Asianet Suvarna News Asianet Suvarna News

ಭಾರತ-ಚೀನಾ ಯುದ್ಧಕ್ಕೆ 61 ವರ್ಷ: ಭಾರತೀಯರು ಎಂದಿಗೂ ಮರೆಯಲಾಗದ ವಾರ್

ನಾವು ನಮ್ಮ ಭವಿಷ್ಯವನ್ನು ‘ವಿಕಸಿತ ಭಾರತ’ ಎಂದು ನೋಡುತ್ತಿರುವಾಗ, ದುರ್ಬಲ ನಾಯಕತ್ವದಿಂದಾಗಿ ನಮ್ಮ ದೇಶ ಮತ್ತು ಜನರು ಮಾಡಿದ ತಪ್ಪುಗಳನ್ನು ನಾವು ಎಂದಿಗೂ ಮರೆಯಬಾರದು. ಈ ಸಂಘರ್ಷದಲ್ಲಿ ಸೇವೆ ಸಲ್ಲಿಸಿದ ಮತ್ತು ತ್ಯಾಗ ಮಾಡಿದ ಪ್ರತಿಯೊಬ್ಬ ವೀರ ಹೃದಯಗಳ ನೆನಪುಗಳು ಉಜ್ವಲವಾಗಲಿ. ಹಿಂದಿನ ತ್ಯಾಗಗಳು ನಮ್ಮ ಭವಿಷ್ಯದ ಹಾದಿ ಮತ್ತು ಕಾರ್ಯಗಳಿಗೆ ದಾರಿದೀಪವಾಗಲಿ.

Today marks 61 years of India China war Indians will never forget rav
Author
First Published Nov 21, 2023, 5:59 AM IST

- ರಾಜೀವ್‌ ಚಂದ್ರಶೇಖರ್‌

ಕೇಂದ್ರ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ಖಾತೆ ರಾಜ್ಯ ಸಚಿವರು

1962ರ ಯುದ್ಧದ ಸೋಲನ್ನು ನೆನಪಿಡಿ ಮತ್ತು ಎಂದಿಗೂ ಮರೆಯದಿರಿ, ಒಂದು ದುರ್ಬಲ ನಾಯಕತ್ವವು ರಾಷ್ಟ್ರವನ್ನು ಹೇಗೆ ದುರ್ಬಲಗೊಳಿಸುತ್ತದೆ ಎಂಬುದಕ್ಕೆ ಇದೇ ಸಾಕ್ಷಿ...

ಒಬ್ಬ ಮನುಷ್ಯ ತನ್ನ ಪೂರ್ವಜರ ಚಿತಾಭಸ್ಮಕ್ಕಾಗಿ ಹಾಗೂ ಅವನ ದೇವರು ಮತ್ತು ದೇವಾಲಯಗಳಿಗಾಗಿ ಭಯಭೀತವಾದ ವಿರೋಧಾಭಾಸಗಳನ್ನು ಎದುರಿಸುವುದಕ್ಕಿಂತ ಹೇಗೆ ಉತ್ತಮವಾಗಿ ಸಾಯಬಹುದು...

1962ರ ಭಾರತ- ಚೀನಾ ಯುದ್ಧದ ಸಮಯದಲ್ಲಿ ಭಾರತವನ್ನು ರಕ್ಷಿಸಲು ಸಹಿಸಿಕೊಂಡ ನೋವು, ಸಲ್ಲಿಸಿದ ಸೇವೆ ಮತ್ತು ತ್ಯಾಗ ಮಾಡಿದ ವೀರ ಹೃದಯಗಳ ಬಗ್ಗೆ ನಾವು ಯೋಚಿಸಿದಾಗಲೆಲ್ಲ ರೆಜಾಂಗ್‌ ಲಾ ಯುದ್ಧ ಸ್ಮಾರಕದ ಮೇಲೆ ಕೆತ್ತಲಾದ ಈ ಪದಗಳು ಪ್ರತಿಧ್ವನಿಸುತ್ತವೆ. ನಮ್ಮ ಆತ್ಮ ಸಾಕ್ಷಿಯು ಕೆಚ್ಚೆದೆಯ ಹೋರಾಟ ಮತ್ತು ತ್ಯಾಗದಿಂದ ನಿರ್ಮಿಸಲ್ಪಟ್ಟಿದೆ.

