಿದ್ಯಾರ್ಥಿ ವೇತನ ಘೋಷಿಸಿದ ಮೋದಿ!
2 ದಿನದ ಬಾಂಗ್ಲಾದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಶೇಕ್ ಮುಜೀಬುರ್ ರೆಹಮಾನ್ ಜನ್ಮ ಶತಮಾನೋತ್ಸವ, ಬಾಂಗ್ಲಾ ವಿಮೋಚನೆ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾಷಣ ಮಾಡಿದ ಮೋದಿ ಮಹತ್ವದ ಘೋಷಣೆ ಮಾಡಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿವೆ.
ಢಾಕಾ(ಮಾ.26): ಭಾರತ ಹಾಗೂ ಬಾಂಗ್ಲಾದೇಶ ನಡುವಿನ ರಾಜತಾಂತ್ರಿಕ ಸಂಬಂಧ 50 ವರ್ಷ ಪೂರೈಸಿದೆ. ಈ ಹಿನ್ನಲೆಯಲ್ಲಿ ಬಾಂಗ್ಲಾದೇಶದ 50 ಉದ್ಯಮಿಗಳನ್ನು ಭಾರತಕ್ಕೆ ಭೇಟಿ ನೀಡಲು ಆಹ್ವಾನ ನೀಡಿದ್ದಾರೆ. ಇದರೊಂದಿಗೆ ವಿಶ್ವವನ್ನೇ ವ್ಯಾಪಿಸುತ್ತಿರುವ ಸ್ಟಾರ್ಟ್ಅಪ್ ಜೊತೆ ಸೇರಿಕೊಳ್ಳಿ ಎಂದಿದ್ದಾರೆ. ಇದೇ ವೇಳೆ ಬಾಂಗ್ಲಾದೇಶದ ಯುವಕರಿಗೆ ಸ್ವರ್ಣ ಜಯಂತಿ ವಿದ್ಯಾರ್ಥಿವೇತನವನ್ನು ಮೋದಿ ಘೋಷಿಸಿದ್ದಾರೆ.
ಪ್ರಧಾನಿ ಮೋದಿ ಗುಣಗಾನ ಮಾಡಿದ ಬಾಂಗ್ಲಾ ಕ್ರಿಕೆಟಿಗ ಶಕೀಬ್ ಅಲ್ ಹಸನ್
ಶೇಖ್ ಮುಜಿಬುರ್ ಜನ್ಮ ಶತಮಾನೋತ್ಸವ, ಬಾಂಗ್ಲಾದೇಶ ವಿಮೋಚನಾ ಸಂಭ್ರಮಕ್ಕೆ 50 ವರ್ಷ ಸಂದ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾದೇಶಕ್ಕೆ 2ದಿನ ಪ್ರವಾಸ ಕೈಗೊಂಡಿದ್ದಾರೆ. ಬಾಂಗ್ಲಾ ಪ್ರವಾಸದಲ್ಲಿ ಮೋದಿ ಮಾಡಿದ ಮೊದಲ ಭಾಷಣದಲ್ಲಿ ಹಲವು ಪ್ರಮುಖ ವಿಚಾರಗಳ ಕುರಿತು ಬೆಳಕು ಚೆಲ್ಲಿದ್ದಾರೆ.
ಭಯೋತ್ಪಾದನೆ, ಕೋವಿಡ್ -19 ಸಾಂಕ್ರಾಮಿಕ, ರಾಜತಾಂತ್ರಿಕ ಮತ್ತು ವ್ಯಾಪಾರ ಸರಿದಂತೆ ಉಭಯ ದೇಶಗಳ ನಡುವಿನ ಸಂಬಂಧ ಕುರಿತು ಮೋದಿ ಮಾತನಾಡಿದರು. ಅಭಿವೃದ್ಧಿ ಪಥದಲ್ಲಿ ಭಾರತ ಮತ್ತು ಬಾಂಗ್ಲಾದೇಶ ಒಟ್ಟಾಗಿ ಕೆಲಸ ಮಾಡುವುದು ಮುಖ್ಯವಾಗಿದೆ ಎಂದು ಮೋದಿ ಹೇಳಿದ್ದಾರೆ.
ಭಾರತ ತಯಾರಿಸಿದ ಕೊರೋನಾ ಲಸಿಕೆ ಬಾಂಗ್ಲಾದೇಶ ಜನರು ಬಳಸುತ್ತಿದ್ದಾರೆ ಎಂದು ಹೇಳಲು ಸಂತೋಷವಾಗುತ್ತಿದೆ. ಇದೇ ರೀತಿ ವ್ಯಾಪಾರ ಹಾಗೂ ವಾಣಿಜ್ಯ ಕ್ಷೇತ್ರದಲ್ಲಿ ಇದೇ ರೀತಿಯ ಅವಕಾಶಗಳು ಭಾರತ ಹಾಗೂ ಬಾಂಗ್ಲಾದೇಶದ ಮುಂದಿದೆ ಎಂದು ಮೋದಿ ಹೇಳಿದರು.