ನಿಲ್ದಾಣದಿಂದ ರೈಲು ಚಲಿಸಲು ಆರಂಭಿಸುತ್ತಿದ್ದಂತೆ ಕಿಟಕಿ ಬದಿಯಲ್ಲಿ ಕುಳಿತ ಪ್ರಯಾಣಿಕ ಫೋನ್ ಕದಿಯಲು ಕಳ್ಳನೊಬ್ಬ ಯತ್ನಿಸಿದ್ದಾನೆ. ಆದರೆ ಎಚ್ಚೆತ್ತ ಪ್ರಯಾಣಿಕ ಆತನ ಕೈಗಳನ್ನು ಗಟ್ಟಿಯಾಗಿ ಹಿಡಿದಿದ್ದಾನೆ. ಇತ್ತ ರೈಲು ಸಂಚಾರ ಆರಂಭಿಸಿದೆ. ಕಳ್ಳನಿಗೆ ಪಾಠ ಕಲಿಸಲು ಬರೋಬ್ಬರಿ 1 ಕಿಲೋಮೀಟರ್ ಕಳ್ಳನ ಎಳೆದೊಯ್ದು ಜೀವಮಾನದ ಪಾಠ ಕಲಿಸಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ.
ಪಾಟ್ನಾ(ಜ.18) ರೈಲು ನಿಲ್ದಾಣಗಳಿಂದ ರೈಲು ಪ್ರಯಾಣ ಮುಂದುವರಿಸಿದಾಗ ಕಿಟಕಿ ಬದಿಯಲ್ಲಿ ಕುಳಿತ, ಬಾಗಿಲು ಪಕ್ಕದಲ್ಲಿ ನಿಂತ ಪ್ರಯಾಣಿಕರ ಅಮೂಲ್ಯ ವಸ್ತುಗಳನ್ನು ಕಳ್ಳರು ಎಗರಿಸುತ್ತಾರೆ. ಪ್ರತಿ ದಿನ ಈ ರೀತಿಯ ಘಟನೆಗಳು ವರದಿಯಾಗುತ್ತಲೇ ಇದೆ. ಹೀಗೆ ಕಳ್ಳರ ಗ್ಯಾಂಗ್ ಬಿಹಾರದ ರೈಲು ನಿಲ್ದಾಣದಲ್ಲಿ ಸಜ್ಜಾಗಿತ್ತು. ಕಟಿಕಿ ಬದಿಯಲ್ಲಿ ಕುಳಿತು ಫೋನ್ ನೋಡುತ್ತಿದ್ದ ಪ್ರಯಾಣಿಕನ ಟಾರ್ಗೆಟ್ ಮಾಡಿದ ಕಳ್ಳ, ರೈಲು ಚಲಿಸಲು ಕಾದು ಕುಳತಿದ್ದ. ರೈಲು ಸಂಚಾರ ಆರಂಭಿಸಿದ ಬೆನ್ನಲ್ಲೇ ಫೋನ್ ಎಗರಿಸುವ ಪ್ರಯತ್ನ ಮಾಡಿದ್ದಾನೆ. ಆದರೆ ಮೊದಲೇ ಎಚ್ಚೆತ್ತುಕೊಂಡಿದ್ದ ಪ್ರಯಾಣಿಕ, ಕಳ್ಳನ ಕೈಗಳನ್ನು ಗಟ್ಟಿಯಾಗಿ ಹಿಡಿದಿದ್ದಾನೆ. ಅಷ್ಟರೊಳಗೆ ಇತರ ಸಹ ಪ್ರಯಾಣಿಕರು ಕಳ್ಳನ ಹಿಡಿದಿದ್ದಾರೆ. ಇತ್ತ ರೈಲು ಕೂಜ ಚಲಿಸಿದೆ. ಬರೋಬ್ಬರಿ 1 ಕಿಲೋಮೀಟರ್ ಕಳ್ಳ ಕಿಟಕಿಯಲ್ಲಿ ನೇತಾಡಿಕೊಂಡೆ ಸಾಗಿದ್ದಾನೆ. ಈ ವಿಡಿಯೋ ಬಾರಿ ವೈರಲ್ ಆಗಿದೆ.
