Election Laws Amendment Bill: ವೋಟರ್ ಐಡಿಗೆ ಆಧಾರ್ ಲಿಂಕ್: ಲೋಕಸಭೆಯಲ್ಲಿ ಮಸೂದೆ ಪಾಸ್!
*ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಧ್ವನಿಮತದಿಂದ ಮಸೂದೆ ಅಂಗೀಕಾರ
*ಕಾಯ್ದೆ ತಿದ್ದುಪಡಿಯಿಂದ ಮತದಾರರ ಖಾಸಗಿತನಕ್ಕೆ ಧಕ್ಕೆ: ವಿಪಕ್ಷಗಳ ಆಕ್ರೋಶ
*ಆರೋಪ ತಳ್ಳಿಹಾಕಿದ ಸರ್ಕಾರ: ಚುನಾವಣಾ ಸುಧಾರಣೆಯಲ್ಲಿ ಮಹತ್ವದ ಹೆಜ್ಜೆ
*ಆಧಾರ್ ನೀಡಿಕೆ ಕಡ್ಡಾಯವಲ್ಲ, ಐಚ್ಛಿಕ, ಅನ್ಯ ದಾಖಲೆಗಳನ್ನೂ ನೀಡಲು ಅವಕಾಶ
*ಮತಪಟ್ಟಿಗೆ ಹೆಸರು ಸೇರಿಸಲು ಹೊಸ ಮತದಾರರಿಗೆ 4 ಕಟಾಫ್ ದಿನದ ಚಾನ್ಸ್
ನವದೆಹಲಿ (ಡಿ. 21): ಮತದಾರರ ಗುರುತಿನ ಪಟ್ಟಿಗೆ (Voter List) ಆಧಾರ್ ಸಂಖ್ಯೆಯನ್ನು ಜೋಡಿಸಲು (Aadhaar) ಅವಕಾಶ ಕಲ್ಪಿಸುವುದು, ನವ ಮತದಾರರಿಗೆ ಮತಪಟ್ಟಿಗೆ ಹೆಸರು ಸೇರಿಸಲು ವರ್ಷಕ್ಕೆ ನಾಲ್ಕು ಕಟಾಫ್ ದಿನ ನೀಡುವುದೂ ಸೇರಿದಂತೆ ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಗೆ ಅವಕಾಶ ಕಲ್ಪಿಸುವ ಚುನಾವಣಾ ಕಾನೂನು (ತಿದ್ದುಪಡಿ) ಕಾಯ್ದೆ, 2021ಕ್ಕೆ ಲೋಕಸಭೆ ಸೋಮವಾರ ತನ್ನ ಅನುಮೋದನೆ ನೀಡಿದೆ. ಇದರಿಂದಾಗಿ ಇನ್ನು ವಿಧೇಯಕ ರಾಜ್ಯಸಭೆಯಲ್ಲಿ ಮಂಡನೆಯಾಗಲಿದೆ.
ಲೋಕಸಭೆಯಲ್ಲಿ ತಿದ್ದುಪಡಿ ಕಾಯ್ದೆ ಕುರಿತು ವಿಪಕ್ಷಗಳ ತೀವ್ರ ಆಕ್ಷೇಪದ ನಡುವೆಯೂ ಸಣ್ಣ ಚರ್ಚೆ ಬಳಿಕ ಧ್ವನಿಮತದಿಂದ ಮಸೂದೆಯನ್ನು ಅಂಗೀಕರಿಸಲಾಯಿತು. ಒಬ್ಬನೇ ಮತದಾರರ ಹಲವು ಕ್ಷೇತ್ರಗಳಲ್ಲಿ ಹೆಸರು ನೊಂದಾಯಿಸುವುದನ್ನು ತಪ್ಪಿಸುವ ಉದ್ದೇಶ ಹೊಂದಿರುವ ಈ ತಿದ್ದುಪಡಿ ಮಸೂದೆಯಡಿ, ಮತಪಟ್ಟಿಗೆ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯವಲ್ಲ. ಕೇವಲ ಐಚ್ಛಿಕ. ಮತದಾರ ಬಯಸಿದರಷ್ಟೇ ಆತನ ಆಧಾರ್ ಸಂಖ್ಯೆಯನ್ನು ಗುರುತಿನ ಪಟ್ಟಿಜೊತೆ ಜೋಡಿಸಲಾಗುವುದು.
ವಿಪಕ್ಷಗಳ ಆಕ್ರೋಶ:
ಮಸೂದೆ ಕುರಿತು ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಇದು ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆ. ಇದನ್ನು ಸಂಸದೀಯ ಸ್ಥಾಯಿ ಸಮಿತಿ ಪರಿಶೀಲನೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್‌ನವರೇ ಆದ ಮನೀಶ್ ತಿವಾರಿ, ಇದು 2017ರಲ್ಲಿ ನಿವೃತ್ತ ನ್ಯಾ.ಕೆ.ಎಸ್.
ಇದನ್ನೂ ಓದಿ: Sensex crashes ದೇಶದಲ್ಲಿ ಓಮಿಕ್ರಾನ್ ಹೆಚ್ಚಳದ ಆತಂಕ, ಸೆನ್ಸೆಕ್ಸ್ 1189 ಅಂಕಗಳ ಮಹಾಪತನ
ಪುಟ್ಟಸ್ವಾಮಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಉಲ್ಲಂಘನೆ ಎಂದರೆ, ಶಶಿ ತರೂರ್ ಮಾತನಾಡಿ, ‘ಆಧಾರ್ ಭಾರತದ ನಿವಾಸಿಗಳಿಗೆ ನೀಡಿರುವ ಗುರುತಿನ ಚೀಟಿಯೇ ಹೊರತೂ, ಭಾರತದಲ್ಲಿರುವ ಎಲ್ಲಾ ಪ್ರಜೆಗಳಿಗೂ ನೀಡಿದ ಗುರುತಿನ ಚೀಟಿಯಲ್ಲ. ಇದೀಗ ಸರ್ಕಾರ, ಮತದಾರರ ಪಟ್ಟಿಜೊತೆ ಆಧಾರ್ ಜೋಡಿಸುವ ಮೂಲಕ ಭಾರತೀಯರಲ್ಲದವರಿಗೂ ಮತದಾನದ ಹಕ್ಕು ಕಲ್ಪಿಸಲು ಮುಂದಾಗಿದೆ’ ಎಂದು ಆರೋಪಿಸಿದರು.
