ಲಂಚದ ಹಣ ಕಮೋಡ್‌ಗೆ ಹಾಕಿ ಫ್ಲಶ್ ಮಾಡಿದ ಅಧಿಕಾರಿ : ಟಾಯ್ಲೆಟ್ ಹೊಂಡದಿಂದ 57 ಸಾವಿರ ತೆಗೆದ ಎಸಿಬಿ
ಎಸಿಬಿ ಅಧಿಕಾರಿಗಳನ್ನು ಕಂಡ ಅಗ್ನಿ ಶಾಮಕ ದಳದ ಅಧಿಕಾರಿ ಅವರಿಂದ ತಪ್ಪಿಸಿಕೊಳ್ಳಲು ಲಂಚದ ಹಣವನ್ನು ಟಾಯ್ಲೆಟ್ ಕಮೋಡ್‌ಗೆ ಹಾಕಿ ಪ್ಲಶ್ ಮಾಡಿದಂತಹ ವಿಚಿತ್ರ ಘಟನೆ ಮುಂಬೈನಲ್ಲಿ ನಡೆದಿದೆ. ಆದರೂ ಬಿಡದ ಎಸಿಬಿ ಸಿಬ್ಬಂದಿ ಗಟಾರಕ್ಕೆ ಇಳಿದು ಅಲ್ಲಿಂದ 57 ಸಾವಿರ ಹಣವನ್ನು ತೆಗೆದಿದ್ದಾರೆ.
ಮುಂಬೈ: ಎಸಿಬಿ ಅಧಿಕಾರಿಗಳನ್ನು ಕಂಡ ಅಗ್ನಿ ಶಾಮಕ ದಳದ ಅಧಿಕಾರಿ ಅವರಿಂದ ತಪ್ಪಿಸಿಕೊಳ್ಳಲು ಲಂಚದ ಹಣವನ್ನು ಟಾಯ್ಲೆಟ್ ಕಮೋಡ್‌ಗೆ ಹಾಕಿ ಪ್ಲಶ್ ಮಾಡಿದಂತಹ ವಿಚಿತ್ರ ಘಟನೆ ಮುಂಬೈನಲ್ಲಿ ನಡೆದಿದೆ. ಆದರೂ ಬಿಡದ ಎಸಿಬಿ ಸಿಬ್ಬಂದಿ ಗಟಾರಕ್ಕೆ ಇಳಿದು ಟಾಯ್ಲೆಟ್ ಕಮೋಡ್ ಮೂಲಕ ಅಲ್ಲಿಗೆ ಹರಿದು ಹೋಗಿದ್ದ 60 ಸಾವಿರ ರೂಪಾಯಿ ಲಂಚದ ಹಣವನ್ನು ವಶಕ್ಕೆ ಪಡೆದಿದ್ದಾರೆ. ಹೊಟೇಲೊಂದಕ್ಕೆ ಎನ್‌ಒಸಿ ಹಾಗೂ ಪಿಎನ್‌ಜಿ ಕನೆಕ್ಷನ್ ನೀಡಲು ಈ ಅಗ್ನಿ ಶಾಮಕ ದಳದ ಅಧಿಕಾರಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಈ ಬಗ್ಗೆ ಹೊಟೇಲ್ ವ್ಯವಹಾರ ಶುರು ಮಾಡಲು ಬಯಸಿದ್ದ ವ್ಯಕ್ತಿಯ ಪರವಾಗಿ ಬೇರೊಬ್ಬರು ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಮುಂಬೈನ ಭ್ರಷ್ಟಾಚಾರ ನಿಗ್ರಹ ದಳ ಈ ಕಾರ್ಯಾಚರಣೆ ನಡೆಸಿದೆ.
