Asianet Suvarna News Asianet Suvarna News

ತೆರೆದುಕೊಳ್ಳದ ಪ್ಯಾರಾಗ್ಲೈಡಿಂಗ್ ಮೇಲ್ಪದರ: 50 ಅಡಿ ಮೇಲಿಂದ ಬಿದ್ದು ಕೊರಿಯಾ ಪ್ರಜೆ ಸಾವು

ಪ್ಯಾರಾಗ್ಲೈಡಿಂಗ್ ಸಾಹಸ ಕ್ರೀಡೆಯ ವೇಳೆ ದುರಂತವೊಂದು ಸಂಭವಿಸಿದ್ದು, ಈ ಕ್ರೀಡೆಯಲ್ಲಿ ಭಾಗಿಯಾದ ದಕ್ಷಿಣ ಕೊರಿಯಾದ ವ್ಯಕ್ತಿಯೊಬ್ಬರು 50 ಅಡಿ ಎತ್ತರದಿಂದ ಬಿದ್ದು ಸಾವನ್ನಪ್ಪಿದ್ದಾರೆ. ಗುಜರಾತ್‌ನ ಮೆಹ್ಸಾನ್ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ.

tragedy erupts in paragliding adventure, South Korea national died in gujarats mehsan akb
Author
First Published Dec 25, 2022, 4:46 PM IST

ಮೆಹ್ಸಾನ್: ಪ್ಯಾರಾಗ್ಲೈಡಿಂಗ್ ಸಾಹಸ ಕ್ರೀಡೆಯ ವೇಳೆ ದುರಂತವೊಂದು ಸಂಭವಿಸಿದ್ದು, ಈ ಕ್ರೀಡೆಯಲ್ಲಿ ಭಾಗಿಯಾದ ದಕ್ಷಿಣ ಕೊರಿಯಾದ ವ್ಯಕ್ತಿಯೊಬ್ಬರು 50 ಅಡಿ ಎತ್ತರದಿಂದ ಬಿದ್ದು ಸಾವನ್ನಪ್ಪಿದ್ದಾರೆ. ಗುಜರಾತ್‌ನ ಮೆಹ್ಸಾನ್ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ. ನಿನ್ನೆ ಸಂಜೆ 5.30ರ ಸುಮಾರಿಗೆ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಮೆಹ್ಸಾನ್ (Mehsana) ಜಿಲ್ಲೆಯ ಕಾದಿ ನಗರದ (Kadi town) ಸಮೀಪವಿರುವ ವಿಸ್ತಾಪುರ (Visatpura) ಜಿಲ್ಲೆಯಲ್ಲಿ ಈ ಅವಘಡ ಸಂಭವಿಸಿದ್ದು, ದಕ್ಷಿಣ ಕೊರಿಯಾದ ಶಿನ್ ಬ್ಯೊಂಗ್ ಮೂನ್ (Shin Byeong Moon) ಎಂಬುವವರು 50 ಅಡಿ ಎತ್ತರದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.

ಪ್ಯಾರಾಗ್ಲೈಡಿಂಗ್ ಸಾಹ ಕ್ರೀಡೆಯಾಡಲು ಹೊರಟ ಶಿನ್ ಬ್ಯೊಂಗ್ ಅವರ ಪ್ಯಾರಾಗ್ಲೈಡರ್‌ನ ಮೇಲಾವರಣವನೂ( ಮೇಲ್ಪದರ) ಸರಿಯಾಗಿ ತೆರೆದುಕೊಳ್ಳಲು ವಿಫಲವಾದ ಹಿನ್ನೆಲೆಯಲ್ಲಿ ಸಮತೋಲನ ಕಳೆದುಕೊಂಡು ಮೇಲಿನಿಂದ ಕೆಳಗೆ ಬಿದ್ದು ಅವರು ಸಾವನ್ನಪ್ಪಿದ್ದಾರೆ ಎಂದು ಕಡಿ ಪೊಲೀಸ್ ಸ್ಟೇಷನ್‌ನ ನಿಕುಂಜಿ ಪಟೇಲ್ (Nikunj Patel)ಹೇಳಿದ್ದಾರೆ. 

