ಚಿರತೆ ದಾಳಿ ತಡೆಗೆ ತಿರುಮಲದಲ್ಲಿ ಭದ್ರತಾ ಸಿಬ್ಬಂದಿ. ತಿರುಮಲ ಬೆಟ್ಟದ ದಾರಿಗೆ 500 ಸಿಸಿ ಕ್ಯಾಮೆರಾ. ಮೆಟ್ಟಿಲ ಮಾರ್ಗದಲ್ಲಿ ಪಾದಯಾತ್ರಿಕರಿಗೆ ಭದ್ರತೆ. ದಾಳಿ ನಡೆಸುವ ಚಿರತೆ ಹಿಡಿಯಲು 2 ಬೋನು ಸಜ್ಜು. ಬಾಲಕಿಯನ್ನು ಚಿರತೆ ಕೊಂದ ಬೆನ್ನಲ್ಲೇ ಕ್ರಮ.
ತಿರುಮಲ (ಆ.14): ಇಲ್ಲಿನ ಪ್ರಸಿದ್ಧ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಮೆಟ್ಟಿಲು ಮಾರ್ಗದಲ್ಲಿ ತೆರಳುವ ಪಾದಯಾತ್ರಿಗಳಿಗೆ ಚಿರತೆ ದಾಳಿಯ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ದಾರಿಯುದ್ದಕ್ಕೂ 500 ಸಿಸಿಟೀವಿ ಕ್ಯಾಮೆರಾಗಳನ್ನು ಅಳವಡಿಸಲು ಹಾಗೂ ಪಾದಯಾತ್ರಿಕರಿಗೆ ಬಿಗಿ ಭದ್ರತೆ ಒದಗಿಸಲು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿ ನಿರ್ಧರಿಸಿದೆ. ಆರು ವರ್ಷದ ಬಾಲಕಿಯೊಬ್ಬಳನ್ನು ಚಿರತೆ ಹೊತ್ತೊಯ್ದು ಕೊಂದ ಬೆನ್ನಲ್ಲೇ ಮಂಡಳಿ ಈ ನಿರ್ಧಾರ ಕೈಗೊಂಡಿದೆ.
ತಿರುಪತಿ ಬೆಟ್ಟ ಹತ್ತುವಾಗ ಚಿರತೆ ದಾಳಿ, ಬಾಲಕಿ ಬಲಿ, ಬೆಟ್ಟ ಏರುವ ಭಕ್ತರಲ್ಲಿ ಆತಂಕ
ತಿರುಮಲ ಬೆಟ್ಟದ ಬುಡದಿಂದ ತುದಿಯವರೆಗೆ ಗಾಳಿ ಗೋಪುರದಿಂದ ಲಕ್ಷ್ಮಿನರಸಿಂಹ ದೇಗುಲದವರೆಗೆ ಚಿರತೆ ದಾಳಿ ತಡೆಯಲು ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಜೊತೆಗೂಡಿ 24/7 ಪಹರೆ ಒದಗಿಸಲು ಮಂಡಳಿ ನಿರ್ಧರಿಸಿದೆ. ಜೊತೆಗೆ, ಚಿರತೆ ಹಿಡಿಯಲು ಎರಡು ಬೋನುಗಳನ್ನು ಸನ್ನದ್ಧವಾಗಿರಿಸಲು ಮುಂದಾಗಿದೆ. ಈ ಕುರಿತು ಮಾಹಿತಿ ನೀಡಿರುವ ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ.ಧರ್ಮಾರೆಡ್ಡಿ, ಮಕ್ಕಳನ್ನು ಪಾದಯಾತ್ರೆಯಲ್ಲಿ ಕರೆದೊಯ್ಯುವ ಪೋಷಕರು ಹೆಚ್ಚು ಎಚ್ಚರ ವಹಿಸುವಂತೆ ಸೂಚಿಸಿದ್ದಾರೆ.
ತಿರುಪತಿ: ಮುಡಿ ಕೊಡುವುದಕ್ಕೂ, ಸಪ್ತಗಿರಿಯ ನೀಲಾದ್ರಿ ಬೆಟ್ಟಕ್ಕೂ ಇದೆ ಲಿಂಕ್!
ಇನ್ನುಮುಂದೆ ಬೆಟ್ಟಹತ್ತುವ ಪ್ರತಿ 100 ಯಾತ್ರಿಕರ ಗುಂಪಿನ ಜೊತೆ ಒಬ್ಬ ಸೆಕ್ಯುರಿಟಿ ಗಾರ್ಡ್ ಇರಲಿದ್ದಾರೆ. ಈಗಾಗಲೇ 30 ಟಿಟಿಡಿ ಸೆಕ್ಯುರಿಟಿ ಗಾರ್ಡ್ ಹಾಗೂ 10 ಅರಣ್ಯ ಇಲಾಖೆಯ ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. ಅದನ್ನು ಇನ್ನಷ್ಟುಹೆಚ್ಚಿಸುತ್ತೇವೆ ಎಂದೂ ಅವರು ತಿಳಿಸಿದ್ದಾರೆ.
ಶುಕ್ರವಾರ ಬಾಲಕಿಯನ್ನು ಚಿರತೆ ಹೊತ್ತೊಯ್ದ ಘಟನೆ ಹಾಗೂ ಅದಕ್ಕೂ ಮುನ್ನ ಜೂನ್ 21ರಂದು ಪುಟ್ಟಬಾಲಕನೊಬ್ಬನ ಮೇಲೆ ಚಿರತೆ ದಾಳಿ ನಡೆಸಿದ ಘಟನೆಯನ್ನು ಟಿಟಿಡಿ ಗಂಭೀರವಾಗಿ ಪರಿಗಣಿಸಿ ಪಾದಯಾತ್ರಿಗಳಿಗೆ ಬಿಗಿ ಭದ್ರತೆ ಒದಗಿಸಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.
