Asianet Suvarna News Asianet Suvarna News

ಇಂದು ರಾಷ್ಟ್ರೀಯ ಮತದಾರರ ದಿನ: ಹೀಗಿದೆ ಇತಿಹಾಸ

  • ಇವತ್ತು ರಾಷ್ಟ್ರೀಯ ಮತದಾರರ ದಿನ
  • ಪ್ರತಿ ವರ್ಷ ಜನವರಿ 25 ರಂದು ಆಚರಣೆ
  • ಮತದಾರರ ದಿನದ ಹಿನ್ನೆಲೆ ಏನು
     
today National Voters Day here is the History akb
Author
Bangalore, First Published Jan 25, 2022, 10:47 AM IST

ನವದೆಹಲಿ(ಜ.25):  ಇಂದು ರಾಷ್ಟ್ರೀಯ ಮತದಾರರ ದಿನವಾಗಿದೆ. ಪ್ರತಿ ವರ್ಷ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವಾಗಿ ಆಚರಿಸಲಾಗುತ್ತಿದೆ. ಹೆಚ್ಚಿನ ಯುವ ಮತದಾರರನ್ನು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಉತ್ತೇಜಿಸುವ ಸಲುವಾಗಿ ಮೊದಲ ರಾಷ್ಟ್ರೀಯ ಮತದಾರರ ದಿನವನ್ನು ಜನವರಿ 25, 2011 ರಂದು ಆಚರಿಸಲಾಯಿತು. 

ದೇಶದ ಮತದಾರರನ್ನು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಉತ್ತೇಜಿಸಲು ಪ್ರತಿ ವರ್ಷ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಇದು 12ನೇ ವರ್ಷದ ಮತದಾರರ ದಿನಾಚರಣೆಯಾಗಿದೆ. ಹೆಚ್ಚಿನ ಯುವ ಮತದಾರರನ್ನು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಉತ್ತೇಜಿಸಲು  ಆಗಿನ ಪ್ರಧಾನಿ ಮನಮೋಹನ್ ಸಿಂಗ್ ( Manmohan Singh) ನೇತೃತ್ವದ ಕೇಂದ್ರ ಸರ್ಕಾರವೂ ಈ ದಿನದ ಆಚರಣೆಗೆ ಕಾನೂನು ಸಚಿವಾಲಯದ ಪ್ರಸ್ತಾವನೆಗೆ ಅನುಮೋದನೆ ನೀಡಿತು. ನಂತರ ಮೊದಲ ರಾಷ್ಟ್ರೀಯ ಮತದಾರರ ದಿನವನ್ನು ಜನವರಿ 25, 2011 ರಂದು ಆಚರಿಸಲಾಯಿತು.

Assembly Elections 2022| ಪಂಚರಾಜ್ಯ ಪೈಕಿ 4ರಲ್ಲಿ ಬಿಜೆಪಿಗೇ ಚಾನ್ಸ್‌: ಸಿ ವೋಟರ್‌ ಸಮೀಕ್ಷೆ!

ಆಗ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆಯಾಗಿದ್ದ ಅಂಬಿಕಾ ಸೋನಿ (Ambika Soni) ಅವರು 18 ವರ್ಷ ವಯಸ್ಸಿನ ಹೊಸ ಮತದಾರರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಕಡಿಮೆ ಆಸಕ್ತಿ ತೋರಿಸುತ್ತಿರುವುದರ ಬಗ್ಗೆ ಗಮನ ಸೆಳೆದಿದ್ದರು.  ಈ ಸಮಸ್ಯೆಯನ್ನು ಪರಿಹರಿಸಲು,  ಚುನಾವಣಾ ಆಯೋಗವು ಭಾರತದಾದ್ಯಂತ ಎಲ್ಲಾ ಮತಗಟ್ಟೆಗಳಲ್ಲಿ ಪ್ರತಿ ವರ್ಷ ಜನವರಿ 1 ರಂದು 18 ವರ್ಷ  ತುಂಬಿದ ಎಲ್ಲಾ ಅರ್ಹ ಮತದಾರರನ್ನು ಗುರುತಿಸಲು ನಿರ್ಧರಿಸಿದೆ ಎಂದು ಹೇಳಿದ ಸೋನಿ, ಅಂತಹ ಮತದಾರರನ್ನು ನೋಂದಾಯಿಸಲಾಗುತ್ತದೆ ಮತ್ತು ಪ್ರತಿ ವರ್ಷ ಜನವರಿ 25 ರಂದು ಚುನಾವಣಾ ಫೋಟೋ ಗುರುತಿನ ಚೀಟಿ (EPIC) ನೀಡಲಾಗುವುದು ಎಂದು ಹೇಳಿದ್ದರು. 