ಹೀಗೆ ಲಂಚ ಪಡೆದು ಸಿಕ್ಕಿಬಿದ್ದ ಅಧಿಕಾರಿಯನ್ನು ಪ್ರಹ್ಮಾದ್ ಶಿಟೊಲೆ ಎಂದು ಗುರುತಿಸಲಾಗಿದೆ. ಲಂಚ ಕೇಳಿ ಪಡೆದು ಸ್ವೀಕರಿಸಿದ ನಂತರ ಅಗ್ನಿ ಶಾಮಕದಳದ ಅಧಿಕಾರಿಗೆ ಏನು ಸಂಶಯ ಶುರುವಾಗಿದ್ದು, ಆತ ಮನೆಗೆ ಹೋಗಿ ಈ ಹಣವನ್ನು ಟಾಯ್ಲೆಟ್ ಕಮೋಡ್‌ಗೆ ಹಾಕಿ ನೀರು ಬಿಟ್ಟಿದ್ದಾನೆ. ಲಂಚ ಸ್ವೀಕರಿಸುತ್ತಿದ್ದ ಕಟ್ಟಡದಲ್ಲೇ ಈತ ವಾಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಈ ವಿಚಾರ ಗೊತ್ತಾದ ಎಸಿಬಿ ಅಧಿಕಾರಿಗಳು ಟಾಯ್ಲೆಟ್ ಹೊಂಡದಿಂದ 60 ಸಾವಿರದಲ್ಲಿ 57 ಸಾವಿರವನ್ನು ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಭ್ರಷ್ಟಾಚಾರ ನಿಗ್ರಹದಳದ ಪ್ರಕಾರ ದೂರು ನೀಡಿದವರು ಖಾಸಗಿ ಸಂಸ್ಥೆಯಲ್ಲಿ ಸಂಪರ್ಕ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು.
ಸರ್ಕಾರಿ ಅಧಿಕಾರಿಗೆ 2.32 ಕೋಟಿ ರೂ. ದಂಡ, 5 ವರ್ಷ ಜೈಲು ಶಿಕ್ಷೆ
ಮುಂಬೈನ ಬೊರಿವಲಿ ಪಶ್ಚಿಮದಲ್ಲಿರುವ ಹೋಟೆಲ್ ಮಾಲೀಕರೊಬ್ಬರು ಪಿಎನ್‌ಜಿ (piped natural gas) ಸಂಪರ್ಕಕ್ಕೆ ಅನುಮತಿ ಹಾಗೂ ಅವರ ಹೊಟೇಲ್‌ಗೆ ನಿರಾಕ್ಷೇಪಣಾ ಪ್ರಮಾಣಪತ್ರಕ್ಕಾಗಿ (Non objectionable certificate) ದೂರುದಾರರಿಗೆ ಅರ್ಜಿ ಸಲ್ಲಿಸಿದ್ದರು. ದೂರುದಾರರು ಬೃಹತ್ ಮುಂಬೈ ಅಗ್ನಿಶಾಮಕ ದಳದ ಪೋರ್ಟಲ್‌ನಲ್ಲಿ ಅನುಮೋದನೆಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದಾದ ನಂತರ ದೂರುದಾರರು ಅಗ್ನಿಶಾಮಕದಳದ ಹಿರಿಯ ಅಧಿಕಾರಿ ಹಾಗೂ ಸಾರ್ವಜನಿಕ ಅಧಿಕಾರಿಯಾಗಿರುವ ಪ್ರಹ್ಮಾದ್ ಶಿಟೊಲೆ ಅವರನ್ನು ಮುಂಬೈ ಸಮೀಪದ ದಹಿಸರ್‌ನಲ್ಲಿ ಭೇಟಿ ಮಾಡಿದ್ದರು. ಈ ವೇಳೆ ಅವರು 1 ಲಕ್ಷದ 30 ಸಾವಿರ ಲಂಚಕ್ಕೆ ಭೇಟಿಗೆ ಇಟ್ಟಿದ್ದರೆನ್ನಲಾಗಿದೆ. ಕ್ಯಾಲ್ಕುಲೆಟರ್‌ನಲ್ಲಿ ಟೈಪ್ ಮಾಡಿ ಆತ ಇಷ್ಟು ಲಂಚ ನೀಡಬೇಕು ಎಂದು ತೋರಿಸಿದ್ದ ಎನ್ನಲಾಗಿದೆ.
