ತೆಲಂಗಾಣದ ಗಚಿಬೌಲಿಯಲ್ಲಿ 400 ಎಕರೆ ಅರಣ್ಯ ನಾಶಕ್ಕೆ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿದೆ. ಖಮ್ಮಂನ ವೆಲುಗುಮಟ್ಲಾ ಅರ್ಬನ್ ಪಾರ್ಕ್‌ನಲ್ಲಿ ಬೆಂಕಿ ಅವಘಡ ಸಂಭವಿಸಿ ಸುಮಾರು 30 ಎಕರೆ ಪ್ರದೇಶದ ಮರಗಳು ಸುಟ್ಟುಹೋಗಿವೆ. ಕೃಷಿ ಜಮೀನಿನಿಂದ ಹಬ್ಬಿದ ಬೆಂಕಿಯನ್ನು ಅಗ್ನಿಶಾಮಕ ದಳದವರು ಮತ್ತು ಸ್ಥಳೀಯರು ಸೇರಿ ನಂದಿಸಿದರು.

ತೆಲಂಗಾಣ ಸರ್ಕಾರವು ಬಹು-ಮೂಲಸೌಕರ್ಯ ಮತ್ತು ಐಟಿ ಪಾರ್ಕ್‌ಗಳ ಅಭಿವೃದ್ಧಿಗಾಗಿ 400 ಎಕರೆ ಕಾಂಚ ಗಚಿಬೌಲಿ ಪ್ರದೇಶದ ಅರಣ್ಯ ಭೂಮಿ ನಾಶಕ್ಕೆ ಗುರುವಾರ ತೆಲಂಗಾಣ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕಠಿಣ ಎಚ್ಚರಿಕೆ ನೀಡಿತ್ತು. ಅರಣ್ಯ ನಾಶ ಮಾಡುತ್ತಿರುವ ವೇಳೆ ಪ್ರಾಣಿ ಪಕ್ಷಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. 

ಇದೀಗ ತೆಲಂಗಾಣದ ಮತ್ತೊಂದು ಕಡೆ ಬೆಂಕಿ ಬಿದ್ದು, ಅಉಮಾರು 30 ಎಕರೆ ಪ್ರದೇಶದಲ್ಲಿದ್ದ ಮರಗಳು ಸುಟ್ಟು ಕರಕಲಾಗಿದೆ. ಖಮ್ಮಂನ ವೆಲುಗುಮಟ್ಲಾ ಅರ್ಬನ್ ಪಾರ್ಕ್‌ನಲ್ಲಿ ಗುರುವಾರ ತಡರಾತ್ರಿ ಬೆಂಕಿ ಕಾಣಿಸಿಕೊಂಡು 30 ಎಕರೆ ಪ್ರದೇಶದಲ್ಲಿದ್ದ ಮರಗಳು ಸುಟ್ಟು ಕರಕಲಾಗಿವೆ.

ಕಾಂಚ ಗಚ್ಚಿಬೌಲಿ ಮರಗಳ ಮಾರಣಹೋಮ; 'ಮುಖ್ಯ ಕಾರ್ಯದರ್ಶಿ ಜೈಲಿಗೆ ಹೋಗ್ತಾನೆ' ಎಚ್ಚರಿಕೆ ನೀಡಿದ ಸುಪ್ರೀಂ ಕೋರ್ಟ್‌!

ಉದ್ಯಾನವನದಲ್ಲಿ ಬೆಳೆದ ವಿವಿಧ ಜಾತಿಯ ಮರಗಳು ಕೂಡ ಬೆಂಕಿಯಲ್ಲಿ ಸುಟ್ಟು ಭಸ್ಮವಾದವು. ಕೃಷಿ ಜಮೀನಿನಲ್ಲಿ ವ್ಯಕ್ತಿಯೊಬ್ಬರು ಹೊತ್ತಿಸಿದ ಪೊದೆಯಿಂದ ಹುಟ್ಟಿದ ಬೆಂಕಿಯ ಕಿಡಿ 135 ಎಕರೆಗಳಷ್ಟು ವಿಸ್ತೀರ್ಣದ ನಗರ ಉದ್ಯಾನವನಕ್ಕೆ ಬಹು ಬೇಗನೆ ಹರಡಿಕೊಂಡು ಈ ದುರಂತ ನಡೆದಿದೆ.

Telangana: 400 ಎಕರೆ ವಿವಿ ಭೂಮಿಯನ್ನು 10 ಸಾವಿರ ಕೋಟಿಗೆ ಹರಾಜು ಹಾಕಲು ಮುಂದಾದ ಕಾಂಗ್ರೆಸ್‌ ಸರ್ಕಾರ!

ವಿಷ್ಯ ತಿಳಿದ ತಕ್ಷಣ ಮೂರು ಅಗ್ನಿಶಾಮಕ ವಾಹನಗಳು ಉದ್ಯಾನವನಕ್ಕೆ ಧಾವಿಸಿ ಸತತ ಮೂರು ಗಂಟೆಗಳ ಪ್ರಯತ್ನದ ನಂತರ ಬೆಂಕಿಯನ್ನು ನಂದಿಸಲಾಯ್ತು. ಜೊತೆಗೆ ಸ್ಥಳೀಯ ನಿವಾಸಿಗಳು ಕೂಡ ಬೆಂಕಿ ಆರಿಸುವ ಕಾರ್ಯದಲ್ಲಿ ತೊಡಗಿದರು.