Asianet Suvarna News Asianet Suvarna News

ತಿರುಪತಿಗೆ ಹೋಗುವ ಭಕ್ತಾದಿಗಳು ಗಮನಿಸಿ, ಟಿಟಿಡಿಯಿಂದ ಜಾರಿಯಾಗಿದೆ ಹೊಸ ರೂಲ್ಸ್‌!


ತಿರುಪತಿಯ ಬೆಟ್ಟ ಹತ್ತುವ ಮಾರ್ಗದಲ್ಲಿ 6 ವರ್ಷದ ಬಾಲಕಿಯನ್ನು ಚಿರತೆ ಹಿಡಿದುಕೊಂಡ ಹೋದ ಪ್ರಕರಣದ ಬಳಿಕ ತಿರುಪತಿಗೆ ಹೋಗುವ ಭಕ್ತಾದಿಗಳಿಗೆ ಅದರಲ್ಲೂ ಪ್ರಮುಖವಾಬೆ ಬೆಟ್ಟ ಹತ್ತುವವರಿಗೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಹೊಸ ರೂಲ್ಸ್‌ಗಳನ್ನು ಜಾರಿ ಮಾಡಿದೆ.

Tirumala Tirupati Devasthanam  Restricts Kid Movement after Leopard Attack Incident san
Author
First Published Aug 14, 2023, 4:16 PM IST | Last Updated Aug 14, 2023, 4:16 PM IST

ಬೆಂಗಳೂರು (ಆ.14): ತಿರುಪತಿಯ ಪಾದಚಾರಿ ಮಾರ್ಗದಲ್ಲಿ ಚಿರತೆಯೊಂದು ಆರು ವರ್ಷದ ಬಾಲಕಿಯನ್ನು ಬಲಿ ತೆಗೆದುಕೊಂಡ ಬಳಿಕ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಯಾತ್ರಾರ್ಥಿಗಳ ಸುರಕ್ಷತೆಗೆ ಹೊಸ ಹೊಸ ರೂಲ್ಸ್‌ಗಳನ್ನು ಜಾರಿ ಮಾಡಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ತಿರುಪತಿಗೆ ಬಂದು ಬೆಟ್ಟಹತ್ತು ಯ್ರಾತಾರ್ಥಿಗಳು ಈ ರೂಲ್ಸ್‌ಗಳನ್ನು ಗಮನಸಲ್ಲಿಟ್ಟುಕೊಂಡರೆ ಒಳ್ಳೆಯದು ಎಂದು ತಿಳಿಸಿದೆ. ವಿಶೇಷವಾಗಿ 15 ವರ್ಷದ ಒಳಗಿನ ಮಕ್ಕಳೊಂದಿಗೆ ತಿರುಪತಿಯಲ್ಲಿ ಬೆಟ್ಟ ಏರಲು ಬರುವ ಪೋಷಕರಿಗೆ ತಕ್ಷಣದಿಂದ ಜಾರಿಯಾಗುವಂತೆ ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರವೇ ಪಾದಾಚಾರಿ ಮಾರ್ಚಗದಲ್ಲಿ ಸಂಚರಿಸುವ ಅವಕಾಶ ನೀಡಲಾಗುತ್ತದೆ. ಅದರು ಮಾತ್ರವಲ್ಲದೆ, ಸಂಜೆ 6 ಗಂಟೆಯಿಂದ ಮುಂಜಾನೆ 6 ಗಂಟೆಯವರೆಗೆ ತಿರುಪತಿ ಘಾಟ್‌ನ ರಸ್ತೆಗಳಲ್ಲಿ ದ್ವಿಚಕತ್ರ ವಾಹನಗಳಿಗೆ ನಿರ್ಬಂಧ ವಿಧಿಸಲಾಗುತ್ತದೆ. ಭಾನುವಾರದಿಂದಲೇ ಹೊಸ ರಕ್ಷಣಾತ್ಮಕ ಕ್ರಮಗಳು ಅಲಿಪಿರಿ, ಗಾಳಿಗೋಪುರ ಮತ್ತು ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ (ಎಲ್‌ಎನ್‌ಎಸ್‌) ದೇವಸ್ಥಾನಗಳ ಪ್ರದೇಶದಲ್ಲಿ ಜಾರಿಯಾಗಲಿದೆ. ಇದೇ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಚಿರತೆಗಳು ಕಾಣಿಸಿಕೊಂಡಿದ್ದವು. ಈ ನಡುವೆ ತಿರುಪತಿ ಪಾದಾಚರಿ ಮಾರ್ಗದಲ್ಲಿ ಕರಡಿಯೊಂದು ಹಾದುಹೋಗಿದ್ದ ವಿಡಿಯೋ ಕೂಡ ವೈರಲ್‌ ಆಗಿತ್ತು. ಇದಕ್ಕೂ ಮುನ್ನ ಜೂನ್‌ 22 ರಂದು ಮೂರು ವರ್ಷ ಬಾಲಕ ಕೌಶಿಕ್‌ನನ್ನು ಚಿರತೆ ಎಳೆದುಕೊಂಡು ಹೋಗಿತ್ತು.