ಆದರೆ ಖಾಸಗಿ ಸಂಸ್ಥೆಯ ಸಂಪರ್ಕ ಅಧಿಕಾರಿ ಇಷ್ಟು ಮೊತ್ತದ ಲಂಚ ನೀಡಲು ಒಪ್ಪದೇ ಇದ್ದಾಗ ಅಗ್ನಿಶಾಮಕದಳದ ಅಧಿಕಾರಿ ಲಂಚದ ಮೊತ್ತವನ್ನು 80,000ಕ್ಕೆ ಇಳಿಕೆ ಮಾಡಿದ್ದಾನೆ. ಅಲ್ಲದೇ ಇದನ್ನು ಕೂಡ ಕ್ಯಾಲ್ಕುಲೆಟರ್‌ನಲ್ಲಿ ಟೈಪ್ ಮಾಡಿ ತೋರಿಸಿದ್ದಾನೆ. ಇದಾದ ನಂತರ ದೂರುದಾರರು ಅಗ್ನಿಶಾಮಕ ಅಧಿಕಾರಿಯ ಕಚೇರಿಗೆ ಹೋದಾಗ 50 ಸಾವಿರಕ್ಕಿಂತ ಅಧಿಕ ಎಷ್ಟೇ ಹಣವಾದರು ಸರಿ ನೀಡುವಂತೆ ಕೇಳಿದ್ದಾರೆ ಎನ್ನಲಾಗಿದೆ. ಆದರೆ ಲಂಚ ನೀಡಲು ಒಪ್ಪದ ಸಂಪರ್ಕಾಧಿಕಾರಿ ಎಸಿಬಿಗೆ ವಿಚಾರ ತಿಳಿಸಿದ್ದಾರೆ. ಅದರಂತೆ ಎಸಿಬಿ ಅಧಿಕಾರಿಗಳು ಆಥನಿಗೆ 60 ಸಾವಿರ ಹಣ ನೀಡುವಂತೆ ಸಲಹೆ ನೀಡಿ ಅಗ್ನಿ ಶಾಮಕ ಅಧಿಕಾರಿಯನ್ನು ಖೆಡ್ಡಕ್ಕೆ ಬೀಳಿಸಲು ಪ್ಲಾನ್ ಮಾಡಿದ್ದರು. ಅದರಂತೆ ಈಗ ಆತ ಸಿಕ್ಕಿಬಿದ್ದಿದ್ದಾನೆ. ಆತನ ವಿರುದ್ಧ ಕೇಸ್ ದಾಖಲಾಗಿದ್ದು ಅಗ್ನಿ ಶಾಮಕ ಅಧಿಕಾರಿ ಪ್ರಹ್ಲಾದ್ ಶಿಲೋಟೆಯನ್ನು ಬಂಧಿಸಲಾಗಿದೆ.
ತುಪ್ಪದ ಹಿಂದೆ ಹೋಗಿ ತಪ್ಪು ಮಾಡಿದ ಸರ್ಕಾರಿ ನೌಕರ, ಈಗ ತುಪ್ಪವೂ ಇಲ್ಲ, ಲಕ್ಷ ಸಂಬಳದ ಕೆಲಸವೂ ಇಲ್ಲ!
ಆದರೆ ಹೀಗೆ ಟಾಯ್ಲೆಟ್‌ಗೆ ಹೋದ ಲಂಚದ ಹಣವನ್ನು ಸಂಗ್ರಹಿಸಿಲು ಎಸಿಬಿ ಅಧಿಕಾರಿಗಳು 20 ಗಟಾರಗಳಲ್ಲಿ ಶೋಧ ನಡೆಸಿದ್ದಾರೆ ಎಂದು ವರದಿ ಆಗಿದೆ.