Asianet Suvarna News Asianet Suvarna News

ಉಚಿತ ಸ್ಯಾನಿಟರಿ ಪ್ಯಾಡ್ ಕೇಳಿದ ಬಾಲಕಿ: ನಾಳೆ ____ ಕೇಳ್ತೀರಾ ಎಂದ ಮಹಿಳಾ ಅಭಿವೃದ್ಧಿ ನಿಗಮದ ನಿರ್ದೇಶಕಿ

ಬಿಹಾರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಾಲಾ ಮಕ್ಕಳು ಋತುಸ್ರಾವದ ವೇಳೆ ಬಳಸುವ ಸ್ಯಾನಿಟರಿ ಪ್ಯಾಡ್ ಅನ್ನು ಉಚಿತವಾಗಿ ನೀಡುವಂತೆ ಬಿಹಾರದ ಮಹಿಳಾ ಅಭಿವೃದ್ಧಿ ನಿಗಮದ ನಿರ್ದೇಶಕರ ಬಳಿ ಕೇಳಿದ್ದಾರೆ. ಆದರೆ ಇದಕ್ಕೆ ಆಕೆ ನೀಡಿದ ಉತ್ತರ ಶಾಲಾ ಮಕ್ಕಳನ್ನು ಬೆಚ್ಚಿ ಬೀಳಿಸಿದೆ.

tommorrow you ask condom, Bihar Women Development Corporation director Irresponsible answer to student who ask pad akb
Author
First Published Sep 28, 2022, 9:12 PM IST

ಬಿಹಾರ: ಋತುಚಕ್ರದ ವೇಳೆ ಮಹಿಳೆಯರು ಬಳಸುವ ಸ್ಯಾನಿಟರಿ ಪ್ಯಾಡ್ ಕೇಳಿದ ಶಾಲಾ ಮಕ್ಕಳಿಗೆ ಬಿಹಾರ ಮಹಿಳಾ ಆಯೋಗದ ಮುಖ್ಯಸ್ಥೆ ಬೇಜವಾಬ್ದಾರಿಯುತವಾಗಿ ಉತ್ತರಿಸಿದ ಆಘಾತಕಾರಿ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಾಲಾ ಮಕ್ಕಳು ಋತುಸ್ರಾವದ ವೇಳೆ ಬಳಸುವ ಸ್ಯಾನಿಟರಿ ಪ್ಯಾಡ್ ಅನ್ನು ಉಚಿತವಾಗಿ ನೀಡುವಂತೆ ಬಿಹಾರದ ಮಹಿಳಾ ಅಭಿವೃದ್ಧಿ ನಿಗಮದ ನಿರ್ದೇಶಕರ ಬಳಿ ಕೇಳಿದ್ದಾರೆ. ಆದರೆ ಇದಕ್ಕೆ ಆಕೆ ನೀಡಿದ ಉತ್ತರ ಶಾಲಾ ಮಕ್ಕಳನ್ನು ಬೆಚ್ಚಿ ಬೀಳಿಸಿದೆ.

ಇವತ್ತು  ಉಚಿತ ಸ್ಯಾನಿಟರಿ ಪ್ಯಾಡ್ (sanitary napkins) ಕೇಳುವ ನೀವು ನಾಳೆ ಕಾಂಡೋಮ್ (condoms) ಕೇಳುವಿರಿ ಎಂದು ಹೇಳಿದ್ದಾರೆ. ಇದನ್ನು ಕೇಳಿ ಉಚಿತ ಸ್ಯಾನಿಟರಿ ಪ್ಯಾಡ್ ಕೇಳಿದ ಮಕ್ಕಳು ಮಾತ್ರವಲ್ಲದೇ ಅಲ್ಲಿ ಇದ್ದವರೆಲ್ಲಾ ಒಂದು ಕ್ಷಣ ದಂಗಾಗಿದ್ದಾರೆ. ಬಿಹಾರದಲ್ಲಿ(Bihar) ನಡೆದ ಕಾರ್ಯಕ್ರಮವೊಂದರಲ್ಲಿ ಈ ಘಟನೆ ನಡೆದಿದೆ. ಬಿಹಾರದ ಮಹಿಳಾ ಅಭಿವೃದ್ಧಿ ನಿಗಮದ ನಿರ್ದೇಶಕಿ ಹರ್ಜೋತ್ ಕೌರ್ ಎಂಬುವವರೇ ಹೀಗೆ ಬಾಲಕಿಯರಿಗೆ ಬೇಜಾವಾಬ್ದಾರಿಯುತವಾಗಿ ಉತ್ತರಿಸುವ ಮೂಲಕ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ಶಾಲಾ ಬಾಲಕಿಯೊಬ್ಬಳು (School Girl) ಸರ್ಕಾರ ಈಗಾಗಲೇ ಉಚಿತವಾಗಿ ಸಾಕಷ್ಟು ವಸ್ತುಗಳನ್ನು ನೀಡುತ್ತಿದೆ. ಹೀಗಿರುವಾಗ 20 ರಿಂದ 30 ರೂಪಾಯಿ ಬೆಲೆಯ ಸ್ಯಾನಿಟರಿ ಪ್ಯಾಡ್‌ಗಳನ್ನು ಉಚಿತವಾಗಿ ನೀಡಲು ಅವರಿಗೆ ಸಾಧ್ಯವಿಲ್ಲವೇ.  ನಮಗೆ ಉಚಿತ ಸ್ಯಾನಿಟರಿ ಪ್ಯಾಡ್ ನೀಡಿ, ಅದನ್ನು ಉಚಿತವಾಗಿ ನೀಡಿದರೆ ಅದಕ್ಕಾಗಿ ನಾವು ಬೇರೆಯವರನ್ನು ಅವಲಂಬಿಸಬೇಕಾದ ಅಗತ್ಯ ಇಲ್ಲ ಎಂದು ಮಹಿಳಾ ಅಭಿವೃದ್ಧಿ ನಿಗಮದ ನಿರ್ದೇಶಕಿ ಹರ್ಜೋತ್ ಕೌರ್ (Harjoth kaur) ಬಳಿ ಬಾಲಕಿಯರು ಕೇಳಿದ್ದಾರೆ.

