ಬೆಂಗಳೂರು(ನ.14): ಕೊರೋನಾ ವೈರಸ್‌ಗೆ ಲಸಿಕೆ ಸಂಶೋಧನೆಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಹಲವು ಲಸಿಕೆಗಳು ಪ್ರಯೋಗಿಕ ಹಂತದಲ್ಲಿ ಭಾರಿ ಯಶಸ್ಸು ಕಂಡಿದೆ. ಜನವರಿ ಆರಂಭದಲ್ಲಿ ಲಸಿಕೆ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ಇದೆ. ಈ ಪ್ರಾಯೋಗಿಕ ಹಂತದಲ್ಲಿನ ಲಸಿಕೆ ಕುರಿತು ಮಾಹಿತಿಗಳು, ಅಧ್ಯಯನ ವರದಿಗಳು ಹೊರಬೀಳುತ್ತಿದೆ. ಇದು ಜನರಲ್ಲಿ ಹೊಸ ಚೈತನ್ಯ ನೀಡಿದೆ. ಹೀಗೆ ಬೆಂಗಳೂರು ಅಪೋಲೋ ಆಸ್ಪತ್ರೆ ವೈದ್ಯರ ತಂಡ ನಡೆಸಿದ ಅಧ್ಯಯನದಲ್ಲಿ ಮಹತ್ವದ ಅಂಶ ಬೆಳಕಿಗೆ ಬಂದಿದೆ.

ಭಾರತಕ್ಕೆ ಬಂತು Sputnik V ಕೊರೋನಾ ಲಸಿಕೆ,  ಯಾರಿಗೆ ಮೊದಲು ಸಿಗಲಿದೆ?..

ಕೊರೋನಾ ವೈರಸ್ ವಿರುದ್ಧ ಹೋರಾಡಬಲ್ಲ ರೆಮ್ಡಿಸಿವಿರ್(remdesivir) ಔಷಧ ಕುರಿತು ಜಯನಗರ ಅಪೋಲೋ ಆಸ್ಪತ್ರೆ ವೈದ್ಯರು ಕಳೆದ ಜೂನ್ ತಿಂಗಳಿನಿಂದ ಅಧ್ಯಯನ ನಡೆಸುತ್ತಿದ್ದು, ಇದೀಗ ಮಹತ್ವದ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಕೊರೋನಾ ಸೋಂಕು ತಗುಲಿದ ಆರಂಭಿಕ ಹಂತದಲ್ಲಿ remdesivir ಔಷಧ ನೀಡಿದರೆ ಸೋಂಕಿತರು ಅಪಾಯದಿಂದ ಪಾರಾಗುತ್ತಾರೆ. ಜೀವಕ್ಕೆ ಯಾವುದ ಸಮಸ್ಯೆ ಇರುವುದಿಲ್ಲ ಎಂದು ವೈದ್ಯರ ಅಧ್ಯಯನ ಹೇಳಿದೆ.

ಅವರು ಲಸಿಕೆ ಕೊಡ್ತೇನೆ ಅಂದ್ರು ನಮ್ಮಲ್ಲಿ ತಂದು ತಲುಪಿಸಕಾಗಲ್ಲ! ಯಾಕೆ ಅಂತೀರಾ?

ಜೂನ್25 ರಿಂದ ಅಕ್ಟೋಬರ್ 3 ರ ವರೆಗೆ 350 ಕೊರೋನಾ ಸೋಂಕಿತರಿಗೆ remdesivir ಔಷಧ ನೀಡಿ ಅವರನ್ನು ಸೂಕ್ಷ್ಮವಾಗಿ ತಪಾಸಣೆ ಮಾಡಲಾಗಿದೆ. ಈ ಅಧ್ಯಯನದಲ್ಲಿ ಕೊರೋನಾ ಸೋಂಕು ತಗುಲಿದೆ 9 ದಿನದಲ್ಲಿ remdesivir ಔಷಧ ನೀಡಿದಲ್ಲಿ, ಸೋಂಕಿತರ ಜೀವ ಉಳಿಯಲಿದೆ. ಆರಂಭಿಕ ಹಂತದಲ್ಲೇ remdesivir ನೀಡಿದರೆ ಸೋಂಕಿತರು ಶೀಘ್ರದಲ್ಲೇ ಗುಣಮುಖರಾಗಲಿದ್ದಾರೆ ಎಂದು ಅಧ್ಯಯನ ಹೇಳಿದೆ.

350 ಕೊರೋನಾ ಸೋಂಕಿತರಿಗೆ remdesivir ಔಷಧ ನೀಡಲಾಗಿತ್ತು. ಇದರಲ್ಲಿ ನಾಲ್ವರಿಗೆ ಕೆಲ ಅಡ್ಡ ಪರಿಣಾಮಗಳು ಕಂಡುಬಂದಿತ್ತು. ಹೀಗಾಗಿ ಇವರಿಗೆ ತಕ್ಷಣವೇ remdesivir ಔಷಧ ನಿಲ್ಲಿಸಿ, ಬೇರ ಚಿಕಿತ್ಸೆ ನೀಡಲಾಗಿದೆ. ಅಧ್ಯಯನದಲ್ಲಿದ್ದ ವ್ಯಕ್ತಿಯ ಗರಿಷ್ಠ ವಯಸ್ಸು 94 ಹಾಗೂ ಕನಿಷ್ಠ ವಯಸ್ಸು 24 ಆಗಿತ್ತು.