* ಗಡಿ​ಯಲ್ಲಿ ‘ಸ​ಮ​ರ​ಕ್ಕೆ’ ಆಯುಧ ಸಿದ್ಧ​ಪ​ಡಿ​ಸಿದ ಖಾಸಗಿ ಕಂಪ​ನಿ* ಗಡಿ​ಯಲ್ಲಿ ಮಾರ​ಣಾಂತಿಕ ಆಯುಧ ಬಳ​ಸು​ವಂತಿ​ಲ್ಲ* ಹೀಗಾಗಿ ಸೇನೆಯ ಬೇಡಿ​ಕೆಗೆ ಅನು​ಗು​ಣ​ವಾ​ಗಿ ಈ ಆಯುಧ ಸಿದ್ಧ: ಕಂಪ​ನಿ* ಸರ್ಕಾರ, ಸೇನೆ​ಯಿಂದ ಈ ಬಗ್ಗೆ ಅಧಿ​ಕೃತ ಹೇಳಿಕೆ ಇಲ್ಲ* ಚೀನಾ ಎದು​ರಿ​ಸ​ಲು ಸೇನೆಗೆ ತ್ರಿಶೂಲ, ವಜ್ರಾ​ಯು​ಧ!

ಲಖನೌ(ಅ.19): ಚೀನಾ-ಭಾರತ ಗಡಿ​ಯಲ್ಲಿ(China-India Border) ಯೋಧರು ಕಾವಲು ಕಾಯು​ತ್ತಿ​ದ್ದರೂ ಮಾರ​ಣಾಂತಿ​ಕ​ವ​ಲ್ಲದ ಶಸ್ತ್ರ​ಗ​ಳನ್ನು ಮಾತ್ರ ಮುಖಾಮುಖಿ ಸಂಘ​ರ್ಷದ ಸಂದ​ರ್ಭ​ದಲ್ಲಿ ಬಳ​ಸ​ಬೇಕು ಎಂಬ ಒಪ್ಪಂದ​ವಿದೆ. ಅದ​ಕ್ಕೆಂದೇ ತ್ರಿಶೂ​ಲ(Trishul) ಹಾಗೂ ವಜ್ರಾಯು​ಧಂತಹ ಮಾರ​ಣಾಂತಿ​ಕ​ವ​ಲ್ಲದ ಶಸ್ತ್ರ​ಗ​ಳನ್ನು ಸೇನೆಗೆ ಸಿದ್ಧ​ಪ​ಡಿ​ಸಿರುವುದಾಗಿ ಉತ್ತರ ಪ್ರದೇ​ಶದ ಕಂಪ​ನಿ​ಯೊಂದು ಹೇಳಿ​ದೆ.

‘ಗಲ್ವಾನ್‌ ಕಣಿವೆಯ(Galwan Valley) ದಾಳಿಯ ನಂತರ ಭದ್ರತಾ ಪಡೆಗಳು ಇಂಥ ಆಯು​ಧ​ಗ​ಳಿ​ಗೆ ಬೇಡಿಕೆ ಇಟ್ಟಿದ್ದವು. ಹೀಗಾಗಿ ವಜ್ರ ಆಯು​ಧ (ಕಬ್ಬಿ​ಣ​ದ ಸರ​ಳಿನ ಆಯು​ಧ) ಹಾಗೂ ತ್ರಿಶೂಲದಂತಹ ಮಾರಣಾಂತಿಕವಲ್ಲದ ಆಯುಧಗಳನ್ನು ಸಿದ್ಧ ಪಡಿಸಲಾಗಿದೆ’ ಎಂದು ಆ್ಯಪ್‌ಸ್ಟ್ರಾನ್‌ ಪ್ರೈ.ಲಿ.ನ ಮುಖ್ಯ ತಾಂತ್ರಿಕ ಅಧಿಕಾರಿ ಮೋಹಿತ್‌ ಕುಮಾರ್‌ ಹೇಳಿಕೊಂಡಿದ್ದಾರೆ.

‘ಲೋಹದ ಕಂಬಿಯ ಮೇಲೆ ಮುಳ್ಳುಗಳಂತಹ ರಚನೆ ಇರುವ ವಜ್ರ ಆಯುಧದಿಂದ(Weapon) ಗುಂಡು ನಿರೋಧಕ ಟೈರ್‌ಗಳನ್ನು ಪಂಕ್ಚರ್‌ ಮಾಡಬಹುದು. ತ್ರಿಶೂಲ ಆಯುಧವನ್ನು ವೈರಿ ಪಡೆಗಳ ವಾಹನಗಳನ್ನು ತಡೆಯಲು ಬಳಸಬಹುದು. ಕೈಗವಸಿನಂತೆ ಬಳಸಲ್ಪಡುವ ಸಾವಪ್‌ ಪಂಚ್‌ ಎನ್ನುವ ಆಯುಧದ ಮೂಲಕವೂ ಶತ್ರುಗಳನ್ನು ತಡೆಯಬಹುದು. ಈ ಆಯುಧಗಳ ಮಾರಣಾಂತಿಕವಾಗಿರುವುದಿಲ್ಲ’ ಎಂದು ಅವರು ಹೇಳಿದ್ದಾರೆ. ಆದಾಗ್ಯೂ ಸೇನೆಯು ಯಾವಾಗ ಇಂಥ ವಸ್ತು​ಗ​ಳಿಗೆ ಆರ್ಡರ್‌ ನೀಡಿತ್ತು ಎಂಬು​ದನ್ನು ಅವರು ಹೇಳಿ​ಲ್ಲ.

ಆದರೆ ಸೇನೆ ಹಾಗೂ ಸರ್ಕಾರ ಮಾತ್ರ, ಆ್ಯಪ್‌​ಸ್ಟ್ರಾನ್‌ ಕಂಪ​ನಿಗೆ ಇಂಥ ಆಯು​ಧ​ಗಳ ನಿರ್ಮಾ​ಣಕ್ಕೆ ಬೇಡಿಕೆ ಇರಿ​ಸಿದ ಬಗ್ಗೆ ಯಾವುದೇ ಅಧಿ​ಕೃತ ಹೇಳಿಕೆ ನೀಡಿ​ಲ್ಲ.

ಈ ಹಿಂದೆ ಗಲ್ವಾನ್‌ ಕಣಿವೆಯಲ್ಲಿ ವೈರ್‌ ಸುತ್ತಿದ ಕೋಲುಗಳಿಂದ ಚೀನಾ ನಡೆಸಿದ ದಾಳಿಯಲ್ಲಿ ಸೈನಿಕರು ಮೃತಪಟ್ಟಿದ್ದರು.