ಭಾನುವಾರ ಬೆಳಗ್ಗೆ 6:30ರ ಸುಮಾರಿಗೆ ಘಾಟ್ ರಸ್ತೆಯಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದು, ಅರಣ್ಯಾಧಿಕಾರಿಗಳು ಕ್ಷಿಪ್ರ ಕ್ರಮ ಕೈಗೊಂಡು ಪ್ರಾಣಿಯನ್ನು ನೈಸರ್ಗಿಕ ವಾಸಸ್ಥಳಕ್ಕೆ ಮರಳಿಸಿದ್ದಾರೆ. ಇನ್ನು ಮಕ್ಕಳ ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಅಲಿಪಿರಿ ಮತ್ತು ತಿರುಮಲನ ನಡುವಿನ 7ನೇ ಮೈಲಿ ಚೆಕ್‌ಪೋಸ್ಟ್‌ನಲ್ಲಿ ತಿರುಪತಿ ಪೊಲೀಸ್‌ ಕಾನ್ಸ್‌ಟೇಬಲ್‌ಗಳು ಮಕ್ಕಳ ಕೈಗಳಿಗೆ ಭದ್ರತಾ ಗುರುತಿನ ಟ್ಯಾಗ್‌ ಅಳವಡಿಸಲಿದ್ದಾರೆ. ಇದು ಡಿಜಿಟಲ್‌ ಅಲ್ಲದ, ಆಎಫ್‌ಐಡಿ ಅಲ್ಲದ ಟ್ಯಾಗ್‌ ಇದಾಗಿರುತ್ತದೆ. ಪೋಷಕರ ಸಂಪರ್ಕ ವಿವರಗಳು ಈ ಟ್ಯಾಗ್‌ನಲ್ಲಿ ಇರುತ್ತದೆ. ಹಾಗೇನಾದರೂ ಅನಿರೀಕ್ಷಿತ ಘಟನೆಗಳು ಆದಲ್ಲಿ ತ್ವರಿತವಾಗಿ ಸಂಪರ್ಕ ಸಾಧಿಸುವ ಸಲುವಾಗಿ ಇದನ್ನು ಮಾಡಲಾಗುತ್ತದೆ. ಅದಲ್ಲದೆ, ಬೆಟ್ಟಹತ್ತುವ ಸಂದರ್ಭದಲ್ಲಿ ಮಕ್ಕಳನ್ನು ಹೊಂದಿರುವ ಪೋಷಕರಿಗೆ, ಅವರ ಬಗ್ಗೆ ಹೆಚ್ಚಿನ ಗಮನ ನೀಡುವಂತೆ, ಒಬ್ಬೊಬ್ಬರಾಗಿ ಅಡ್ಡಾಡಲು ಬಿಡದಂತೆ ಸೂಚನೆಗಳನ್ನು ನೀಡಲಾಗುತ್ತದೆ.

