ತಿರುಪತಿ(ಡಿ.02): ತಿರುಪತಿ, ತಿರುಮಲ ದೇವಸ್ಥಾನದ ವೆಬ್‌ಸೈಟ್‌ನಲ್ಲಿ ‘ಯೆಶಾಯ್’ ಎಂಬ ಕ್ರಿಶ್ಚಿಯನ್ ಪದ ಬಳಕೆಯ ಆರೋಪಕ್ಕೆ ಟಿಟಿಡಿ ಅಧ್ಯಕ್ಷ ವೖ.ವಿ ಸುಬ್ಬಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

ದೇವಸ್ಥಾನದ ಕ್ಯಾಲೆಂಡರ್ ಹೊಂದಿರುವ ವೆಬ್‌ಸೈಟ್‌ನಲ್ಲಿ ಕ್ರಿಶ್ಚಿಯನ್ ಪದ ಬಳಕೆಯ ಆರೋಪವನ್ನು ನಿರಾಕರಿಸಿದ ಸುಬ್ಬಾರೆಡ್ಡಿ, ಟಿಟಿಡಿ ಹಾಗೂ ರಾಜ್ಯ ಸರ್ಕಾರದ ಜನಪ್ರಿಯತೆಗೆ ಧಕ್ಕೆ ತರುವ ಉದ್ದೇಶದಿಂದ ಇಂತಹ ಆರೋಪ ಮಾಡಲಾಗುತ್ತಿದೆ ಎಂದು ಹರಿಹಾಯ್ದರು.

ತಿರುಪತಿಯಲ್ಲಿ ಮದ್ಯ ಮಾರಾಟ ನಿಷೇಧ?

ವಿವಾದಕ್ಕೆ ಪ್ರತಿಪಕ್ಷ ತೆಲುಗು ದೇಶಂ ಪಕ್ಷವೇ ಕಾರಣ ಎಂದು ನೇರವಾಗಿ ಆರೋಪಿಸಿದ ಸುಬ್ಬಾರೆಡ್ಡಿ, ಸಿಎಂ ಜಗನ್ ಮೋಹನ್ ರೆಡ್ಡಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಟಿಡಿಪಿ ಇಂತಹ ಕ್ಲುಲ್ಲಕ ಆರೋಪ ಮಾಡುತ್ತಿದೆ ಎಂದು ಹರಿಹಾಯ್ದರು.

ಜಗನ್ ಮೋಹನ್ ರೆಡ್ಡಿ ಸರ್ಕಾರವನ್ನು ಟೀಕಿಸಲು ಟಿಡಿಪಿ ಗೆ ಯಾವ ಕಾರಣವೂ ಸಿಗುತ್ತಿಲ್ಲ. ಇದೇ ಕಾರಣಕ್ಕೆ ಟಿಟಿಡಿ ಮೇಲೆ ಗೂಬೆ ಕೂರಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಅದು ಹವಣಿಸುತ್ತಿದೆ ಎಂದು ಸುಬ್ಬಾರೆಡ್ಡಿ ಕಿಡಿಕಾರಿದರು.

6 ದಿನ ತಿರುಪತಿ ತಿಮ್ಮಪ್ಪ ದರ್ಶನಕ್ಕೆ ಇಲ್ಲ ಅವಕಾಶ

ತಮ್ಮ ರಾಜಕೀಯ ಲಾಭಕ್ಕಾಗಿ ವಿಶ್ವದಾದ್ಯಂತ ಇರುವ ತಿರುಪತಿ ಭಕ್ತರ ಭಾವನೆಗೆ ಧಕ್ಕೆ ತರದಂತೆ ಇದೇ ವೇಳೆ ಸುಬ್ಬಾರೆಡ್ಡಿ ಮನವಿ ಮಾಡಿದರು.

ಇನ್ನು ಟಿಟಿಡಿ ವೆಬ್‌ಸೈಟ್‌ನಲ್ಲಿ  ಕ್ರಿಶ್ಚಿಯನ್ ಪದ ಸೇರಿರುವ ಕುರಿತು ಸೈಬರ್ ಕ್ರೈಂ ಹಾಗೂ ಗೂಗಲ್’ಗೆ ದೂರು ನೀಡಲಾಗುವುದು ಎಂದು ಟಿಟಿಡಿ ಯ ಅನಿಲ್ ಕುಮಾರ್ ಸಿಂಘಾಲ್ ಸ್ಪಷ್ಟಪಡಿಸಿದ್ದಾರೆ.

ಡಿಸೆಂಬರ್ 2ರ ಟಾಪ್ 10  ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: