ಬೆಂಗಳೂರಿನಲ್ಲಿ ಉದ್ಯಮಿಗೆ 1.5 ಕೋಟಿ ರೂ. ವಂಚಿಸಿದ 5 ಜಿಎಸ್ಟಿ ಅಧಿಕಾರಿಗಳು ಬಂಧನ
ಬೆಂಗಳೂರಿನಲ್ಲಿ ಉದ್ಯಮಿಯೊಬ್ಬರಿಂದ 1.5 ಕೋಟಿ ರೂ. ಲಂಚ ಪಡೆದು ವಂಚಿಸಿದ ಆರೋಪದ ಮೇಲೆ ಐವರು ಜಿಎಸ್ಟಿ ಅಧಿಕಾರಿಗಳನ್ನು ಬಂಧಿಸಲಾಗಿದೆ.
ಬೆಂಗಳೂರು (ಸೆ.11): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೋಟ್ಯಾಂತರ ರೂ. ವ್ಯವಹಾರವನ್ನು ಹೊಂದಿದ್ದ ಉದ್ಯಮಿಯೊಬ್ಬರಿಂದ ಬರೋಬ್ಬರಿ 1.5 ಕೋಟಿ ರೂ. ಲಂಚದ ಹಣ ಪಡೆದು ವಂಚಿಸಿದ್ದ ಐವರು ಗೂಡ್ಸ್ ಅಂಡ್ ಸರ್ವಿಸ್ ಟ್ಯಾಕ್ಸ್ (ಜಿಎಸ್ಟಿ) ಅಧಿಕಾರಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಹೌದು, ಬೆಂಗಳೂರಿನ ಉದ್ಯಮಿಯೊಬ್ಬನಿಗೆ ಜಿಎಸ್ಎಸಿ ಅಧಿಕಾರಿಗಳು 1.5 ಕೋಟಿ ರೂ. ಬೇಡಿಕೆ ಇಟ್ಟಿದ್ದರು. ಈ ಕುರಿತಂತೆ ಉದ್ಯಮಿ ಸ್ಥಳೀಯ ಬೈಯಪ್ಪನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಕಳೆದ ತಿಂಗಳ 31ನೇ ತಾರೀಖು ದಾಖಲಾಗಿದ್ದ ಪ್ರಕರಣದ ದೂರನ್ನು ಆಧರಿಸಿ ಬೈಯಪ್ಪನಹಳ್ಳಿ ಪೊಲೀಸರು ಐವರು ಜಿಎಸ್ಟಿ ಅಧಿಕಾರಿಗಳನ್ನು ಬಂಧಿಸಿದ್ದಾರೆ. ಇಲ್ಲಿ ಜಿಎಸ್ಎಟಿ ಅಧಿಕಾರಿಗಳು ತಾವು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಎಂದು ಹೇಳಿಕೊಮಡು ಉದ್ಯಮಿ ಕೇಶವ್ ಎಂಬಾತನಿಗೆ ಬೆದರಿಕೆ ಹಾಕಿದ್ದರು. ಜೊತೆಗೆ, ನೀವು ಸರ್ಕಾರಕ್ಕೆ ತೆರಿಗೆ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ಇಡಿ ದಾಳಿ ಮಾಡಬಾರದೆಂದರೆ 1.5 ಕೋಟಿ ರೂ. ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು.
Breaking: ವರುಣ್ ಆರಾಧ್ಯನಿಂದ ಮಾಜಿ ಪ್ರಿಯತಮೆಗೆ ಖಾಸಗಿ ವಿಡಿಯೋ ವೈರಲ್ ಮಾಡೋ ಬೆದರಿಕೆ; ದೂರು ದಾಖಲು
ಆದರೆ, ಉದ್ಯಮಿ ಕೇಶವ್ ಹಣ ಕೊಡದಿದ್ದಾಗ ಆತನ ಕಚೇರಿಗೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಮಾಡುವುದಾಗಿ ಉದ್ಯಮಿಯನ್ನ ಕೂಡಿ ಹಾಕಿದ್ದರು. ನೀವು ಕಂಪನಿಯನ್ನ ನಕಲಿಯಾಗಿ ನಡೆಸುತ್ತಿದ್ದೀರಿ. ನಾವು ಇ.ಡಿ ಮತ್ತು ಜಿಎಸ್ ಟಿ ಅಧಿಕಾರಿಗಳು.ಅಕ್ರಮವಾಗಿ ಕಚೇರಿ ನಡೆದಿರೋದು ಗೊತ್ತಾಗಿದೆ. ಹೀಗಾಗಿ ನಿಮ್ಮನ್ನ ಅರೆಸ್ಟ್ ಮಾಡ್ತೀವಿ ಅಂತಾ ಅವರನ್ನು ಕಾರಿನಲ್ಲಿ ಕರೆದೊಯ್ದಿದ್ದರು. ನಂತರ, ಕಚೇರಿಯ ಒಳಗಿಟ್ಟುಕೊಂಡು ಬರೋಬ್ಬರಿ ಒಂದೂವರೆ ಕೋಟಿ ರೂ. ಹಣವನ್ನು ನೀಡಿದರೆ ನಿನ್ನನ್ನು ಬಿಟ್ಟು ಕಳಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಆಗಸ್ಟ್ 30 ರಂದು ಕೇಶವ್ ಮನೆ ಮೇಲೆ ದಾಳಿ ನಡೆಸಿದ್ದ ಜಿಎಸ್ ಟಿ ಮತ್ತು ಇಡಿ ಅಧಿಕಾರಿಗಳು. ಅತಿಕ್ರಮ ಪ್ರವೇಶ ಮಾಡಿ ಮೊಬೈಲ್ ಫೋನ್ ಹಾಗೂ ಕೆಲವು ವಸ್ತುಗಳನ್ನ ತೆಗೆದುಕೊಂಡು ಹೋಗಿದ್ದರು. ನಂತರ ಕೇಶವ್, ಮುಖೇಶ್ ಜೈನ್, ಪವನ್ ತಕ್, ರಾಕೇಶ್ ಮಾಣಕ್ ಚಾಂದನಿ ಅವರನ್ನ ಬಲವಂತವಾಗಿ ಕರೆದೊಯ್ದಿದ್ದಾರೆ. ಬಲವಂತವಾಗಿ ಇಂದಿರಾನಗರಕ್ಕೆ ಕರೆದೊಯ್ದು ಪೋನ್ ಫ್ಲೈಟ್ ಮೋಡ್ ಹಾಕಿಸಿದ್ದ ಅಧಿಕಾರಿಗಳು. ನಂತರ ರೋಷನ್ ಜೈನ್ ಎಂಬಾತನಿಗೆ ಕರೆ ಮಾಡಿಸಿ 3 ಕೋಟಿ ಹಣ ತರಲು ಸೂಚನೆ. ವಾಟ್ಸಪ್ ಕರೆ ಮಾಡಿ ಹಣ ತರಲು ಸೂಚನೆ ನೀಡಿದ್ದರು.