ಗುರುತಿನ ಟ್ಯಾಗ್‌ಗಳ ಸ್ವರೂಪವನ್ನು ಒತ್ತಿಹೇಳಿರುವ ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ, ತಿರುಮಲದಲ್ಲಿ ಶ್ರೀವಾರಿ ಬ್ರಹ್ಮೋತ್ಸವದ ಸಮಯದಲ್ಲಿ ಬಳಸುವಂತಹ ಹಸ್ತಚಾಲಿತ ಗುರುತಿನ ವ್ಯವಸ್ಥೆಯನ್ನು ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ. ಕಾಡುಪ್ರಾಣಿಗಳೊಂದಿಗೆ ಎದುರಾಗುವ ಪರಿಸ್ಥಿತಿಯನ್ನು ಯಶಸ್ವಿಯಾಗಿ ಪರಿಹರಿಸುವವರೆಗೆ ಮಂಡಳಿಯು ಹೊರಡಿಸಿದ ಮಾರ್ಗಸೂಚಿಗಳನ್ನು ಶ್ರದ್ಧೆಯಿಂದ ಪಾಲಿಸಬೇಕೆಂದು ಟಿಟಿಡಿ ಅಧಿಕಾರಿಗಳು ಭಕ್ತರಿಗೆ ಮನವಿ ಮಾಡಿದ್ದಾರೆ. ಇನ್ನು ಚಿರತೆ ದಾಳಿಗೆ ಪ್ರತಿಕ್ರಿಯೆ ನೀಡಿರುವ ಆಂಧ್ರಪ್ರದೇಶ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು,  ಟಿಟಿಡಿ, ಅರಣ್ಯ, ಪೊಲೀಸ್ ಮತ್ತು ಕಂದಾಯ ಇಲಾಖೆಗಳಿಂದ ಸಮಗ್ರ ವರದಿಗಳನ್ನು ಕೋರಿದೆ. 

ತಿರುಪತಿ ಬೆಟ್ಟ ಹತ್ತುವ ಭಕ್ತಾದಿಗಳಿಗೆ ಮಹತ್ವದ ಸೂಚನೆ ಹೊರಡಿಸಿದ ಟಿಟಿಡಿ

3 ಗಂಟೆಯ ಬಳಿಕ ಪಾದಾಚಾರಿ ಮಾರ್ಗ ಬಂದ್‌: ಈ ನಡುವೆ ಪಾದಾಚಾರಿ ಮಾರ್ಗವನ್ನು ಮಧ್ಯಾಹ್ನ 3 ಗಂಟೆಯ ಬಳಿಕ ಸಂಪೂರ್ಣವಾಗಿ ಬಂದ್‌ ಮಾಡುವ ಬಗ್ಗೆಯೂ ಟಿಟಿಡಿ ಚಿಂತನೆ ಮಾಡಿದೆ. ಅದರೊಂದಿಗೆ ಸಂಪೂರ್ಣ ಬೆಟ್ಟ ಹತ್ತುವ ಮಾರ್ಗದ ಎರಡೂ ಕಡೆ ಸುರಕ್ಷತಾ ಬೇಲಿಗಳನ್ನೂ ಅಳವಡಿಸುವ ಬಗ್ಗೆಯಯೂ ಚಿಂತನೆ ಮಾಡಿದೆ. 

ತಿರುಪತಿ ಬೆಟ್ಟ ಹತ್ತುವಾಗ ಚಿರತೆ ದಾಳಿ, ಬಾಲಕಿ ಬಲಿ, ಬೆಟ್ಟ ಏರುವ ಭಕ್ತರಲ್ಲಿ ಆತಂಕ

ಕುಟುಂಬಕ್ಕೆ 10 ಲಕ್ಷ ಪರಿಹಾರ: ಇನ್ನು 6 ವರ್ಷದ ಮಗು ಲಕ್ಷಿತಾ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ ಎಂದು ಟಿಟಿಡಿ ಚೇರ್ಮನ್‌ ಬಿ. ಕರುಣಾಕರ ರೆಡ್ಡಿ ತಿಳಿಸಿದ್ದಾರೆ. ಇದರಲ್ಲಿ ಟಿಟಿಡಿಯಿಂದ 5 ಲಕ್ಷ ಹಾಗೂ ಅರಣ್ಯ ಇಲಾಖೆಯಿಂದ 5 ಲಕ್ಷ ರೂಪಾಯಿ ಒಳಗೊಂಡಿದೆ.

Latest Videos
Follow Us:
Download App:
  • android
  • ios