Asianet Suvarna News Asianet Suvarna News

ಆಡಳಿತದ ಬಗ್ಗೆ ದೂರು; ಉತ್ತರಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ!

ಉತ್ತರಖಂಡ ಮುಖ್ಯಮಂತ್ರಿ ತ್ರೀವೇಂದ್ರ ಸಿಂಗ್ ರಾವತ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಇನ್ನೂ ಒಂದು ವರ್ಷ ಅಧಿಕಾರವದಿ ಬಾಕಿ ಇರುವಾಗಲೇ ಮತ್ತೊರ್ವ ಸಿಎಂ ಆಯ್ಕೆಗೆ ಬಿಜೆಪಿ ಮುಂದಾಗಿದೆ

Trivendra Singh Rawat resigns as chief minister of Uttarakhand ckm
Author
Bengaluru, First Published Mar 9, 2021, 5:21 PM IST

ಉತ್ತರಖಂಡ(ಮಾ.09): ಶಾಸಕರ, ಸಚಿವರು ತಿರುಗಿ ಬಿದ್ದ ಹಿನ್ನಲೆಯಲ್ಲಿ ಉತ್ತರಖಂಡ ಮುಖ್ಯಮಂತ್ರಿ ತ್ರೀವೇಂದ್ರ ಸಿಂಗ್ ರಾವತ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಂದು(ಮಾ.09): ಸಂಜೆ ರಾಜ್ಯಪಾಲ ಬೆಬಿ ರಾಣಿ ಮೌರ್ಯ ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ರಾಜ್ಯಪಾಲರಿಗೆ ರಾಜೀನಾಮೆ ಪತ್ರ ನೀಡಿದ ಬಳಿಕ ಸುದ್ಧಿಗೋಷ್ಠಿ ನಡೆಸಿದ ತೀವೇಂದ್ರ ಸಿಂಗ್ ರಾವತ್, ಉತ್ತರಖಂಡದ ನಾಯಕತ್ವ ಬದಲಾವಣೆಗಾಗಿ ದಾರಿ ಮಾಡಿಕೊಡುತ್ತಿದ್ದೇನೆ. ಹೀಗಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ರಾವತ್ ಹೇಳಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ ಮರುದಿನವೇ ರಾವತ್ ರಾಜೀನಾಮೆ ಸಲ್ಲಿಸಿದ್ದಾರೆ.

ಉತ್ತರಖಂಡ ದುರಂತಕ್ಕೆ ದೇವಿ ಶಾಪ; ಗ್ರಾಮಸ್ಥರು ನೀಡಿದ ಎಚ್ಚರಿಕೆ ನಿಜವಾಯಿತಾ?...

ಉತ್ತರಖಂಡ ಬಿಜೆಪಿ ಸರ್ಕಾರದ ಅವಧಿ ಇನ್ನೂ ಒಂದು ವರ್ಷ ಬಾಕಿ ಇದೆ. ಇದೀಗ ಇನ್ನೊಂದು ವರ್ಷಕ್ಕೆ ಹೊಸ ಸಿಎಂ ಆಯ್ಕೆ ಪ್ರಕ್ರಿಯೆ ನಾಳೆ ನಡೆಯಲಿದೆ. ನಾಳೆ(ಮಾ.10) ಬೆಳಗ್ಗೆ 11 ಗಂಟೆಗೆ ಬಿಜೆಪಿ ಮಹತ್ವದ ಸಭೆ ನಡೆಸಲಿದೆ. ಧನ್ ಸಿಂಗ್ ಮುಂದಿನ ಸಿಎಂ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.

ಬಿಜೆಪಿ ನಾಲ್ಕು ವರ್ಷ ಆಡಳಿತ ನಡೆಸಲು ಅವಕಾಶ ಮಾಡಿಕೊಟ್ಟಿದ್ದೆ. ನಾನು ಯಾವತ್ತು ಮುಖ್ಯಮಂತ್ರಿ ಆಗುತ್ತೇನೆ ಎಂದುಕೊಂಡಿರಲಿಲ್ಲ. ಆದರೆ ಹೈಕಮಾಂಡ್ ನನಗೆ ಸಿಎಂ ಪಟ್ಟ ನೀಡಿತ್ತು. ಇದೀಗ ಒಂದು ವರ್ಷ ಅವಧಿಗೆ ಇತರರಿಗೆ ಅವಕಾಶ ಮಾಡಿಕೊಡಲು ಹೈಕಮಾಂಡ್ ಸೂಚಿಸಿದೆ ಎಂದು ರಾವತ್ ಹೇಳಿದ್ದಾರೆ.

Follow Us:
Download App:
  • android
  • ios