Asianet Suvarna News Asianet Suvarna News

ಅಪರಾಧಿಯಂತೆ ಪರಿಗಣಿಸಿ ಗಡೀಪಾರು; ಭಾರತ ವಿರುದ್ಧ ಆಫ್ಘಾನ್ ಸಂಸದೆ ದೂರು!

  • ಆಫ್ಘಾನಿಸ್ತಾನದಿಂದ ಭಾರತೀಯರ ರಕ್ಷಣೆಯಲ್ಲಿ ಭಾರತ ನಿರತ
  • ಇದರ ನಡುವೆ ಆಫ್ಘಾನ್ ಸಂಸದೆ ಭಾರತದ ವಿರುದ್ಧ ಅಸಮಾಧಾನ
  • ಗಾಂಧೀಜಿ ದೇಶದಿಂದ ಇದನ್ನು ನಿರೀಕ್ಷಿಸಿರಲಿಲ್ಲ, ದೂರು ನೀಡಿದ ಸಂಸದೆ
Treated as a criminal and deported never expect from India Afghan MP complains evacuation operation ckm
Author
Bengaluru, First Published Aug 26, 2021, 8:33 PM IST

ನವದೆಹಲಿ(ಆ.26): ತಾಲಿಬಾನ್  ಬಿಗಿ ಹಿಡಿತ ಸಾಧಿಸುತ್ತಿದ್ದಂತೆ ಆಫ್ಘಾನಿಸ್ತಾನದಿಂದ ಭಾರತ ತನ್ನವರನ್ನು ಸುರಕ್ಷಿತವಾಗಿ ಕರೆತರುವ ಕಾರ್ಯಾಚರಣೆ ನಡೆಸುತ್ತಿದೆ. ಭಾರತದ ಈ ಕಾರ್ಯಾಚರಣೆ ನಡುವೆ ಆಫ್ಘಾನ್ ಸಂಸದೆ ರಂಗಿನಾ ಕಾರ್ಗರ್ ಭಾರತದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಅಪರಾಧಿಯಂತೆ ಪರಿಗಣಿಸಿ, ಭಾರತದಿಂದ ಗಡೀಪಾರು ಮಾಡಲಾಗಿದೆ ಎಂದು ಕಾರ್ಗರ್ ಆರೋಪಿಸಿದ್ದಾರೆ.

ಮಹಿಳೆ ಹೊರಬಂದರೆ ಸುರಕ್ಷಿತಳಲ್ಲ, ಸತ್ಯ ಒಪ್ಪಿಕೊಂಡ ತಾಲಿಬಾನ್‌ಗಳಿಂದ ವರ್ಕ್ ಫ್ರಮ್ ಹೋಮ್‌ಗೆ ಸೂಚನೆ!

ಆಫ್ಘಾನಿಸ್ತಾನದ ಫರಿಯಾಬ್ ಪ್ರಾಂತ್ಯದ ಸಂಸದೆ ರಂಗಿನಾ ಕಾರ್ಗರ್ ಇಸ್ತಾಂಬುಲ್‌ನಿಂದ ಭಾರತಕ್ಕೆ ಆಗಮಿಸಿದ್ದರು. ಆದರೆ ದೆಹಲಿ ಆಸ್ಪತ್ರೆಯಲ್ಲಿ 11 ಗಂಟೆ ತಪಾಸಣೆ ನಡೆಸಲಾಗಿದೆ. ಆದರೆ ಬಂದ ವಿಮಾನದಲ್ಲೇ ಭಾರತ ತನನ್ನು ಇಸ್ತಾಂಬುಲ್‌ಗೆ ವಾಪಸ್ ಕಳುಹಿಸಿದೆ. ನನ್ನನ್ನು ಅಪರಾಧಿ ಎಂದು ಪರಿಗಣಿಸಿದರು. ದುಬೈನಲ್ಲಿ ನನಗೆ ಪಾಸ್‌ಪೋರ್ಟ್ ಕೂಡ ನೀಡಿಲ್ಲ. ಗಾಂಧೀಜಿ ಭಾರತದಿಂದ ನಾನು ನಿರೀಕ್ಷಿಸಿರಲಿಲ್ಲ ಎಂದು ಕಾಂಗಿನಾ ಕಾರ್ಗರ್ ಆರೋಪಿಸಿದ್ದಾರೆ. 

ನಾವು ಯಾವಾಗಲೂ ಭಾರತದೊಂದಿಗೆ ಸ್ನೇಹಿತರಾಗಿದ್ದೇವೆ, ನಾವು ಭಾರತದೊಂದಿಗೆ ಕಾರ್ಯತಂತ್ರದ ಸಂಬಂಧವನ್ನು ಹೊಂದಿದ್ದೇವೆ. ಈ ಸಮಯದಲ್ಲಿ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂದು ಕಾರ್ಗರ್ ಇಂಗ್ಲೀಷ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. 

ನೀರಿನ ಬಾಟಲಿಗೆ 3,000 ರೂ, ಒಂದು ಪ್ಲೇಟ್ ಊಟಕ್ಕೆ 7,400 ರೂ; ಆಫ್ಘಾನಿಸ್ತಾನದ ಸದ್ಯದ ಪರಿಸ್ಥಿತಿ!

ನನ್ನನ್ನು ಗಡೀಪಾರು ಮಾಡಿದ ಬಳಿಕ ಆಫ್ಘಾನಿಸ್ತಾನದ ಸಿಖ್ ಸಂಸದ ನರೀಂದ್ರ ಸಿಂಗ್ ಖಲ್ಸಾ ಹಾಗೂ ಅನಾರ್ಕಲಿ ಕೌರ್ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಯಿತು. ಈ ಹಿಂದೆ ಹಲವು ಭಾರಿ ನನ್ನ ಪಾಸ್‌ಪೋರ್ಟ್‌ನಲ್ಲಿ ಭಾರತ ಪ್ರವಾಸ ಮಾಡಿದ್ದೇನೆ. ಅಂದು ಯಾವುದೇ ಸಮಸ್ಯೆ ಇಲ್ಲದ ನನ್ನನ್ನು ಗಡೀಪಾರು ಮಾಡಿದ್ದು ಯಾಕೆ ಎಂದು ಕಾರ್ಗರ್ ಪ್ರಶ್ನಿಸಿದ್ದಾರೆ.

 

ಪ್ರಧಾನಿ ನರೇಂದ್ರ ಮೋದಿ ಕರೆದ ಸರ್ವ ಪಕ್ಷ ಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಈ ವಿಷಯ ಪ್ರಸ್ತಾಪಿಸಿದ್ದಾರೆ. ಕೆಲ ತಪ್ಪಿನಿಂದ ಈ ರೀತಿ ಆಗಿದೆ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ

Follow Us:
Download App:
  • android
  • ios