ಮೋದಿ ಭಾರತೀಯರ ಸುರಕ್ಷತೆ ಬಗ್ಗೆ ಬದ್ಧತೆ ಹೊಂದಿರುವ ನಾಯಕ: ರಾಜೀವ್ ಚಂದ್ರಶೇಖರ್

 

ಭಾರತೀಯ ವಾಯುಪಡೆಯ ವಾಯು ಯೋಧರು ವಿವಿಧ ತಾತ್ಕಾಲಿಕ ವಾಯುನೆಲೆಗಳಲ್ಲಿ ಯುದ್ಧದಲ್ಲಿ ಗಾಯಗೊಂಡ ಹಾಗೂ ವೀರ ಮರಣ ಹೊಂದಿದವರನ್ನು ವಾಪಸ್‌ ಕರೆತರಬೇಕಾದ ಸಮಯದಲ್ಲಿ ದೃಢವಾದ ಹಾಗೂ ದೃಢ ನಿಶ್ಚಯವುಳ್ಳ ಕಥೆಗಳನ್ನು ನನಗೆ ಹೇಳಿದ್ದಾರೆ. ಈ ವಾಯು ನೆಲೆಗಳಲ್ಲಿ ಲೆಕ್ಕವಿಲ್ಲದಷ್ಟು ಕಾರ್ಯಾಚರಣೆಗಳನ್ನು ನಡೆಸಿದ ಮತ್ತು ಅದಕ್ಕೆಂದೇ ಮೀಸಲಿರಿಸಿದ ಒಬ್ಬ ವೀರ ವಾಯು ಯೋಧರು ಅವುಗಳನ್ನು ನನಗೆ ವಿವರಿಸಿದ್ದರು. ಅವರು- ಲೆಫ್ಟಿನೆಂಟ್‌ ಎಂ.ಕೆ.ಚಂದ್ರಶೇಖರ್‌. ನನ್ನ ತಂದೆ.

ಆ ಯುದ್ಧವು ನಮ್ಮ ಇತಿಹಾಸದಲ್ಲಿ ನಿರ್ಣಾಯಕ ಮೈಲಿಗಲ್ಲಾಗಿ ಉಳಿದಿದೆ. ಅದನ್ನು ನಾವು ಎಂದಿಗೂ ಮರೆಯಬಾರದು ಅಥವಾ ಕ್ಷಮಿಸಬಾರದು. ಇದು ಮರೆಯಲಾಗದ ಅಧ್ಯಾಯವಾಗಿದ್ದು, ಅಲ್ಲಿ ಸಾವಿರಾರು ಧೈರ್ಯಶಾಲಿಗಳು ತ್ಯಾಗ ಮಾಡಿದರು ಮತ್ತು ಅವರ ಕುಟುಂಬಗಳು ಶಾಶ್ವತವಾಗಿ ಅನಾಥವಾದವು. ಆ ಕಾಲ ನಮ್ಮ ರಾಜಕೀಯ ಮತ್ತು ಮಿಲಿಟರಿ ನಾಯಕತ್ವದ ಉನ್ನತ ಮಟ್ಟದ ರಾಜಕೀಯ ವೈಫಲ್ಯತೆ ಮತ್ತು ಅದಕ್ಷತೆಯಿಂದಾಗಿ ಇದು ಸಂಭವಿಸಿತು.

