ವೈಕುಂಠ ಏಕಾದಶಿ ದಿನದ ತಿರುಪತಿ ಹುಂಡಿ ಸಂಗ್ರಹದಲ್ಲಿ ಭಾರಿ ಇಳಿಕೆ
ಇಲ್ಲಿನ ವೆಂಕಟೇಶ್ವರ ಸ್ವಾಮಿ ದೇಗುಲಕ್ಕೆ ವೈಕುಂಠ ಏಕಾದಶಿಗೆ ಈ ಬಾರಿ ಅತಿ ಕಡಿಮೆ ಭಕ್ತರು ಆಗಮಿಸಿದ್ದರು. ದಿನಕ್ಕೆ 80 ಸಾವಿರ ನಿರೀಕ್ಷೆಗೆ ಕೇವಲ 67 ಸಾವಿರ ಭಕ್ತರು ಆಗಮಿಸಿದ್ದಾರೆ.
ತಿರುಮಲ: ಇಲ್ಲಿನ ವೆಂಕಟೇಶ್ವರ ಸ್ವಾಮಿ ದೇಗುಲಕ್ಕೆ ವೈಕುಂಠ ಏಕಾದಶಿಗೆ ಈ ಬಾರಿ ಅತಿ ಕಡಿಮೆ ಭಕ್ತರು ಆಗಮಿಸಿದ್ದರು. ದಿನಕ್ಕೆ 80 ಸಾವಿರ ಭಕ್ತರ ನಿರೀಕ್ಷೆ ಮಾಡಲಾಗಿತ್ತು. ಆದರೆ ಬಂದಿದ್ದು ಕೇವಲ 67 ಸಾವಿರ ಭಕ್ತರು. ಜೊತೆಗೆ ಹುಂಡಿ ಹಣದಲ್ಲೂ ಭಾರಿ ಇಳಿಕೆ ಕಂಡಿದೆ. ಕಳೆದ ವರ್ಷದ ಭಕ್ತರ ಸಂಖ್ಯೆ 69 ಸಾವಿರ ಇತ್ತು ಎಂದು ಟಿಟಿಡಿ ತಿಳಿಸಿದೆ.
ಇನ್ನು ಕಳೆದ ವೈಕುಂಠ ಏಕಾದಶಿಗೆ ತಿರುಪತಿಯಲ್ಲಿ ಬರೋಬ್ಬರಿ 7.68 ಕೋಟಿ ರು. ಕಾಣಿಕೆ ಸಿಕ್ಕಿತ್ತು. ಈ ಸಂಖ್ಯೆ ಈ ಬಾರಿ ಕೇವಲ 2.5 ಕೋಟಿ ರು.ಗೆ ಇಳಿಕೆಯಾಗಿದೆ. ದೇಗುಲಕ್ಕೆ ಆಗಮಿಸುವವರ ಸಂಖ್ಯೆ ಭಾರಿ ಇಳಿಕೆಗೆ ಕಾರಣಗಳಿವೆ. ಇವುಗಳಲ್ಲಿ ನಿರ್ಬಂಧ ಮುಂಗಡ ಬುಕಿಂಗ್ ಮಾಡಿದ್ದನ್ನು ರದ್ದುಗೊಳಿಸುವ ಆಯ್ಕೆ, ದರ್ಶನ ಟಿಕೆಟ್ ಸಿಗದಿರುವಿಕೆ ಹೀಗೆ ಹಲವಾರು ಕಾರಣಗಳಿಂದ ಈ ಬಾರಿ ಭಕ್ತರ ಸಂಖ್ಯೆಯಲ್ಲಿ ಇಳಿಕೆಯಾಗಿದೆ ಎನ್ನಲಾಗಿದೆ.