ಸ್ಯಾನಿಟರಿ ಪ್ಯಾಡ್ ಮೇಲೆ ದೇವರು; ವಿಕೃತಿ ಮೆರೆದ ನಿರ್ದೇಶಕನ ವಿರುದ್ಧ ತೀವ್ರ ಆಕ್ರೋಶ

ಇದಕ್ಕೆ ಪ್ರತಿಕ್ರಿಯಿಸಿದ ಐಎಎಸ್ ಅಧಿಕಾರಿಯೂ ಆಗಿರುವ ಕೌರ್, ನಿಮ್ಮ ಬೇಡಿಕೆಗಳಿಗೇನಾದರು ಅಂತ್ಯವಿದೆಯೇ? ನಾಳೆ ನೀವು ಸರ್ಕಾರ (Bihar Govt) ನಮಗೆ ಜೀನ್ಸ್ ಹಾಗೂ ಸುಂದರವಾದ ಶೂಗಳನ್ನು ನೀಡಲು ಸಾಧ್ಯವಿಲ್ಲವೇ ಎಂದು ಕೇಳುವಿರಿ. ಅಲ್ಲದೇ ಕೊನೆಯಲ್ಲಿ ಕುಟುಂಬ ಯೋಜನೆಯ ವಿಚಾರ ಬಂದಾಗ ನೀವು ಉಚಿತ ಕಾಂಡೋಮ್ ಕೂಡ ಕೇಳಬಹುದು ಎಂದು ಹೇಳಿದ್ದಾರೆ. ಯಾಕೆ ಎಲ್ಲವನ್ನು ಸರ್ಕಾರವೇ ಕೊಡಬೇಕು ಎಂದು ನೀವು ಬಯಸುತ್ತೀರಿ, ಇಂತಹ ಚಿಂತನೆಗಳು ಸರಿಯಲ್ಲ ಎಂದರು.

ಭಾರತದಲ್ಲಿ ಕೇವಲ ಶೇ.36ರಷ್ಟು ಮಹಿಳೆಯರು ಮಾತ್ರ ಪಿರಿಯಡ್ಸ್ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್‌ ಬಳಸ್ತಾರೆ !

ಇದಕ್ಕೆ ಪ್ರತಿಯಾಗಿ ಬಾಲಕಿ, ಸರ್ಕಾರವು ಚುನಾವಣೆಯ ಸಮಯದಲ್ಲಿ ಇಂತಹ ಸಾಕಷ್ಟು ಭರವಸೆಗಳನ್ನು ನೀಡುತ್ತದೆ ಎಂದು ತಿರುಗೇಟು ನೀಡಿದಾಗ ಪ್ರತಿಕ್ರಿಯಿಸಿದ ಹರ್ಜೊತ್ ಕೌರ್, ವೋಟು ಹಾಕಬೇಡಿ, ದೇಶವನ್ನು ಪಾಕಿಸ್ತಾನ ಮಾಡಿ ಎಂದು ಬೇಜಾವಾಬ್ದಾರಿಯುತವಾಗಿ ಉತ್ತರಿಸಿದ್ದಾರೆ. ಹರ್ಜೊತ್ ಉದ್ಧಟತನದ ಈ ಹೇಳಿಕೆ ಈಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶಾಲಾ ವಿದ್ಯಾರ್ಥಿಯೊಬ್ಬಳಿಗೆ ಈ ರೀತಿಯಾಗಿ ಉತ್ತರಿಸಿದ್ದಕ್ಕೆ ಜನ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 
 

Follow Us:
Download App:
  • android
  • ios