ಹಿಂದಿ-ಚೀನಿ ಭಾಯಿ-ಭಾಯ್‌’ ಸುಳ್ಳು ಪ್ರಚಾರ

ಚೀನಾದ ಮಾರ್ಕ್ಸ್‌ವಾದಿಗಳು 1949ರಲ್ಲಿ ಮಾವೋ ತ್ಸೆ-ತುಂಗ್ ನೇತೃತ್ವದಲ್ಲಿ ಅಧಿಕಾರವನ್ನು ವಶಪಡಿಸಿಕೊಂಡರು. ಮುಂದಿನ ದಶಕದಲ್ಲಿ ಅವರು ಟಿಬೆಟ್‌ ಅನ್ನು ತೆಕ್ಕೆಗೆ ಪಡೆದರು. ಅದರ ಧಾರ್ಮಿಕ ಮತ್ತು ರಾಜಕೀಯ ಮುಖ್ಯಸ್ಥ ದಲೈಲಾಮಾ ಅವರನ್ನು ಭಾರತದಲ್ಲಿ ಆಶ್ರಯ ಪಡೆಯಲು ಒತ್ತಾಯಿಸಿದರು. ಮಾವೋ ನೇತೃತ್ವದ ಚೀನಾದ ಆಕ್ರಮಣಕಾರಿ ನೀತಿಯನ್ನು ಭಾರತದ ಮೊದಲ ಉಪ ಪ್ರಧಾನಿ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಎಲ್ಲರಿಗಿಂತಲೂ ಮೊದಲೇ ಊಹಿಸಿದ್ದರು. 1950ರಲ್ಲಿ ಪ್ರಧಾನಿ ಜವಾಹರ್‌ಲಾಲ್‌ ನೆಹರು ಅವರಿಗೆ ಬರೆದ ಪತ್ರದಲ್ಲಿ ಅವರು ಚೀನಾವನ್ನು ಸಂಭಾವ್ಯ ಶತ್ರು ಎಂದು ಉಲ್ಲೇಖಿಸಿದ್ದಾರೆ. ದುರದೃಷ್ಟವಶಾತ್‌ ಪಂಡಿತ್‌ ನೆಹರು, ಪ್ರಾಯಶಃ ಅವರ ಎಡಪಂಥೀಯ ಒಲವುಳ್ಳ ರಕ್ಷಣಾ ಸಚಿವ ಕೃಷ್ಣ ಮೆನನ್‌ರಿಂದ ಪ್ರಭಾವಿತರಾಗಿದ್ದರು, ನಿಸ್ಸಂಶಯವಾಗಿ ಪ್ರತಿಕೂಲದ ದೇಶದೊಂದಿಗೆ ಶಾಂತಿಯುತ ಸಹಬಾಳ್ವೆಯನ್ನು ಮುಂದುವರೆಸಲು ಆಕರ್ಷಿತರಾಗಿದ್ದರು.

ರಾಮ್‌ ಮನೋಹರ್‌ ಲೋಹಿಯಾ, ಎಂ.ಎಸ್‌. ಗೋಲ್ವಾಲ್ಕರ್‌, ಜಯಪ್ರಕಾಶ್‌ ನಾರಾಯಣ್‌ ಅವರಂತಹ ಅತ್ಯುತ್ತಮ ಶ್ರೇಣಿಯ ರಾಜಕೀಯ ನಾಯಕರು ಚೀನಾದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಆದರೆ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಯಿತು. ಅಂದಿನ ಸರ್ಕಾರವು ‘ಹಿಂದಿ-ಚೀನಿ ಭಾಯಿ-ಭಾಯ್‌’ ಎಂಬ ಭ್ರಮಾಲೋಕದ ಪ್ರಚಾರದಲ್ಲಿ ಜೀವಿಸುತ್ತಿತ್ತು. ಆದರೆ ಚೀನಿಯರು ಮಾತ್ರ ಭಾರತದ ಭೂಪ್ರದೇಶಕ್ಕೆ ಹೇರಳವಾಗಿ ನುಸುಳಿದರು.

ಸೌಮ್ಯ ಶರಣಾಗತಿ ‘ಪಂಚಶೀಲ ಒಪ್ಪಂದ’

1953ರ ನಂತರ ಚೀನಾ ಆಕ್ರಮಣಕಾರಿಯಾಗಿ ಹೆದ್ದಾರಿಗಳನ್ನು ನಿರ್ಮಿಸಿತು. ನಿರ್ಲಜ್ಜವಾಗಿ ಪದೇ ಪದೇ ಗಡಿಗಳನ್ನು ಉಲ್ಲಂಘಿಸಿಸಿತು. ಅವರ ನಕಾಶೆಗಳು, 1954ರಲ್ಲಿ ಅಕ್ಸಾಯ್‌ ಚಿನ್‌ ಪ್ರದೇಶವನ್ನು ಚೀನಾದ ಪ್ರದೇಶವೆಂದು ತೋರಿಸಿವೆ. ಜವಾಬ್ದಾರಿಯುತ ನಾಯಕತ್ವಕ್ಕೆ ಇದು ಎಚ್ಚರಿಕೆಯ ಗಂಟೆಯನ್ನು ಬಾರಿಸುತ್ತಿತ್ತು. ಆದರೆ ಪ್ರಧಾನಿ ಪಂಡಿತ್‌ ಜವಾಹರ್‌ಲಾಲ್‌ ನೆಹರು ಅವರು ಪ್ರಜ್ಞಾಪೂರ್ವಕವಾಗಿ ಅಥವಾ ತಿಳಿಯದೆ, ತಮ್ಮ ಚೀನಿ ಕೌಂಟರ್‌ ಝೌ ಎನ್ಲೈ ಅವರಿಂದ ದಾರಿ ತಪ್ಪಿದರು ಹಾಗೂ ಪಂಚ ಶೀಲ ಒಪ್ಪಂದಕ್ಕೆ ಸಹಿ ಹಾಕಿದರು. ಶಾಂತಿಯುತ ಸಹಬಾಳ್ವೆಯ ಅಡಿಪಾಯದ ಆಧಾರ ಸ್ತಂಭವಾಗಿ ಪ್ರಸ್ತುತಪಡಿಸಲಾದ ಈ ಒಪ್ಪಂದವು ಸೌಮ್ಯವಾದ ಶರಣಾಗತಿ ಎಂದು ಸಾಬೀತಾಯಿತು.