ನವದಂಪತಿಗಳಿಗೆ ತಿರುಪತಿ ತಿಮ್ಮಪ್ಪನ ವಿಶೇಷ ದರ್ಶನ ಭಾಗ್ಯ: ದಾಖಲೆ ಕಡ್ಡಾಯ
ನವದಂಪತಿಗಳಿಗೆ ಸುಲಭವಾಗಿ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿಸುವ ವಿಶೇಷ ಯೋಜನೆಯೊಂದನ್ನು ತಿರುಪತಿ ತಿರುಮಲ ದೇಗುಲದ ಆಡಳಿತ ಮಂಡಳಿ ಜಾರಿಗೆ ತಂದಿದೆ. ಈ ಯೋಜನೆಯಡಿ ಯಾವುದೇ ಜೋಡಿ ಮದುವೆಯಾದ ಒಂದು ವಾರದೊಳಗೆ ವಿಶೇಷ ಟಿಕೆಟ್ ನೀಡಿ ಸುಲಭವಾಗಿ ದೇವರ ದರ್ಶನ ಪಡೆಯಬಹುದು. ವೆಂಕಟೇಶ್ವರನ ದರ್ಶನ ಮಾಡಲು ದೇಗುಲದ ಆಡಳಿತ ಮಂಡಳಿ ವಿಶೇಷ ದರ್ಶನಕ್ಕೆ ಅವಕಾಶ ಕಲ್ಪಿಸಿದೆ. ಅದರಂತೆ ನವದಂಪತಿಗಳು ಮದುವೆಯ ದಿರಿಸಿನಲ್ಲೇ ಮದುವೆಯಾದ ಮರುಕ್ಷಣವೇ ಬಂದು ತಿಮ್ಮಪ್ಪನ ದರ್ಶನ ಪಡೆಯಬೇಕೆಂದು ಸೂಚಿಸಲಾಗಿದೆ. ಇದರ ಜೊತೆಗೆ ಶ್ರೀವಾರಿ ಕಲ್ಯಾಣೋತ್ಸವದ ಮದುವೆ ಸಮಾರಂಭ ಹಾಗೂ ದೇವರ ವಿಶೇಷ ದರ್ಶನದಲ್ಲೂ ನವದಂಪತಿಗಳಿಗೆ ಪ್ರತಿನಿತ್ಯ 20 ಟಿಕೆಟ್‌ಗಳನ್ನು ಮೀಸಲಿಡಲಾಗುತ್ತಿದೆ.
ತಿರುಪತಿ ತಿಮ್ಮಪ್ಪನ ವಿಶೇಷ ದರ್ಶನದ 2.25 ಲಕ್ಷ ಟಿಕೆಟ್ ಕೇವಲ 20 ನಿಮಿಷದಲ್ಲಿ ಸೋಲ್ಡ್‌ಔಟ್!
ದರ್ಶನಕ್ಕೂ ಒಂದು ವಾರ ಹಿಂದೆ ಮದುವೆಯಾದ ನವದಂಪತಿಗಳು ಆರ್ಜಿತ ಸೇವಾ ಲಕ್ಕಿ ಡಿಪ್ ಕೌಂಟರ್‌ನಲ್ಲಿ ಅರ್ಜಿ ಹಾಕಿ 1000 ರು. ಶುಲ್ಕ ಸಲ್ಲಿಸಿ ಕಲ್ಯಾಣೋತ್ಸವ ಸೇವಾ ಟಿಕೆಟ್ ಅನ್ನು 1000 ರು. ನೀಡಿ ಖರೀದಿಸಬಹುದು. ಟಿಕೆಟ್ ಖರೀದಿ ವೇಳೆ ಮದುವೆ ಫೋಟೋ, ಆಧಾರ್ ದಾಖಲೆ ನೀಡುವುದು ಕಡ್ಡಾಯ. ಜೊತೆಗೆ ದೇವರ ದರ್ಶನಕ್ಕೆ ವಿವಾಹದ ಉಡುಗೆಯಲ್ಲೇ ಹಾಜರಾಗಬೇಕು. ನಿತ್ಯ 20 ಜೋಡಿಗಳಿಗೆ ಮಾತ್ರವೇ ಈ ಅವಕಾಶ.
140 ಕೋಟಿ ದೇಶವಾಸಿಗಳ ಒಳಿತಿಗೆ ತಿಮ್ಮಪ್ಪನಲ್ಲಿ ಪ್ರಧಾನಿ ಮೋದಿ ಪ್ರಾರ್ಥನೆ!