ಸರ್ಕಾರದ ಸ್ಪಷ್ಟನೆ:
ವಿಪಕ್ಷಗಳ ಆರೋಪಕ್ಕೆ ಸ್ಪಷ್ಟನೆ ನೀಡಿದ ಕಾನೂನು ಖಾತೆ ಸಚಿವ ಕಿರಣ್ ರಿಜಿಜು, ‘ಗುರುತನ್ನು ಖಚಿತಪಡಿಸಲಷ್ಟೇ ಆಧಾರ್ ವ್ಯವಸ್ಥೆಯನ್ನು ಬಳಸಿಕೊಳ್ಳಲಾಗುತ್ತದೆ. ಇದರಿಂದಾಗಿ ನಕಲಿ ಮತದಾನ ತಡೆಯುವ ಮೂಲಕ ಇಡೀ ಚುನಾವಣಾ ಪ್ರಕ್ರಿಯೆಯನ್ನು ಮತ್ತಷ್ಟುವಿಶ್ವಾಸಾರ್ಹವಾಗಿ ಮಾಡುವ ಉದ್ದೇಶವಿದೆ.
ಇದನ್ನೂ ಓದಿ: PM Modi meets top CEOs ಬಜೆಟ್‌ಗೂ ಮುನ್ನ ಪ್ರಮುಖ ಖಾಸಗಿ ಕಂಪನಿ ಸಿಇಒ ಜೊತೆ ಪ್ರಧಾನಿ ಮೋದಿ ಸಂವಾದ!
ಕಾನೂನು ಮತ್ತು ಸಿಬ್ಬಂದಿ ಕುರಿತ ಸಂಸದೀಯ ಸಮಿತಿ ಶಿಫಾರಸು ಮಾಡಿರುವ ಹಲವಾರು ಅಂಶಗಳನ್ನು ಈಗಾಗಲೇ ತಿದ್ದುಪಡಿ ಮಸೂದೆ ಒಳಗೊಂಡಿದೆ. ಹೀಗಾಗಿ ಇದನ್ನು ಮತ್ತೆ ಸಂಸದೀಯ ಸ್ಥಾಯಿ ಸಮಿತಿ ಪರಾಮರ್ಶೆಗೆ ಒಳಪಡಿಸುವ ಅಗತ್ಯವಿಲ್ಲ. ಮಸೂದೆ ಪೂರ್ಣವಾಗಿ ಆಧಾರ್‌ನ ಖಾಸಗಿತನ ಕುರಿತ ಸುಪ್ರೀಂಕೋರ್ಟ್‌ನ ತೀರ್ಪನ್ನು ಪಾಲಿಸುತ್ತದೆ’ ಎಂದು ಸ್ಪಷ್ಟನೆ ನೀಡಿದರು.
4 ಕಟಾಫ್ ಡೇಟ್:
ಪ್ರತಿ ವರ್ಷ ಜ.1ರಂದು ಅಥವಾ ಅದಕ್ಕಿಂತ ಮುಂಚೆ 18 ತುಂಬಿದವರಿಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡುವ ಅವಕಾಶವಿದೆ. ಆದರೆ ಆನಂತರ 18 ವರ್ಷ ತುಂಬಿದವರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಒಂದು ವರ್ಷ ಕಾಯಬೇಕಾಗಿದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಜ.1, ಏ.1, ಜು.1 ಹಾಗೂ ಅ.1ರಂದು 18 ವರ್ಷ ತುಂಬಿದವರು ಕೂಡ ಮತದಾರರ ಪಟ್ಟಿಗೆ ಹೆಸರು ಸೇರಿಸಬಹುದು ಎಂದು ಮಸೂದೆ ಹೇಳುತ್ತದೆ.
ಇದನ್ನೂ ಓದಿ: ರಸ್ತೆಗಳನ್ನು ನಟಿ ಹೇಮಾ ಮಾಲಿನಿ ಕೆನ್ನೆಗೆ ಹೋಲಿಸಿದ ಮಹಾರಾಷ್ಟ್ರ ಸಚಿವ
ಸೇನಾ ಸಿಬ್ಬಂದಿಯ ಪತ್ನಿಯನ್ನು ‘ಸೇವಾ ಮತದಾರರು’ ಎಂದು ನೋಂದಣಿ ಮಾಡಲು ಅವಕಾಶವಿದೆ. ಆದರೆ ಸೇನೆಯಲ್ಲಿರುವ ಮಹಿಳಾ ಸಿಬ್ಬಂದಿಯ ಪತಿಗೆ ಈ ಅವಕಾಶವಿಲ್ಲ. ಹೀಗಾಗಿ ಕಾಯ್ದೆಯಲ್ಲಿರುವ ‘ಪತ್ನಿ’ ಎಂಬ ಪದವನ್ನು ತೆಗೆದು ‘ಸಂಗಾತಿ’ ಎಂದು ಬದಲಿಸುವ ಪ್ರಸ್ತಾಪವೂ ವಿಧೇಯಕದಲ್ಲಿದೆ.