Fact Check: ರಾಮಮಂದಿರ ನಿರ್ಮಾಣಕ್ಕೆ ತಿರುಪತಿಯಿಂದ 100 ಕೋಟಿ ದೇಣಿಗೆ!

ರಾಮಮಂದಿರ ನಿರ್ಮಾಣಕ್ಕೆ ಭಾರತದ ಅತಿ ಶ್ರೀಮಂತ ದೇವಾಲಯವಾದ ತಿರುಪತಿ ವೆಂಕಟರಮಣ ದೇವಾಲಯ ಆಡಳಿತ ಮಂಡಳಿ 100 ಕೋಟಿ ದೇಣಿಗೆ ನೀಡಲು ನಿರ್ಧರಿಸಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ. ಇದು ಇದು ಬಾರೀ ವೈರಲ್‌ ಆಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

Tirupati Balaji temple will donate Rs 100 crores for Ram Mandir

ಅಯೋಧ್ಯೆ ವಿವಾದಿತ ಜಾಗದಲ್ಲಿ ರಾಮಮಂದಿರ ನಿರ್ಮಾಣ ಮಾಡಬೇಕೆಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ. ರಾಮ ಮಂದಿರ ಹೇಗಿರಬೇಕು ಎಂಬ ಬಗ್ಗೆ ಈಗಾಗಲೇ ನೀಲನಕ್ಷೆಯೂ ಸಿದ್ಧವಾಗಿದೆ. ಎಷ್ಟುವೆಚ್ಚವಾಗಬಹುದೂ ಎಂಬದರ ಬಗ್ಗೆಯೂ ಲೆಕ್ಕಾಚಾರ ನಡೆಯುತ್ತಿದೆ.\

Fact Check: ಬ್ರಿಟಿಷರು ರಾಮನ ಅಚ್ಚಿರುವ ನಾಣ್ಯ ಬಿಡುಗಡೆ ಮಾಡಿದ್ದರು!

ಈ ನಡುವೆ ರಾಮಮಂದಿರ ನಿರ್ಮಾಣಕ್ಕೆ ಭಾರತದ ಅತಿ ಶ್ರೀಮಂತ ದೇವಾಲಯವಾದ ತಿರುಪತಿ ವೆಂಕಟರಮಣ ದೇವಾಲಯ ಆಡಳಿತ ಮಂಡಳಿ 100 ಕೋಟಿ ದೇಣಿಗೆ ನೀಡಲು ನಿರ್ಧರಿಸಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ. ಇದು ಇದು ಬಾರೀ ವೈರಲ್‌ ಆಗುತ್ತಿದೆ.

Tirupati Balaji temple will donate Rs 100 crores for Ram Mandir

 

ಆದರೆ ನಿಜಕ್ಕೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಕ್ಕೆ ತಿರುಪತಿ ದೇವಸ್ಥಾನದ ವತಿಯಿಂದ ಇಷ್ಟೊಂದು ದೊಡ್ಡ ಮಟ್ಟದ ಹಣ ನೀಡಲಾಗುತ್ತಿದೆಯೇ ಎಂದು ಬೂಮ್‌ ಪರಿಶೀಲನೆಗೆ ಮುಂದಾದಾಗ ಇದೊಂದು ಸುಳ್ಳುಸುದ್ದಿ ಎಂಬುದು ಸ್ಪಷ್ಟವಾಗಿದೆ. ದೇವಾಲಯ ಆಡಳಿತ ಮಂಡಳಿಯು ಈ ವಿಚಾರವನ್ನು ಅಲ್ಲಗಳೆದಿದ್ದು, ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸ್ಪಷ್ಟನೆ ನಿಡಿದೆ.

Fact Check: ಓವೈಸಿ ಅಯೋಧ್ಯೆ- ಮೋದಿ ಬಗ್ಗೆ ಮಾತಾಡಿದ್ದಕ್ಕೆ ಜನ ಎದ್ದು ಹೋಗಿದ್ದು ನಿಜನಾ?

ಶತಮಾನಗಳ ವಿವಾದಿತ ವಿಷಯವಾಗಿದ್ದ ಅಯೋಧ್ಯೆ ಕುರಿತಂತೆ ಸುಪ್ರೀಂಕೋರ್ಟ್‌ ನ.9ರಂದು ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಮತ ಅದರಲ್ಲಿ ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣವಾಗಬೇಕು, ಹಾಗೂ ಅಯೋಧ್ಯೆಯಲ್ಲಿಯೇ ಮಸೀದಿ ನಿರ್ಮಾಣಕ್ಕೆ ರಾಜ್ಯ ಅಥವಾ ಕೇಂದ್ರ ಸರ್ಕಾರ 5 ಎಕರೆ ಜಾಗ ನಿರ್ಮಾಣಮಾಡಬೇಕು ಎಂದು ಸ್ಪಷ್ಟಪಡಿಸಿದೆ. ಹಾಗೆಯೇ ರಾಮಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಬೇಕು ಎಂದೂ ಹೇಳಿದೆ.

- ವೈರಲ್ ಚೆಕ್ 

Latest Videos
Follow Us:
Download App:
  • android
  • ios