ಮಹಿಳೆ ಹೊರಬಂದರೆ ಸುರಕ್ಷಿತಳಲ್ಲ, ಸತ್ಯ ಒಪ್ಪಿಕೊಂಡ ತಾಲಿಬಾನ್‌ಗಳಿಂದ ವರ್ಕ್ ಫ್ರಮ್ ಹೋಮ್‌ಗೆ ಸೂಚನೆ!
- ತಾಲಿಬಾನ್ ಸಾಮ್ರಾಜ್ಯದಲ್ಲಿ ಮಹಿಳೆ ಸುರಕ್ಷಿತವಲ್ಲ ಎಂದ ಉಗ್ರರು
- ಮಹಿಳೆಯರಿಗೆ ಗೌರವ ನೀಡುವುದು ತಾಲಿಬಾನ್‌ಗೆ ಗೊತ್ತಿಲ್ಲ
- ಕೆಲಸ ಮಾಡಲೇಬೇಕು ಎಂದರೆ ಮನೆಯಿಂದಲೇ ಮಾಡಿ
- ಆಫ್ಘಾನಿಸ್ತಾನ ಮಹಿಳೆಯರಿಗೆ ಉಗ್ರರ ತಾಕೀತು
ಕಾಬೂಲ್(ಆ.26): ಆಫ್ಘಾನಿಸ್ತಾನ ಕೈವಶ ಮಾಡಿರುವ ತಾಲಿಬಾನ್ ಉಗ್ರರು ಸಿಕ್ಕ ಸಿಕ್ಕವರ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದಾರೆ. ಮಹಿಳೆಯರು ಮಕ್ಕಳ ಪರಿಸ್ಥಿತಿ ಶೋಚನೀಯವಾಗಿದೆ. ಆಹಾರ, ನೀರಿಲ್ಲದೆ ಜನ ಸಾಯುತ್ತಿದ್ದಾರೆ. ಇದರ ನಡುವೆ ತಾಲಿಬಾನ್ ಉಗ್ರರು ಬದಲಾಗಿದ್ದಾರೆ, ಮಹಿಳೆಯರಿಗೆ ಗೌರವ ನೀಡುತ್ತೇವೆ ಎಂದು ಡಂಗುರ ಸಾರಿದ್ದರು. ಇದನ್ನೇ ಅಂತಾರಾಷ್ಟ್ರೀಯ ಮಾಧ್ಯಮಗಳು ಪ್ರಚಾರ ಮಾಡಿತ್ತು. ಇದೀಗ ತಾಲಿಬಾನ್ ಉಗ್ರರ ಅಸಲಿ ಸತ್ಯ ಬಹಿರಂಗವಾಗಿದೆ. ಮಹಿಳೆಯರಿಗೆ ಗೌರವ ನೀಡುವದನ್ನೇ ತಾಲಿಬಾನ್ ಉಗ್ರರು ಕಲೀತಿಲ್ಲ ಅನ್ನೋದು ಉಗ್ರರ ಬಾಯಿಯಿಂದಲೇ ಹೊರಬಿದ್ದಿದೆ.
ನೀರಿನ ಬಾಟಲಿಗೆ 3,000 ರೂ, ಒಂದು ಪ್ಲೇಟ್ ಊಟಕ್ಕೆ 7,400 ರೂ; ಆಫ್ಘಾನಿಸ್ತಾನದ ಸದ್ಯದ ಪರಿಸ್ಥಿತಿ!
ತಾಲಿಬಾನ್ ಉಗ್ರ ಸಂಘಟನೆ ವಕ್ತಾರ ಝಬಿಉಲ್ಲಾ ಮುಜಾಹಿದ್ ಮಾಧ್ಯಮದ ಮೂಲಕ ಮಹಿಳೆಯಿರೆಗೆ ಸ್ಪಷ್ಟ ಸಂದೇಶ ನೀಡಿದ್ದಾನೆ. ಮಹಿಳೆಯರಿಗೆ ಗೌರವ ನೀಡುವುದನ್ನು ತಾಲಿಬಾನ್ ಉಗ್ರರು ರೂಢಿಸಿಕೊಂಡಿಲ್ಲ. ಮಹಿಳೆಯರು ಸುರಕ್ಷಿತವಾಗಿರಲು ಹೊರಬರುವುದನ್ನು ನಿಲ್ಲಿಸಬೇಕು. ಕೆಲಸ ಮಾಡಲೇಬೇಕಿದ್ದರೆ ವರ್ಕ್ ಫ್ರಮ್ ಹೋಮ್(ಮನೆಯಿಂದ ಕೆಲಸ) ಮಾಡಲಿ ಎಂದು ಝಬಿಉಲ್ಲಾ ಖಡಕ್ ಸೂಚನೆ ನೀಡಿದ್ದಾನೆ.
ಮಹಿಳೆಯರು ಹೊರಗಡೆ ಬಂದು ಕೆಲಸಕ್ಕೆ ಹೋಗಬಾರದು. ಅವರ ಸುರಕ್ಷತೆಗಾಗಿ ಈ ನಿಯಮ ಜಾರಿಗೆ ತರಲಾಗಿದೆ. ಬುರ್ಖಾ ಧರಿಸಬೇಕು. ಶರಿಯಾ ನಿಯಮದಲ್ಲಿರುವ ಉಡುಗೆಯನ್ನೇ ತೊಡಬೇಕು. ಅದರಂತೆ ನಡೆದುಕೊಳ್ಳಬೇಕು. ಮಹಿಳೆ ಮನೆಯಲ್ಲೇ ಇರಬೇಕು. ಈ ನಿಯಮ ಉಲ್ಲಂಘಿಸಿದರೆ ಶಿಕ್ಷೆ ಎಂದು ಎಚ್ಚರಿಕೆ ನೀಡಿದ್ದಾನೆ.
