Asianet Suvarna News Asianet Suvarna News

ತಿರುಪತಿ: ವೈಕುಂಠ ಏಕಾದಶಿ ವೇಳೆ ತಿಮ್ಮಪ್ಪನ ವಿಶೇಷ ದರ್ಶನ ರದ್ದು

ತಿರುಪತಿ: ಜನವರಿ 2 ರಂದು ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ತಿರುಪತಿ ದೇವಸ್ಥಾನದಲ್ಲಿ ವಿಶೇಷ ದರ್ಶನ ಹಾಗೂ ಸೇವೆಗಳನ್ನು ರದ್ದುಗೊಳಿಸಲಾಗಿದೆ.
 

Tirupati Special darshan canceled during Vaikuntha Ekadashi akb
Author
First Published Dec 5, 2022, 9:21 AM IST

ತಿರುಪತಿ: ಜನವರಿ 2 ರಂದು ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ತಿರುಪತಿ ದೇವಸ್ಥಾನದಲ್ಲಿ ವಿಶೇಷ ದರ್ಶನ ಹಾಗೂ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಅಂದು ನಿರ್ಮಿಸಲಾಗುವ ವಿಶೇಷ ಪುಷ್ಪಾಲಂಕೃತ ವೈಕುಂಠ ದ್ವಾರದಲ್ಲೇ ಹೆಚ್ಚು ಭಕ್ತಾದಿಗಳು ಹಾದು ಹೋಗಲಿ ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಜನವರಿ 2 ರಿಂದ 11 ರವರೆಗೆ ವಿಶೇಷ ದರ್ಶನ ಹಾಗೂ ವಿಶೇಷ ಸೇವೆಗಳನ್ನು ರದ್ದುಗೊಳಿಸಲಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಹೇಳಿದೆ. ಕಳೆದ 2 ವರ್ಷಗಳಿಂದ ಏಕಾದಶಿ ಸಮಯದಲ್ಲಿ 10 ದಿನಗಳವರೆಗೆ ವೈಕುಂಠ ದ್ವಾರ ತೆರೆಯಲಾಗುತ್ತಿದೆ. ಮುಂಜಾನೆ 5 ಗಂಟೆಗೆ ದೇವರ ದರ್ಶನ ಆರಂಭವಾಗಲಿದ್ದು ಪ್ರತಿ ದಿನ 80,000 ಭಕ್ತಾದಿಗಳಿಗೆ ದರ್ಶನ ಕಲ್ಪಿಸಲಾಗುತ್ತದೆ. ಜ.2ರ ಏಕಾದಶಿಯಂದು ಮುಂಜಾನೆ 9 ರಿಂದ 11 ಗಂಟೆವರೆಗೆ ಸ್ವರ್ಣ ರಥ ಮೆರವಣಿಗೆ ನಡೆಯಲಿದೆ.

ತಿಮ್ಮಪ್ಪನಿಗೆ ದೇಶದ ಎಷ್ಟು ಕಡೆ ಆಸ್ತಿ ಇದೆ: ಇರುವ ಬಂಗಾರವೆಷ್ಟು? ಬ್ಯಾಂಕಲ್ಲಿರುವ ದುಡ್ಡೆಷ್ಟು ಗೊತ್ತಾ?

Panchang: ಇಂದು ಏಕಾದಶಿ, ವಿಷ್ಣು ಆರಾಧನೆಯಿಂದ ಫಲಸಿದ್ಧಿ

Mokshada Ekadashi 2022: ಈ ದಿನ ಈ ಪರಿಹಾರ ಕೆಲಸ ಮಾಡಿದ್ರೆ ಶ್ರೀಹರಿಯ ಒಲುಮೆ ಸಿದ್ಧಿ

Follow Us:
Download App:
  • android
  • ios