Asianet Suvarna News Asianet Suvarna News

LGBT Rights: ಜೈಲಿನಲ್ಲಿ ತೃತೀಯಲಿಂಗಿಗಳಿಗೆ ಪ್ರತ್ಯೇಕ ವಾರ್ಡ್, ಶೌಚಾಲಯ

* ಜೈಲಲ್ಲಿ ತೃತೀಯ ಲಿಂಗಿಗಳಿಗೆ  ಪ್ರತ್ಯೇಕ ಕೋಣೆ, ಶೌಚಾಲಯ
* ಎಲ್ಲ ರಾಜ್ಯ ಸರ್ಕಾರಗಳಿಗೆ  ಕೇಂದ್ರದ ಸೂಚನೆ
* ತೃತೀಯಲಿಂಗಿಗಳ ಹಕ್ಕು ರಕ್ಷಣೆ 

Transgender persons to get separate jail wards, facilities mah
Author
Bengaluru, First Published Jan 13, 2022, 2:03 AM IST

ನವದೆಹಲಿ(ಜ. 13)  ಕಾರಾಗೃಹಗಳಲ್ಲಿ ಸಹ ಕೈದಿಗಳಿಂದ ತೃತೀಯ ಲಿಂಗಿ ಕೈದಿಗಳ ಮೇಲಿನ ದೌರ್ಜನ್ಯಗಳ ತಡೆ ಹಾಗೂ ಅವರ ಹಕ್ಕುಗಳ ರಕ್ಷಣೆಗಾಗಿ, ತೃತೀಯ ಲಿಂಗಿಗಳಿಗಾಗಿಯೇ (Transgenders)ಪ್ರತ್ಯೇಕ ಕೋಣೆ ವ್ಯವಸ್ಥೆ ಮಾಡಬೇಕು ಎಂದು ಕೇಂದ್ರ ಸರ್ಕಾರ (Union Govt) ಎಲ್ಲಾ ರಾಜ್ಯಗಳಿಗೂ ಸೂಚನೆ ನೀಡಿದೆ. 

ಈ ಸಂಬಂಧ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿರುವ ಕೇಂದ್ರ ಗೃಹ ಇಲಾಖೆ, ಜೈಲಿನಲ್ಲಿ ತೃತೀಯ ಲಿಂಗಿಗಳು ತಮಗೆ ಇಷ್ಟವಾಗುವ ಲಿಂಗದ ಜತೆ ಗುರುತಿಸಿಕೊಳ್ಳಲು ಅವಕಾಶ ನೀಡಬೇಕು. ಅವರ ವೈಯಕ್ತಿಕ ಹಕ್ಕುಗಳು ಮತ್ತು ಗೌರವಗಳ ರಕ್ಷಣೆಗಾಗಿ ಪುರುಷ ಮತ್ತು ಮಹಿಳಾ ತೃತೀಯ ಲಿಂಗಿಗಳಿಗೆ ಪ್ರತ್ಯೇಕ ಸ್ನಾನದ ಕೋಣೆ ಮತ್ತು ಶೌಚಾಲಯಗಳನ್ನು ನೀಡಬೇಕು ಎಂದು ತಿಳಿಸಲಾಗಿದೆ.

ತೃತೀಯಲಿಂಗಿಗಳ ಹಕ್ಕುಗಳನ್ನು ಗುರುತಿಸಿರುವ ಕೇಂದ್ರ ಸರ್ಕಾರ, ಯಾವುದೇ ರೀತಿಯ ಶೋಷಣೆಯಿಂದ ಅವರನ್ನು ರಕ್ಷಿಸಲು ಈ ಆದೇಶ ನೀಡಿದೆ.  ತೃತೀಯಲಿಂಗಿ ಕೈದಿಗಳನ್ನು ಅವರ ಆದ್ಯತೆಯ ಲಿಂಗದ ವ್ಯಕ್ತಿ ಅಥವಾ ತರಬೇತಿ ಪಡೆದ ವೈದ್ಯರಿಂದ  ಖಚಿತಗೊಳಿಸಿಕೊಳ್ಳಬೇಕು ಎಂದು ತಿಳಿಸಿದೆ. ತೃತೀಯಲಿಂಗಿಗಳ ಗೌಪ್ಯತೆ ಮತ್ತು ಘನತೆಯ ಹಕ್ಕುಗಳ ಸಾಕಷ್ಟು ರಕ್ಷಣೆ ಮೊದಲ ಆದ್ಯತೆಯಾಗಬೇಕು ಎಂದು ಗೃಹಸಚಿವಾಲಯ ಹೇಳಿದೆ.