ಈ ಒಪ್ಪಂದವು ಟಿಬೆಟ್ ಮೇಲೆ ಚೀನಾದ ನಿಯಂತ್ರಣವನ್ನು ಔಪಚಾರಿಕವಾಗಿ ಒಪ್ಪಿಕೊಂಡಿತು. ಮೂರು ವರ್ಷಗಳ ನಂತರ ಕ್ಸಿ ಜಿಯಾಂಗ್‌ನಲ್ಲಿರುವ ಹೊಟಾನ್‌ನಿಂದ ಟಿಬೆಟ್‌ನ ಲಾಸಾಗೆ ಸಂಪರ್ಕಿಸುವ ಹೆದ್ದಾರಿ ಸಂಖ್ಯೆ 219ರ ನಿರ್ಮಾಣವನ್ನು ಚೀನಿಯರು ಪೂರ್ಣಗೊಳಿಸಿದರು. ಇದಲ್ಲದೇ, ಭಾರತೀಯ ಗಡಿ ಗಸ್ತು ತಮ್ಮ ಪ್ರದೇಶಕ್ಕೆ ಒಳ ನುಸುಳುತ್ತಿದೆ ಎಂದು ಆರೋಪಿಸಲು ಪ್ರಾರಂಭಿಸಿದರು. ನಮ್ಮ ಸಾರ್ವಭೌಮತ್ವವನ್ನು ಪ್ರತಿಪಾದಿಸಲು ನಮ್ಮ ಸರ್ಕಾರಕ್ಕೆ ಇದು ಸರಿಯಾದ ಸಮಯವಾಗಿತ್ತು. ಆ ದಶಕದುದ್ದಕ್ಕೂ ಪಂಡಿತ್‌ ನೆಹರು ಅವರು ಮತ್ತು ವಿ.ಕೃಷ್ಣ ಮೆನನ್‌ ಅವರು ಸಂಪನ್ಮೂಲಗಳನ್ನು ಹೆಚ್ಚಿಸುವ ಮತ್ತು ಭಾರತೀಯ ಸಶಸ್ತ್ರಪಡೆಗಳನ್ನು ಆಧುನೀಕರಿಸುವ ಬಗ್ಗೆ ಸೇನಾ ಮುಖ್ಯಸ್ಥರು ನೀಡುತ್ತಿದ್ದ ಮನವಿಗಳನ್ನು ಪದೇ ಪದೇ ನಿರ್ಲಕ್ಷಿಸಿದರು.

ದುರ್ಬಲ ನಾಯಕತ್ವದಿಂದ ದೊಡ್ಡ ಅವಮಾನ

ಸೋವಿಯತ್‌ ಒಕ್ಕೂಟವು ತನ್ನ ಕಮ್ಯುನಿಸ್ಟ್‌ ಮಿತ್ರರಾಷ್ಟ್ರವನ್ನು ದೃಢವಾಗಿ ಬೆಂಬಲಿಸಿದಾಗ ಮತ್ತೊಂದು ಪ್ರಮುಖ ಅಡಚಣೆಯು ಉದ್ಭವಿಸಿತು. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಮ್ಮನ್ನು ಪ್ರತ್ಯೇಕಿಸಿ ಮತ್ತು ನಮ್ಮ ಆದರ್ಶವಾದಿ ಆಲಿಪ್ತ ನಿಲುವುಗಳನ್ನು ಸಂಯೋಜಿಸಿತು. ಚೀನಾದ ಸೈನ್ಯವು ನಮ್ಮ ಭೂಪ್ರದೇಶಕ್ಕೆ ಅತಿಕ್ರಮ ಪ್ರದೇಶವನ್ನು ಪ್ರಾರಂಭಿಸಿತು. ಇದು ದಿನ ನಿತ್ಯದ ವ್ಯವಹಾರವಾಗಿ ಮಾರ್ಪಾಡಾಯಿತು.