50 ಅಡಿ ಎತ್ತರದಿಂದ ಕೆಳಗೆ ಬಿದ್ದು ಪ್ರಜ್ಞಾಶೂನ್ಯರಾದ ಅವರನ್ನು ಕೂಡಲೇ ಅವರ ಸ್ನೇಹಿತರು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಚಿಕಿತ್ಸೆ ವೇಳೆ  ಶಿನ್ ಬ್ಯೊಂಗ್ ಮೂನ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವೈದ್ಯರ ಪ್ರಕಾರ, ಈ ವ್ಯಕ್ತಿಗೆ ಮೇಲಿನಿಂದ ಕೆಳಗೆ ಬೀಳುವ ವೇಳೆಯೇ ಆಘಾತದಿಂದ ಹೃದಯಾಘಾತವಾಗಿದೆ ಎಂದು ಕೆಲ ಅಧಿಕೃತ ಮೂಲಗಳು ತಿಳಿಸಿವೆ.  ಮೃತ ದಕ್ಷಿಣ ಕೊರಿಯಾ ಪ್ರಜೆ ಶಿನ್ ಹಾಗೂ ಅವರ ಸ್ನೇಹಿತರು ವಡೋದರಾಕ್ಕೆ (Vadodara) ಪ್ರವಾಸಕ್ಕೆ ಬಂದಿದ್ದು, ಅಲ್ಲಿ ತಮ್ಮ ಪರಿಚಯಸ್ಥರನ್ನು ಭೇಟಿಯಾಗಿದ್ದರು, ಅವರು ಕಾದಿ ನಗರದ ವಿಸ್ತಾರ್‌ಪುರ ಗ್ರಾಮದಲ್ಲಿರುವ ಪ್ಯಾರಾ ಗ್ಲೈಡಿಂಗ್ ಸಾಹಸ ಕ್ರೀಡಾಸ್ಥಳಕ್ಕೆ ಅವರನ್ನು ಕರೆದುಕೊಂಡು ಬಂದಿದ್ದರು. ನಂತರ ಶಿನ್ ಹಾಗೂ ಆತನ ಸ್ನೇಹಿತರು ಪ್ಯಾರಾಗ್ಲೈಡಿಂಗ್ ಸಾಹಸ ಕ್ರೀಡೆಯಾಡಲು ಹೋಗಿದ್ದರು ಎಂದು ಪೊಲೀಸ್ ಇನ್ಸ್‌ಪೆಕ್ಟರ್ ನಿಕುಂಜಿ ಪಟೇಲ್ ಹೇಳಿದ್ದಾರೆ. 

Parasailing Rope Cuts Off: ತುಂಡಾದ ರೋಪ್‌... ಸಮುದ್ರಕ್ಕೆ ಬಿದ್ದ ಇಬ್ಬರು ಮಹಿಳೆಯರು

ಈ ಅಸಹಜ ಸಾವಿನ ಬಗ್ಗೆ ಕಾದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತ್ರಸ್ತನ ಸಂಬಂಧಿಗಳು ಹಾಗೂ ವಡೋದರಾದಲ್ಲಿರುವ ಆತನ ಸ್ನೇಹಿತರು ಹಾಗೂ ಕೊರಿಯನ್ ರಾಯಭಾರಿ ಕಚೇರಿಗೆ ಈ ಅನಾಹುತದ ಬಗ್ಗೆ ತಿಳಿಸಲಾಗಿದೆ. ಅಲ್ಲದೇ ಆತನ ಮೃತದೇಹವನ್ನು ಸ್ವದೇಶಕ್ಕೆ ತಲುಪಿಸಲು ಎಲ್ಲಾ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಮೀಮ್‌ ಮಾಡ್ತಿದ್ದವನಿಗೆ ಒಲಿದು ಬಂದ ಅದೃಷ್ಟ: ಆಲಿಯಾ ಜೊತೆ ಜಾಹೀರಾತಿನಲ್ಲಿ ಭಾಗಿ

Follow Us:
Download App:
  • android
  • ios