ಆಗಸ್ಟ್ 31 ರಂದು ಬೇರೆ ಬೇರೆ ಕಡೆ ಕರೆದೊಯ್ದಿದ್ದ ಅಧಿಕಾರಿಗಳು, ನಂತರ ರೋಷನ್ ಎಂಬಾತನಿಗೆ ಕರೆ ಮಾಡಿ ಹಣ ತರಲು ಡಿಮಾಂಡ್ ಮಾಡಿದ್ದಾರೆ. ಈ ವೇಳೆ ನಾಲ್ವರ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ 1.5 ಕೋಟಿ ರೂ. ಹಣ ಆರೆಂಜ್ ಮಾಡಿದ ರೋಷನ್. ಮುಖೇಶ್ ಜೈನ್ ವಾಪಸ್ ಕಳುಹಿಸಿ ಹಣ ಸಂಗ್ರಹ ಮಾಡಿಕೊಂಡಿದ್ದಾರೆ. ಜೊತೆಗೆ, ನಾಲ್ವರಿಂದ ಸಹಿ ಪಡೆದು ಮಹಜರು ಕಾಪಿ ಬಿಟ್ಟು ಹೋಗಿದ್ದ ಅಧಿಕಾರಿಗಳು. ಹಲ್ಲೆ, ಬೆದರಿಕೆ, ಹಣ ಪಡೆದ ಬಗ್ಗೆ ದೂರು ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಗೆ ದೂರು. ಪೊಲೀಸರ ತನಿಖೆ ವೇಳೆ ಮೇಲ್ನೋಟಕ್ಕೆ ಅನುಮೋದನೆ ಇಲ್ಲದೆ ದಾಳಿ ನಡೆದಿದ್ದು ಬೆಳಕಿಗೆ ಬಂದಿದೆ. ಡೈರೆಕ್ಟರ್ ಜನರಲ್ ಆಫ್ ಜಿಎಸ್ ಟಿ ಇಂಟಲಿಜೆನ್ಸ್, ಬೆಂಗಳೂರು ವಲಯ ವಿಭಾಗಕ್ಕೆ ಸೇರಿದ ಅಧಿಕಾರಿಗಳು ಇವರಾಗಿದ್ದಾರೆ. ದಾಳಿ ವೇಳೆ ಹಲವಾರು ವಸ್ತುಗಳನ್ನ ಜಪ್ತಿ ಮಾಡಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ಜನ ಸೆಂಟ್ರಲ್ ಜಿಎಸ್ ಟಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಬೆಂಗಳೂರು ಒಂಟಿ ಮಹಿಳೆಯರ ಮೈ ಮುಟ್ಟುತ್ತಿದ್ದ ವಿಕೃತ ಕಾಮುಕ ಬಂಧನ
1) ಸೂಪರಿಂಟೆಂಡೆಂಟ್ ಆಫ್ ಸೆಂಟ್ರಲ್ ಟ್ಯಾಕ್ಸ್, ದಕ್ಷಿಣ ಆಯುಕ್ತಾಲಯ ಬೆಂಗಳೂರು.
2) ಸೀನಿಯರ್ ಇಂಟಲಿಜೆನ್ಸ್ ಆಫೀಸರ್, ಜಿಎಸ್ ಟಿ ಇಂಟಲಿಜೆನ್ಸ್ ಬೆಂಗಳೂರು.
3) ಸೀನಿಯರ್ ಇಂಟಲಿಜೆನ್ಸ್ ಆಫೀಸರ್, ಜಿಎಸ್ ಟಿ ಇಂಟಲಿಜೆನ್ಸ್ ಬೆಂಗಳೂರು.
4) ಇಂಟಲಿಜೆನ್ಸ್ ಆಫೀಸರ್, ಜಿಎಸ್ ಟಿ ಇಂಟಲಿಜೆನ್ಸ್ ಬೆಂಗಳೂರು.
ನಾಲ್ವರು ಅಧಿಕಾರಿಗಳ ಮೇಲೆ ಕೇಸ್ ದಾಖಲಿಸಿ ಬಂಧನ ಮಾಡಲಾಗಿದೆ. ಸಿಸಿಬಿ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.