Transgender Funeral : ರಾತ್ರಿ ನಡೆಯುವ ಶವಯಾತ್ರೆ ನೋಡಿದ್ರೆ ಏನಾಗುತ್ತೆ

ಪೊಲೀಸ್ ನೇಮಕಕ್ಕೆ ಅವಕಾಶ:  ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ  ( Karnataka State Police  ) ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.  ಕೆಎಸ್‌ಆರ್‌ಪಿ (karnataka state reserve police) ಮತ್ತು ಭಾರತೀಯ ರಿಸರ್ವ್ ಬೆಟಾಲಿಯನ್ (Indian Reserve Battalion) ವಿಶೇಷ ಮೀಸಲು ಸಬ್‌ಇನ್‌ಸ್ಪೆಕ್ಟರ್ ಹುದ್ದೆಗೆ ಪುರುಷ,
ಮಹಿಳೆಯರು ಮತ್ತು ತೃತೀಯ ಲಿಂಗಿಗಳಿಂದ  ಅರ್ಜಿಗಳನ್ನು ಆಹ್ವಾನಿಸಿದೆ.  ಒಟ್ಟು 70 ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಲು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಪುರುಷ, ಮಹಿಳಾ ಸದಸ್ಯರಲ್ಲದೆ ತೃತೀಯ ಲಿಂಗದ ಅಭ್ಯರ್ಥಿಗಳಿಗೆ ಕೂಡ ಅರ್ಜಿ ಸಲ್ಲಿಸಲು ಕೋರಲಾಗಿರುವುದು ವಿಶೇಷ, ಈಗಾಗಲೇ ಡಿಸೆಂಬರ್ 20 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಜನವರಿ 18,2022ರ ಬೆಳಿಗ್ಗೆ 6 ಗಂಟೆಯೊಳಗೆ ಅರ್ಜಿಯನ್ನು   ಸಲ್ಲಿಸಬಹುದಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ https://ksp.karnataka.gov.in/ ಭೇಟಿ ನೀಡಬಹುದು. ಅಥವಾ http://rec21.ksp-online.in/ ಭೇಟಿ ನೀಡಿ.

ವಿದ್ಯಾರ್ಹತೆ: ವಿಶೇಷ ಮೀಸಲು ಸಬ್‌ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆ/ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ಪದವಿ ವಿದ್ಯಾರ್ಹತೆಯನ್ನು ಪಡೆದಿರುವುದು ಖಡ್ಡಾಯವಾಗಿದೆ.

ವಯೋಮಿತಿ : ಕೆಎಸ್‌ಪಿ ವಿಶೇಷ ಮೀಸಲು ಸಬ್‌ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಜನವರಿ 18,2022ರ ಅನ್ವಯ ಕನಿಷ್ಟ 21 ರಿಂದ ಗರಿಷ್ಟ 26 ವರ್ಷ
ವಯೋಮಿತಿಯೊಳಗಿರಬೇಕು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಗರಿಷ್ಟ 28 ವರ್ಷ ಆಗಿರಬೇಕು. ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯಯನ್ನು ನೀಡಲಾಗಿದೆ.

ಸೇನೆಯಲ್ಲೂ ಅವಕಾಶ:  ಅಮೆರಿಕದ ಈ ಹಿಂದಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಹಲವು ನಿರ್ಣಯಗಳನ್ನು ರದ್ದುಗೊಳಿಸುತ್ತಿರುವ ಹಾಲಿ ಅಧ್ಯಕ್ಷ ಜೋ ಬೈಡೆನ್‌ ಸರ್ಕಾರ,ಅಮೆರಿಕ ಸೇನಾ ಪಡೆಗಳಿಗೆ ತೃತೀಯ ಲಿಂಗಿಗಳ ನೇಮಕಾತಿಗೆ ಟ್ರಂಪ್‌ ಆಡಳಿತ ಹೇರಿದ್ದ ನಿಷೇಧವನ್ನು ತೆರವು  ಮಾಡಿತ್ತು.

ಓವಲ್‌ ಕಚೇರಿಯಲ್ಲಿ ರಕ್ಷಣಾ ಸಚಿವ ಲೋಯ್ಡ್‌ ಆಸ್ಟಿನ್‌ ಜೊತೆಗಿನ ಸಭೆ ವೇಳೆ ಸೇನಾಪಡೆಗಳಿಗೆ ತೃತೀಯ ಲಿಂಗಿಗಳ ನೇಮಕಾತಿಗೆ ಇದ್ದ ನಿಷೇಧವನ್ನು ರದ್ದು ಮಾಡುವ ಕಾನೂನಿಗೆ ಬೈಡೆನ್‌ ಸಹಿ ಹಾಕಿದ್ದಾರೆ. ತನ್ಮೂಲಕ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂಬ ತೃತೀಯ ಲಿಂಗಿಗಳ ಆಕಾಂಕ್ಷೆಗೆ ಬೈಡೆನ್‌ ಸರ್ಕಾರ  ಅವಕಾಶ ಮಾಡಿಕೊಟ್ಟಿತ್ತು.

 

Follow Us:
Download App:
  • android
  • ios