ಹೈದರಾಬಾದ್ (ಮಾ. 01): ತಿರುಪತಿ-ತಿರುಮಲ ವೆಂಕಟೇಶ್ವರ ದೇವಸ್ಥಾನದ 2020-21ನೇ ಸಾಲಿನ ಬಜೆಟ್‌ಅನ್ನು ಶನಿವಾರ ಮಂಡಿಸಲಾಯಿತು. ಬಜೆಟ್‌ 3,310 ಕೋಟಿ ರು. ಗಾತ್ರದ್ದಾಗಿದೆ.

ಮುಂದಿನ ಸಾಲಿನಲ್ಲಿ ಭಕ್ತರ ಕಾಣಿಕೆಯಿಂದ 1,351 ಕೋಟಿ ರು., ಬ್ಯಾಂಕ್‌ನಲ್ಲಿ ಇಟ್ಟಿರುವ ಠೇವಣಿಯಿಂದ 706 ಕೋಟಿ ರು., ದರ್ಶನ ಟಿಕೆಟ್‌ನಿಂದ 302 ಕೋಟಿ ರು., ಲಡ್ಡು ಪ್ರಸಾದ ಮಾರಾಟದಿಂದ 400 ಕೋಟಿ ರು. ಹಾಗೂ ಟಿಟಿಡಿ ಮದುವೆ ಮಂಟಪಗಳಿಂದ 110 ಕೋಟಿ ರು. ಆದಾಯ ನಿರೀಕ್ಷಿಸಲಾಗಿದೆ.

ಚಿಲ್ಲರೆ ಸಮಸ್ಯೆ, ಚಿಲ್ಲರೆ ಅಂಗಡಿಗಳ ಮೊರೆ ಹೋದ ತಿರುಪತಿ ತಿಮ್ಮಪ್ಪ!

ಇದೇ ವೇಳೆ, ಭಕ್ತರು ಕೇಶಮುಂಡನ ಹರಕೆ ತೀರಿಸುವುದರಿಂದ 106.7 ಕೋಟಿ ರು. ಆದಾಯ ನಿರೀಕ್ಷೆ ಮಾಡಲಾಗಿದೆ. ಪ್ರವಾಸಿಗರ ಮೂಲಸೌಕರ್ಯ, ರಸ್ತೆ ನಿರ್ಮಾಣಕ್ಕೆ .250 ಕೋಟಿ ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ.

ಮಾರ್ಚ್ 1 ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