ಪಂಡಿತ್‌ ನೆಹರು ಅವರ ಪ್ರತಿಕ್ರಿಯೆಯು ತಡವಾಗಿತ್ತು ಮತ್ತು ದೋಷಪೂರಿತವಾಗಿತ್ತು- ಫಾರ್ವರ್ಡ್‌ ನೀತಿಯು ಕಳೆದುಹೋದ ಪ್ರದೇಶವನ್ನು ‘ಮರುಸ್ವಾಧೀನಪಡಿಸಿಕೊಳ್ಳುವ’ ಗುರಿಯನ್ನು ಹೊಂದಿದ್ದದೂ ಅದು ಚೀನಿಯರು ಹೆಚ್ಚು ಭೂಮಿಯನ್ನು ಪಡೆದುಕೊಳ್ಳುವಲ್ಲಿ ಕೊನೆಗೊಂಡಿತು. ಅವರು ಎರಡನೇ ವಿಶ್ವಯುದ್ಧದ ಶಸ್ತ್ರಾಸ್ತ್ರಗಳೊಂದಿಗೆ ನಮ್ಮ ಸುಸಜ್ಜಿತ ಸಶಸ್ತ್ರಪಡೆಗಳಿಗೆ, ಚೀನಾ ಭಾರತದ ಗಡಿಯುದ್ದಕ್ಕೂ ವಿವಾದಿತ ಪ್ರದೇಶಗಳಲ್ಲಿ ಮಿಲಿಟರಿ ಹೊರಠಾಣೆಗಳನ್ನು ಸ್ಥಾಪಿಸಲು ಆದೇಶಿಸಿದರು. ಇದು ಚೀನಿಯರೊಂದಿಗೆ ನೇರ ಮುಖಾಮುಖಿಗೆ ಕಾರಣವಾಯಿತು.

ಭಾರತದ ಮಿಲಿಟರಿ ನೆಲೆಗೆ ಚೀನಾ

ಈ ಸಂದಿಗ್ಧ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲು, ಪಂಡಿತ್‌ ನೆಹರು ಅವರು ‘ಮೆಚ್ಚಿನವರನ್ನು’ ಹಾಗೂ ಜನರಲ್‌ ಪಿ.ಎನ್‌.ಧಾಪರ್‌ ಮತ್ತು ಲೆಫ್ಟಿನೆಂಟ್‌ ಜನರಲ್‌ ಬ್ರಿಜ್‌ ಮೋಹನ್ ಕೌಲ್‌ರವರನ್ನು ನೇಮಿಸಿದರು. 1958ರಲ್ಲಿ ಭಾರತದ ಪ್ರಮುಖ ರಕ್ಷಣಾ ಸಂಸ್ಥೆಗಳಿಗೆ ಪ್ರವಾಸ ಮಾಡಲು ಹಾಗೂ ಮಿಲಿಟರಿ ಕಾರ್ಯಾಚರಣೆ ಮಾಡಲು ಚೀನಾದ ಮಿಲಿಟರಿಗೆ ಅವಕಾಶ ನೀಡಿದರು.