ಮನೆ ಮನೆಗೆ ತೆರಳಿ ಹೆಣ್ಣು ಮಕ್ಕಳ ಹೊತ್ತೊಯ್ದು ಮದುವೆ; ತಾಲಿಬಾನ್ ಕ್ರೌರ್ಯ ಬಿಚ್ಚಿಟ್ಟ ಪತ್ರಕರ್ತ!
ಹೊಸ ತಾಲಿಬಾನ್ ಯುಗ ಆರಂಭಗೊಂಡಿದೆ. 2021ರಲ್ಲಿ ಆಫ್ಘಾನಿಸ್ತಾನ ನಿಯಂತ್ರಿಸುತ್ತಿರುವ ತಾಲಿಬಾನ್ ಆಧುನಿಕರಣಗೊಂಡಿದೆ. ಆಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸಲು ತಾಲಿಬಾನ್ ಎಲ್ಲಾ ಕ್ರಮ ಕೈಗೊಳ್ಳಲಿದೆ ಎಂದು ಝಬಿಉಲ್ಲಾ ಮುಜಾಹಿದ್ ಹೇಳಿದ್ದಾನೆ. ಆದರೆ ಮಹಿಳೆಯ ಸುರಕ್ಷತೆಗೆ ಸಂಪೂರ್ಣ ಭರವಸೆ ನೀಡಲು ತಾಲಿಬಾನ್‌ಗೆ ಸಾಧ್ಯವಾಗುತ್ತಿಲ್ಲ. ಈಗಾಗಲೇ ಮಹಿಳೆಯರು ಮಕ್ಕಳು ಪರಿಸ್ಥಿತಿ ಹೇಳತೀರದು. ಹಿಂಸಾಚಾರ, ಅತ್ಯಾಚಾರ ವರದಿಯಾಗುತ್ತಲೇ ಇದೆ.
15 ವರ್ಷ ಮೇಲ್ಪಟ್ಟ ಹೆಣ್ಣುಮಕ್ಕಳನ್ನು ತಾಲಿಬಾನ್ ಉಗ್ರರು ಹೊತ್ತೊಯ್ದು ಮದುವೆ ಮಾಡಿಕೊಳ್ಳುತ್ತಿರುವ ಕುರಿತು ಅಂತರಾಷ್ಟ್ರೀಯ ಕೆಲ ಮಾಧ್ಯಮಗಳು ವರದಿ ಮಾಡಿವೆ. 1996ರಿಂದದ 2021ರ ವರಗೆ ಆಫ್ಘಾನಿಸ್ತಾನದಲ್ಲಿ ಮೆರೆದಿದ್ದ ತಾಲಿಬಾನ್ ಉಗ್ರರು ಮಹಿಳೆಯರಿಗೆ ನರಕಕ್ಕಿಂತ ಕಡೆಯಾದ ಸಮಾಜ ಸೃಷ್ಟಿಸಿದ್ದರು. ಕೊಲೆ, ಅತ್ಯಾಚಾರ, ಹಿಂಸಾಚಾರಕ್ಕೆ ಲೆಕ್ಕವೇ ಇಲ್ಲ.
ಆಫ್ಘಾನಿಸ್ತಾನದ ಮಾಜಿ ಸಚಿವ ಈಗ ಜರ್ಮನಿಯಲ್ಲಿ ಪಿಝಾ ಡೆಲಿವರಿ ಬಾಯ್!
ಅಮೆರಿಕ ಸೇನೆ ಹಿಂತೆಗೆತಕ್ಕೆ ನೀಡಿದ ಗಡುವು ವಿಸ್ತರಿಸಲು ಸಾಧ್ಯವಿಲ್ಲ ಎಂದು ತಾಲಿಬಾನ್ ಉಗ್ರರು ಸೂಚನೆ ನೀಡಿದ್ದಾರೆ. ಗಡುವು ಮುಗಿದ ಮೇಲೆ ಅಮೆರಿಕ ಸೇನೆ ಸೂಚನೆಗೆ ಬದ್ಧವಾಗದಿದ್ದಲ್ಲಿ, ಪರಿಣಾಮ ಎದುರಿಸಬೇಕಾದಿತು ಎಂದು ಝಬಿಉಲ್ಲಾ ಮುಜಾಹಿದ್ ಎಚ್ಚರಿಕೆ ನೀಡಿದ್ದಾನೆ.
ಇದೀಗ ತಾಲಿಬಾನ್ ಉಗ್ರರ ಕೈಯಲ್ಲಿ ಆಫ್ಘಾನಿಸ್ತಾನದಲ್ಲಿ ನಡೆದ ಮಾನವ ಹಕ್ಕುಗಳ ಉಲ್ಲಂಘನೆ ಕುರಿತ ಪಾರದರ್ಶಕ ತನಿಖೆ ವಿಶ್ವಸಂಸ್ಥೆ ತಯಾರಿ ನಡೆಸಿದೆ.