5142 ಕೋಟಿ ರೂಪಾಯಿಗೆ ಏರಿದ ತಿರುಪತಿ ತಿಮ್ಮಪ್ಪನ ಬಜೆಟ್, ವಧು-ವರರಿಗೆ ಗುಡ್ ನ್ಯೂಸ್ ನೀಡಿದ ಟಿಟಿಡಿ!
1993ರಲ್ಲಿ ಟಿಟಿಡಿ ಸ್ಥಾಪನೆಯಾದ ದಿನದಿಂದ ಇದು ದೇವಸ್ಥಾನದ ಅತಿಹೆಚ್ಚು ಬಜೆಟ್ ಇದಾಗಿದೆ. ಕಳೆದ ವರ್ಷದ ಬಜೆಟ್‌ಗೆ ಹೋಲಿಸಿದರೆ ಈ ಬಾರಿಯ ಬಜೆಟ್‌ನಲ್ಲಿ ಶೇ. 16ರಷ್ಟು ಏರಿಕೆಯಾಗಿದೆ.
ತಿರುಪತಿ (ಜ.30): ತೆಲಂಗಾಣದ ತಿರುಪತಿ ತಿಮ್ಮಪ್ಪ ದೇಗುಲದ ಉಸ್ತುವಾರಿ ನೋಡಿಕೊಳ್ಳುವ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) 2024-25ರ ಸಾಲಿಗೆ 5142 ಕೋಟಿ ರೂಪಾಯಿ ಮೊತ್ತದ ಬಜೆಟ್‌ಗೆ ಅನುಮೋದನೆ ನೀಡಿದೆ. ಕಳೆದ ವರ್ಷ ಈ ಪ್ರಮಾಣ 5123 ಕೋಟಿ ರೂಪಾಯಿಯಷ್ಟಿತ್ತು. ಈ ಬಾರಿ ಹುಂಡಿ ಕಾಣಿಕೆಯಿಂದ ತಿರುಪತಿ ತಿಮ್ಮಪ್ಪ 1611 ಕೋಟಿ ರೂಪಾಯಿ, ಠೇವಣಿಗಳ ಮೇಲಿನ ಬಡ್ಡಿಯಿಂದ 1167 ಕೋಟಿ ರೂಪಾಯಿ ಹಾಗೂ ಪ್ರಸಾದದಿಂದ 600 ಕೋಟಿ ರೂಪಾಯಿ ಆದಾಯವನ್ನು ಟಿಟಿಡಿ ನಿರೀಕ್ಷೆ ಮಾಡಿದೆ. ವಿಶ್ವದ ಶ್ರೀಮಂತ ಹಿಂದೂ ದೇವಸ್ಥಾನ ಎನಿಸಿಕೊಂಡಿರುವ ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ನೋಡಿಕೊಳ್ಳಲು 1993ರಲ್ಲಿ ಟಿಟಿಡಿಯನ್ನು ಸ್ಥಾಪಿಸಲಾಗಿತ್ತು. ಆ ಬಳಿಕದ ಅತ್ಯಂತ ಗರಿಷ್ಠ ಮೊತ್ತದ ಬಜೆಟ್ ಇದಾಗಿದೆ. ಕಳೆದ ವರ್ಷದ ಬಜೆಟ್‌ಗೆ ಹೋಲಿಸಿದಲ್ಲಿ ಶೇ. 16ರಷ್ಟು ಏರಿಕೆಯಾಗಿದೆ ಎಂದು ತಿಳಿಸಲಾಗಿದೆ.
ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಟಿಟಿಡಿ ವಿಶ್ವಸ್ಥ ಮಂಡಳಿ ಸಭೆಯು ಬಜೆಟ್ ಮಂಡನೆ ಮಾಡಲಾಯಿತು. ಮುಂಬರುವ ವರ್ಷದಲ್ಲಿ, ಹುಂಡಿ ಸಂಗ್ರಹದಿಂದ ಒಟ್ಟು 1,611 ಕೋಟಿ ರೂಪಾಯಿ ಆದಾಯವನ್ನು ಟಿಟಿಡಿ ನಿರೀಕ್ಷೆ ಮಾಡಿದೆ. ಅದೇ ರೀತಿ, ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿಗಳಿಂದ 1,167 ಕೋಟಿ ರೂಪಾಯಿಗಳನ್ನು ಉತ್ಪಾದಿಸುವ ನಿರೀಕ್ಷೆಯಿದೆ, ಅದರೊಂದಿಗೆ ಲಡ್ಡು ಮತ್ತು ಇತರ 'ಪ್ರಸಾದ' ಮಾರಾಟದಿಂದ 600 ಕೋಟಿ ರೂಪಾಯಿಗಳನ್ನು ಟಿಟಿಡಿ ಸಂಗ್ರಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ದೇವಾಲಯದ ಟ್ರಸ್ಟ್ ದರ್ಶನಂ ರಸೀದಿಗಳು ಮತ್ತು ಅರ್ಜಿತಸೇವೆಯಿಂದ 448 ಕೋಟಿ ರೂಪಾಯಿ ಆದಾಯವನ್ನು ನಿರೀಕ್ಷಿಸಲಾಗಿದೆ. ವಸತಿ ಮತ್ತು ಕಲ್ಯಾಣ ಮಂಟಪಗಳಿಂದ 147 ಕೋಟಿ ಆದಾಯ ನಿರೀಕ್ಷೆ ಮಾಡಿದೆ.