Election Laws Amendment Bill: ವೋಟರ್‌ ಐಡಿಗೆ ಆಧಾರ್‌ ಲಿಂಕ್‌: ಲೋಕಸಭೆಯಲ್ಲಿ ಮಸೂದೆ ಪಾಸ್‌! 

 ಚುನಾವಣೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವುದು, ಮತದಾನಕ್ಕೆ ಅವಕಾಶ ಮತ್ತು ಭಾಗವಹಿಸುವಂತೆ ಮಾಡುವುದು'. ಈ ವರ್ಷದ ರಾಷ್ಟ್ರೀಯ ಮತದಾರರ ದಿನದ ವಿಷಯವಾಗಿದೆ. ಈ ಕಾರ್ಯಕ್ರಮಕ್ಕೆ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು (M Venkaiah Naidu) ಮುಖ್ಯ ಅತಿಥಿಯಾಗಬೇಕಿತ್ತು. ಆದಾಗ್ಯೂ, ಅವರು ಕೋವಿಡ್ -19 ಸೋಂಕಿಗೆ ಒಳಗಾದ ನಂತರ ದೈಹಿಕವಾಗಿ ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ ಆದರೆ ಆನ್‌ಲೈನ್‌ ಮೂಲಕ ಸಂದೇಶ ನೀಡಲಿದ್ದಾರೆ. 

ಕೇಂದ್ರ ಕಾನೂನು ಸಚಿವ (Union law minister) ಕಿರಣ್ ರಿಜಿಜು (Kiren Rijiju) ಈ ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ, 2021-22 ನೇ ಸಾಲಿನ ಅತ್ಯುತ್ತಮ ಚುನಾವಣಾ ಕಾರ್ಯಕ್ಷಮತೆಗಾಗಿ ರಾಷ್ಟ್ರೀಯ ಪ್ರಶಸ್ತಿಗಳನ್ನು ವಿವಿಧ ಕ್ಷೇತ್ರಗಳಲ್ಲಿ ಚುನಾವಣಾ ನಿರ್ವಹಣೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ರಾಜ್ಯ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ನೀಡಲಾಗುವುದು. ಮತ್ತೊಂದೆಡೆ, ಈ ಕಾರ್ಯಕ್ರಮದಲ್ಲಿ ಹೊಸದಾಗಿ ಸೇರ್ಪಡೆಗೊಂಡ ಮತದಾರರಿಗೆ ಮತದಾರರ ಚೀಟಿಯನ್ನು ಹಸ್ತಾಂತರಿಸಲಾಗುವುದು.

ರಾಷ್ಟ್ರೀಯ ಮತದಾರರ ದಿನಾಚರಣೆಯ ಈ ಸಂದರ್ಭದಲ್ಲಿ, ಸಾಮಾಜಿಕ ಜಾಲತಾಣವಾದ ಕೂ ಆಪ್‌ ಬಹು ಭಾಷಾ ಮಾರ್ಗದರ್ಶಿಯನ್ನು ಬಿಡುಗಡೆ ಮಾಡಿದೆ.   ಐದು ರಾಜ್ಯಗಳಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಸಂದರ್ಭದಲ್ಲಿ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಾಗೂ ಮತದಾರರ ಹಕ್ಕುಗಳು ಮತ್ತು ಜವಾಬ್ದಾರಿಗಳ ಕುರಿತು ಮೊದಲ ಬಾರಿಗೆ ಮತ ಚಲಾಯಿಸುವವರಿಗೆ ಮಾಹಿತಿ ನೀಡುವುದು ಈ ಮಾರ್ಗದರ್ಶಿಯ ಗುರಿಯಾಗಿದೆ.  

Follow Us:
Download App:
  • android
  • ios