1962 ಯುದ್ಧದ ಬಹುದೊಡ್ಡ ತಪ್ಪೆಂದರೆ, ಪಂಡಿತ್‌ ನೆಹರು ಅವರು ಭಾರತೀಯ ವಾಯುಪಡೆಯ ಪಾತ್ರವನ್ನು ಮಿತಿಗೊಳಿಸಿದ್ದು. ವಾಯುಪಡೆಯಲ್ಲಿ ಮಾತ್ರ ಭಾರತವು ಸ್ಪಷ್ಟವಾದ ಶ್ರೇಷ್ಠತೆಯನ್ನು ಹೊಂದಿತ್ತು. ವಾಯುಪಡೆಯ ನಿಯೋಜನೆಯು ಯುದ್ಧದ ಪ್ರಮಾಣವನ್ನು ಹೆಚ್ಚಿಸುತ್ತದೆ ಎಂಬ ವಿವರಿಸಲಾಗದ ಕಲ್ಪನೆ ಅವರಲ್ಲಿತ್ತು. ಭಾರತದ ಸಾರ್ವಭೌಮತ್ವ ಮತ್ತು ಹೆಮ್ಮೆಯನ್ನು ಹೆಚ್ಚಿಸಲು ಹಾಗೂ ಚೀನಾದ ದಾಳಿಯನ್ನು ರಕ್ಷಿಸಲು ಭೂಸೇನೆಯು ಹೇಳಿಕೊಳ್ಳುವಷ್ಟು ಸಮರ್ಥವಾಗಿರಲಿಲ್ಲ. ಈ ಯುದ್ಧವು ಒಂದು ತಿಂಗಳಿಗೂ ಹೆಚ್ಚು ಕಾಲ ಮುಂದುವರೆಯಿತು. ಸುಮಾರು 1300 ಧೈರ್ಯಶಾಲಿಗಳು ಅತ್ಯುನ್ನತ ತ್ಯಾಗವನ್ನು ಮಾಡಿದರು ಮತ್ತು ನಾವು 38,000 ಚದರ ಕಿಲೋಮೀಟರ್‌ ಭೂಮಿಯನ್ನು ಚೀನಿಯರಿಗೆ ಒಪ್ಪಿಸಬೇಕಾಯಿತು.

ದುರ್ಬಲ ನಾಯಕತ್ವದಿಂದ ವೀರರು ಹುತಾತ್ಮ

ಕೊನೆಯ ಮನುಷ್ಯನವರೆಗೆ ಹೋರಾಡಿದ ಅತ್ಯಂತ ಅಸಾಮಾನ್ಯ ಪ್ರದರ್ಶನಗಳ ಪೈಕಿ ಮೇಜರ್‌ ಶೈತಾನ್‌ ಸಿಂಗ್‌ ಅವರು ಕುಮಾನ್‌ ರೆಜಿಮೆಂಟ್‌ನ ತನ್ನ 120 ಸೈನಿಕರನ್ನು ರೆಜಾಂಗ್‌ ಲಾ ಎತ್ತರದಲ್ಲಿ ಸಂಖ್ಯಾತ್ಮಕವಾಗಿ ಬಲಾಢ್ಯ ಶತ್ರುಗಳ ವಿರುದ್ಧ ಮುನ್ನಡೆಸಿದರು. 1,000ಕ್ಕೂ ಹೆಚ್ಚು ಚೀನೀ ಸೈನಿಕರು ಅವರ ತುಕಡಿಯಿಂದ ಕೊಲ್ಲಲ್ಪಟ್ಟರು. ಲಡಾಕ್‌ ರಕ್ಷಣೆಯಲ್ಲಿ ಸಹ ಬಲಿದಾನಗಳು ಕಂಡವು. ಪ್ಲಾಟೂನ್‌ ಕಮಾಂಡರ್‌ ಆಗಿ ಸೇವೆ ಸಲ್ಲಿಸುತ್ತಿರುವ ಸುಬೇದಾರ್‌ ಜೋಗಿಂದರ್‌ ಸಿಂಗ್‌ ಅವರು ಟೋಂಗ್‌ಪೆನ್‌ ಲಾದಲ್ಲಿ ಚೀನಿಯರ ವಿರುದ್ಧ ಸಿಖ್‌ ರೆಜಿಮೆಂಟ್‌ನ 29 ಜನರೊಂದಿಗೆ ವೀರಾವೇಶದಿಂದ ತಂಡವನ್ನು ಮುನ್ನಡೆಸಿದರು. ತನ್ನನ್ನು ಒಳಗೊಂಡಂತೆ ಪ್ರತಿಯೊಬ್ಬ ಗಾಯಗೊಂಡ ಸೈನಿಕರು ತಮ್ಮ ರೈಫಲ್‌ಗಳಿಗೆ ಬಯೋನೆಟ್‌ಗಳನ್ನು ಅಂಟಿಸಿ ಹೋರಾಡಿದರು. ಈ ತ್ಯಾಗಗಳು ಪ್ರತಿಯೊಬ್ಬ ಭಾರತೀಯನೊಳಗೆ ಶಾಶ್ವತವಾಗಿ ಆಳವಾಗಿ ಉಳಿಯಲಿವೆ.\B\B