ಸನಾತನ ಹಿಂದೂ ಧರ್ಮ ಪ್ರಚಾರವನ್ನು ಮುನ್ನಡೆಸುವ ಧ್ಯೇಯೋದ್ದೇಶದ ಅಂಗವಾಗಿ ಟಿಟಿಡಿ ಟ್ರಸ್ಟ್ ಬೋರ್ಡ್ 5 ಗ್ರಾಂ ಮತ್ತು 10 ಗ್ರಾಂ ತೂಕದ ಮಂಗಳಸೂತ್ರಗಳನ್ನು ನಿರ್ಮಿಸಿ, ದೇವರ ಆಶೀರ್ವಾದವನ್ನು ಪಡೆದ ನಂತರ ಭಕ್ತರಿಗೆ ಮಾರಾಟ ಮಾಡಲು ನಿರ್ಧರಿಸಿದೆ ಎಂದು ಕರುಣಾಕರ ರೆಡ್ಡಿ ತಿಳಿಸಿದ್ದಾರೆ.
ವೆಚ್ಚದ ಆಧಾರದ ಮೇಲೆ 5 ಗ್ರಾಂ ಮತ್ತು 10 ಗ್ರಾಂನಲ್ಲಿ ಈ ಮಂಗಳಸೂತ್ರಗಳನ್ನು ನಾಲ್ಕೈದು ವಿನ್ಯಾಸಗಳಲ್ಲಿ ಸಿದ್ಧಪಡಿಸಲಾಗುವುದು,'' ಎಂದು ಅವರು ತಿಳಿಸಿದ್ದಾರೆ. ಟಿಟಿಡಿ ನೌಕರರ ವಸತಿಗಾಗಿ ಮಂಜೂರು ಮಾಡಲಾದ ಹೆಚ್ಚುವರಿ 132.05 ಎಕರೆ ಭೂಮಿಯಲ್ಲಿ ಜಲ್ಲಿ ರಸ್ತೆ ನಿರ್ಮಾಣಕ್ಕೆ ಮಂಡಳಿಯು ಟೆಂಡರ್‌ಗಳನ್ನು ಅನುಮೋದಿಸಲಾಗಿದೆ. ಅದರೊಂದಿಗೆ ಟಿಟಿಡಿ ಪೋಟು ಇಲಾಖೆಯ 70 ಗುತ್ತಿಗೆ ಲಡ್ಡು ಟ್ರೇ ಎತ್ತುವ ಅರೆ ಕೌಶಲ್ಯ ಮತ್ತು ಕೌಶಲ್ಯರಹಿತ ಕಾರ್ಮಿಕರ ವೇತನವನ್ನು ಹೆಚ್ಚಿಸಲು ತೀರ್ಮಾನ ಮಾಡಿದೆ.
ಬಾಯ್ಫ್ರೆಂಡ್ ಜೊತೆ ಮತ್ತೆ ಜಾಹ್ನವಿ ಟೆಂಪಲ್ ರನ್: ಏನಮ್ಮಾ ನಿನ್ ಕಥೆ ಅಂತಿದ್ದಾರೆ ಫ್ಯಾನ್ಸ್!
ಟಿಟಿಡಿಯ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಮತ್ತು ಹೊರಗುತ್ತಿಗೆ ಪದ್ಧತಿಯಲ್ಲಿ ಕೆಲಸ ಮಾಡುತ್ತಿರುವವರ ವೇತನ ಹೆಚ್ಚಳಕ್ಕೆ ಮಂಡಳಿ ಒಪ್ಪಿಗೆ ನೀಡಿದೆ. ಟಿಟಿಡಿಯ ಆರು ವೇದ ಶಾಲೆಗಳು ಹಿಂದೂ ಸನಾತನ ಧರ್ಮ ಪ್ರಚಾರದ ಭಾಗವಾಗಿ ವೇದ ಶಿಕ್ಷಣವನ್ನು ಹರಡುತ್ತಿವೆ. ಈ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 51 ವೇದ ಶಿಕ್ಷಕರ ವೇತನವನ್ನು 35,000 ರೂ.ಗಳಿಂದ 54,000 ರೂ.ಗೆ ಹೆಚ್ಚಿಸಲು ಮಂಡಳಿ ನಿರ್ಧರಿಸಿದೆ.
ವೈಕುಂಠ ಏಕಾದಶಿ ದಿನದ ತಿರುಪತಿ ಹುಂಡಿ ಸಂಗ್ರಹದಲ್ಲಿ ಭಾರಿ ಇಳಿಕೆ