ಬಿಹಾರದ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಕಳ್ಳರ ಗ್ಯಾಂಗ್ ಪ್ರತಿ ದಿನ ಇದೇ ಕೆಲಸದಲ್ಲಿ ನಿರತವಾಗಿದೆ. ಹಲವು ದೂರು ದಾಖಲಾದರೂ ನಿಯಂತ್ರಣ ಮಾತ್ರ ಸಾಧ್ಯವಾಗಿಲ್ಲ. ಕಿಟಕಿ ಬದಿಯಲ್ಲಿ, ಬಾಗಿಲು ಪಕ್ಕದಲ್ಲಿ ನಿಂತುಕೊಂಡ ಪ್ರಯಾಣಿಕರೇ ಇವರ ಟಾರ್ಗೆಟ್, ಪ್ರತಿ ಬೋಗಿಗೆ ಒಬ್ಬರು ಕಳ್ಳರು ಮೊದಲೇ ನಿರ್ಧರಿಸಿದಂತೆ ನಿಂತು ಬಿಡುತ್ತಾರೆ. ಬಳಿಕ ಅಮೂಲ್ಯ ವಸ್ತುಗಳನ್ನು ಟಾರ್ಗೆಟ್ ಮಾಡುತ್ತಾರೆ. ರೈಲು ಚಲಿಸಲು ಆರಂಭಿಸುತ್ತಿದ್ದಂತೆ ಕಿಟಕಿಯಿಂದ ಕೈಹಾಕಿ ಫೋನ್ ಸೇರಿದಂತೆ ಅಮೂಲ್ಯ ವಸ್ತುಗಳನ್ನು ಎಗರಿಸುತ್ತಾರೆ.
ವಂದೇ ಭಾರತ್ ರೈಲಿನಲ್ಲಿ ಹಳಸಿದ ಆಹಾರ : ಪ್ರಯಾಣಿಕನ ದೂರಿಗೆ ಸ್ಪಂದಿಸಿದ ರೈಲ್ವೆ
ಹೀಗೆ ಈ ಕಳ್ಳರ ಗ್ಯಾಂಗ್ ಸಜ್ಜಾಗಿತ್ತು. ಒಂದು ಬೋಗಿಯ ಕಿಟಕಿ ಬದಿಯಲ್ಲಿ ಪ್ರಯಾಣಿಕ ಫೋನ್ ನೋಡುತ್ತಾ ಕುಳಿತಿದ್ದ. ಈ ಪ್ರಾಯಣಿಕನ ಟಾರ್ಗೆಟ್ ಮಾಡಿದ ಕಳ್ಳ, ರೈಲು ಚಲಿಸುತ್ತಿದ್ದಂತೆ ಫೋನ್ ಕದಿಯುವ ಪ್ರಯತ್ನ ಮಾಡಿದ್ದಾರೆ. ಆದರೆ ಪ್ರಯಾಣಿಕನ ಕಳ್ಳನ ಕೈಗಳನ್ನು ಹಿಡಿದಿದ್ದಾನೆ. ಇತ್ತ ಸಹ ಪ್ರಯಾಣಿಕರು ಕಳ್ಳನ ಹಿಡಿದಿದ್ದಾರೆ. ರೈಲು ನಿಧಾನವಾಗಿ ಸಂಚಾರ ಆರಂಭಿಸಿದೆ. ಆದರೆ ಕಳ್ಳನ ಕೈಗಳನ್ನು ಮಾತ್ರ ಬಿಡಲೇ ಇಲ್ಲ. ಇದರಿಂದ ಕಳ್ಳ ಕಿಟಕಿಯಲ್ಲಿ ನೇತಾಡುತ್ತಾ, ಪರಿಪರಿಯಾಗಿ ಬೇಡಿದ್ದಾನೆ. ಆದರೆ ಪ್ರಯಾಣಿಕರು ಪಾಠ ಕಲಿಸಲು ಬರೋಬ್ಬರಿ ಒಂದು ಕಿಲೋಮೀಟರ್ ದೂರ ಇದೇ ರಿೀತಿ ಎಳೆದೊಯ್ದಿದ್ದಾರೆ.
ರೈಲು ಹಳಿಗಳನ್ನು ಬದಲಿಸುವ ಬಳಿ ನಿಧಾನವಾಗಿದೆ. ಅಷ್ಟರಲ್ಲೇ ತನ್ನ ಗ್ಯಾಂಗ್‌ನ ಇತರ ಸದಸ್ಯರು ಆಗಮಿಸಿದ್ದಾರೆ. ಕೋಲು ಹಾಗೂ ಬಡಿಗೆ ಮೂಲಕ ಕಿಟಕಿಯಿಂದ ಪ್ರಯಾಣಿಕರ ಗಾಯಗೊಳಿಸಲು ಮುಂದಾಗಿದ್ದಾರೆ. ಇದರಿಂದ ಪ್ರಯಾಣಿಕರು ಕಳ್ಳನ ಬಿಟ್ಟಿದ್ದಾರೆ.ಈ ವಿಡಿಯೋವನ್ನು ಸಹ ಪ್ರಯಾಣಿಕರು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಭಾರಿ ವೈರಲ್ ಆಗಿದೆ.
ಕೆಂಗೇರಿ ಬಳಿ ಎಕ್ಸ್‌ಪ್ರೆಸ್ ರೈಲು ಮುಕ್ಕಾಲು ಗಂಟೆ ನಿಲುಗಡೆ, ಜ್ಞಾನಭಾರತಿ ಮೆಟ್ರೋ ಬಳಿ ನಿಲ್ಲಿಸುವಂತೆ ಒತ್ತಾಯ