ಇಂದಿನ ಆಧುನಿಕ ಜಗತ್ತಿನಲ್ಲಿ, ಆರ್ಥಿಕ ಬೆಳವಣಿಗೆ ಮತ್ತು ಬಡತನ ಮುಕ್ತ ಭಾರತದ ನಮ್ಮ ಆಕಾಂಕ್ಷೆಗಳಿಗೆ ಬಲವಾದ ರಾಷ್ಟ್ರೀಯ ಭದ್ರತೆಯು ನಮಗಿರುವ ಏಕೈಕ ಖಾತರಿಯಾಗಿದೆ. ಬಲವಾದ ರಾಷ್ಟ್ರೀಯ ನಾಯಕತ್ವವು ಬಲವಾದ ರಾಷ್ಟ್ರೀಯ ಭದ್ರತೆಯ ಏಕೈಕ ಖಾತರಿಯಾಗಿದೆ. ದಶಕಗಳ ಅನಿರ್ದಿಷ್ಟ ಮತ್ತು ದುರ್ಬಲ ರಾಜಕೀಯ ನಾಯಕತ್ವದ ನಂತರ, ಕಳೆದ 9 ವರ್ಷಗಳಿಂದ ಭಾರತವು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಒಬ್ಬ ರಾಜಕೀಯ ನಾಯಕನನ್ನು ಹೊಂದಿದೆ. ಭಾರತವನ್ನು ಮತ್ತು ಎಲ್ಲ ಭಾರತೀಯರನ್ನು ಸುರಕ್ಷಿತಗೊಳಿಸುವ ತನ್ನ ಬದ್ಧತೆಯನ್ನು ಧೈರ್ಯದಿಂದ ಮತ್ತು ನಿಸ್ಸಂದಿಗ್ಧವಾಗಿ ಪ್ರತಿಪಾದಿಸುವ ನಾಯಕ ನರೇಂದ್ರ ಮೋದಿಯವರು. ಅವರ ನಾಯಕತ್ವದಲ್ಲಿ ಸಶಸ್ತ್ರಪಡೆಗಳು ಸಾಂಸ್ಥಿಕ ಪುನರ್‌ರಚನೆ ಮತ್ತು ಶಸ್ತ್ರಾಸ್ತ್ರಗಳು, ಮೂಲ ಸೌಕರ್ಯ ಮತ್ತು ಸಾಮರ್ಥ್ಯಗಳ ಆಧುನೀಕರಣದಿಂದ ಗುರುತಿಸಲ್ಪಟ್ಟ ಆಧುನೀಕರಣದ ಹಾದಿಯತ್ತ ಸಾಗುತ್ತಿದೆ.

ಮಗನ ಹೆಸರಲ್ಲಿ ಚಂದ್ರಶೇಖರನ ಸೇರಿಸಿ ಕಾರಣ ಹೇಳಿದ ಎಲಾನ್ ಮಸ್ಕ್‌..!

ನಾವು ನಮ್ಮ ಭವಿಷ್ಯವನ್ನು ‘ವಿಕಸಿತ ಭಾರತ’ ಎಂದು ನೋಡುತ್ತಿರುವಾಗ, ದುರ್ಬಲ ನಾಯಕತ್ವದಿಂದಾಗಿ ನಮ್ಮ ದೇಶ ಮತ್ತು ಜನರು ಮಾಡಿದ ತಪ್ಪುಗಳನ್ನು ನಾವು ಎಂದಿಗೂ ಮರೆಯಬಾರದು. ಈ ಸಂಘರ್ಷದಲ್ಲಿ ಸೇವೆ ಸಲ್ಲಿಸಿದ ಮತ್ತು ತ್ಯಾಗ ಮಾಡಿದ ಪ್ರತಿಯೊಬ್ಬ ವೀರ ಹೃದಯಗಳ ನೆನಪುಗಳು ಉಜ್ವಲವಾಗಲಿ. ಹಿಂದಿನ ತ್ಯಾಗಗಳು ನಮ್ಮ ಭವಿಷ್ಯದ ಹಾದಿ ಮತ್ತು ಕಾರ್ಯಗಳಿಗೆ ದಾರಿದೀಪವಾಗಲಿ.

Follow Us:
Download App:
  • android
  • ios