83 ವರ್ಷದ ವೃದ್ಧನ ಹತ್ತಿರ 2 ಲಕ್ಷ ಲಂಚ ತೆಗೆದುಕೊಂಡ ಕಾರ್ಪೋರೇಷನ್ ಆಫೀಸರ್ ಅಮಾನತು
ಮಾಜಿ ಡೆಪ್ಯೂಟಿ ಸ್ಪೀಕರ್ ಅಳಿಯನಿಂದ ನಗರಸಭೆ ಅಧಿಕಾರಿ 2 ಲಕ್ಷ ರೂಪಾಯಿ ಲಂಚ ಪಡೆದಿರೋದು ತನಿಖೆಯಲ್ಲಿ ದೃಢಪಟ್ಟಿದೆ. ಈ ಹಿನ್ನೆಲೆ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ತಿರುವನಂತಪುರಂ: ಆಕ್ಯುಪೆನ್ಸಿ ಸರ್ಟಿಫಿಕೇಟ್‌ಗಾಗಿ 83 ವರ್ಷದ ವೃದ್ಧರಿಂದ ಎರಡು ಲಕ್ಷ ರೂಪಾಯಿ ಲಂಚ ಪಡೆದ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ತಿರುವನಂತಪುರಂ ನಗರಸಭೆಯ ಎಂಜಿನಿಯರಿಂಗ್ ವಿಭಾಗದಲ್ಲಿ ಸೂಪರಿಂಟೆಂಡೆಂಟ್ ಆಗಿದ್ದ ಶಿಬು ಕೆ.ಎಂ. ಅಮಾನತುಗೊಂಡ ಅಧಿಕಾರಿ. ಮಾಜಿ ಡೆಪ್ಯೂಟಿ ಸ್ಪೀಕರ್ ನಫೀಸತ್ ಬೀವಿ ಎಂಬವರ ಸಂಬಂಧಿ ಬಳಿಯಿಂದ ಶಿಬು 2 ಲಕ್ಷ ರೂಪಾಯಿ ಲಂಚ ಪಡೆದುಕೊಂಡಿದ್ದರು. ಶಿಬು ಕೆಎಂ, ಆಟ್ಟಿಪ್ರಾ ವಲಯ ಕಚೇರಿಯಲ್ಲಿ ಚಾರ್ಜ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿದ್ದನು. ನಗರಸಭೆ ಡೆಪ್ಯೂಟಿ ಕಾರ್ಪೊರೇಷನ್ ಕಾರ್ಯದರ್ಶಿಯ ತನಿಖಾ ವರದಿಯ ಆಧಾರದ ಮೇಲೆ ಅಮಾನತುಗೊಳಿಸಿ ಆದೇಶಿಸಲಾಗಿದೆ.
ಶಿಬು ಕೆಎಂ ವಿರುದ್ಧ ಎಂ.ಸೈನುದ್ದೀನ್ ಎಂಬವರು ದೂರು ಸಲ್ಲಿಸಿದ್ದರು. ಎಂ.ಸೈನುದ್ದೀನ್ ಅವರ ಮಡದಿ ಡಾ.ಆರಿಫಾ ಸೈನುದ್ದೀನ್ ಅವರು ಮಾಜಿ ಡೆಪ್ಯೂಟಿ ಸ್ಪೀಕರ್ ನಫೀಸತ್ ಬೀವಿಯವರ ಪುತ್ರಿಯಾಗಿದ್ದಾರೆ. ಆರಿಫಾ ಹೆಸರಿನಲ್ಲಿರುವ ಕಟ್ಟಡದ ಆಕ್ಯುಪೆನ್ಸಿ ಸರ್ಟಿಫಿಕೇಟ್ ನೀಡಲು ಶಿಬು 2 ಲಕ್ಷ ರೂಪಾಯಿ ಲಂಚ ಪಡೆದುಕೊಂಡಿದ್ದರು. ಲಂಚ ಪಡೆದುಕೊಂಡಿರುವ ಬಗ್ಗೆ ಎಂ.ಸೈನುದ್ದೀನ್ ದೂರು ದಾಖಲಿಸಿದ್ದರು.
ಲಂಚದ ಹಣ ಕಮೋಡ್‌ಗೆ ಹಾಕಿ ಫ್ಲಶ್ ಮಾಡಿದ ಅಧಿಕಾರಿ : ಟಾಯ್ಲೆಟ್ ಹೊಂಡದಿಂದ 57 ಸಾವಿರ ತೆಗೆದ ಎಸಿಬಿ
ಲಂಚ ನೀಡಿ ತಿಂಗಳುಗಳು ಕಳೆದರೂ ಎಂ.ಸೈನುದ್ದೀನ್ ಅವರಿಗೆ ಕಟ್ಟಡದ ಆಕ್ಯುಪೆನ್ಸಿ ಸರ್ಟಿಫಿಕೇಟ್ ಸಿಕ್ಕಿರಲಿಲ್ಲ. ತಿಂಗಳುಗಳ ನಂತರ ಕಾರ್ಪೊರೇಷನ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದಾಗ ಪ್ರಮಾಣಪತ್ರ ನೀಡಲಾಗಿದ್ದು, ಲಂಚ ಪಡೆದಿರುವ ವಿಷಯ ಬೆಳಕಿಗೆ ಬಂದಿದೆ. ನಂತರ ಸೆಪ್ಟೆಂಬರ್ 30 ರಂದು ಮೇಯರ್ ಮತ್ತು ಉಪ ಮೇಯರ್‌ಗೆ ದೂರು ನೀಡಲಾಗಿತ್ತು. ಡೆಪ್ಯೂಟಿ ಕಾರ್ಪೊರೇಷನ್ ಕಾರ್ಯದರ್ಶಿ ನಡೆಸಿದ ತನಿಖೆಯ ಆಧಾರದ ಮೇಲೆ ಅಮಾನತು ಮಾಡಲಾಗಿದೆ. ತನಿಖೆಯಲ್ಲಿ ಶಿಬು ಅರ್ಜಿದಾರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಸಂಬಂಧವಿಲ್ಲದ ಫೈಲ್‌ಗಳನ್ನು ಸಹ ಕೇಳಿ ಪಡೆದುಕೊಳ್ಳುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
ಲಂಚ ಪಡೆದ ಆರೋಪವನ್ನು ಶಿಬು ಕೆ.ಎಂ. ನಿರಾಕರಿಸಿದ್ದಾರೆ. ಅಧಿಕಾರಿಯಿಂದ ಗಂಭೀರ ಚ್ಯುತಿ ಮತ್ತು ಶಿಸ್ತು ಉಲ್ಲಂಘನೆ ಮತ್ತು ಕರ್ತವ್ಯ ಲೋಪವಾಗಿದೆ ಎಂಬ ತನಿಖಾ ವರದಿಯ ಆಧಾರದ ಮೇಲೆ ಅಮಾನತು ಮಾಡಲಾಗಿದೆ. ಪ್ರಸ್ತುತ ಆಟ್ಟಿಪ್ರಾ ವಲಯ ಕಚೇರಿಯಲ್ಲಿ ಚಾರ್ಜ್ ಆಫೀಸರ್ ಆಗಿ ಶಿಬು ಕೆ.ಎಂ. ಕಾರ್ಯನಿರ್ವಹಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಉದ್ಯಮಿಗೆ 1.5 ಕೋಟಿ ರೂ. ವಂಚಿಸಿದ 5 ಜಿಎಸ್‌ಟಿ ಅಧಿಕಾರಿಗಳು ಬಂಧನ