6 ದಿನ ತಿರುಪತಿ ತಿಮ್ಮಪ್ಪ ದರ್ಶನಕ್ಕೆ ಇಲ್ಲ ಅವಕಾಶ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 11, Aug 2018, 12:30 PM IST
TTD Close Tirupati Temple For darshan 6 Days
Highlights

ತಿರುಪತಿ ದೇಗುಲದಲ್ಲಿ ಮಹಾ ಸಂಪ್ರೋಕ್ಷಣೆ ಶುದ್ಧೀಕರಣ ಪ್ರಕ್ರಿಯೆ ಇರುವುದರಿಂದ ದೇವಾಲಯದಲ್ಲಿ ಭಕ್ತರ ದರ್ಶನಕ್ಕೆ ಅವಕಾಶ ಇರುವುದಿಲ್ಲ.  ಒಟ್ಟು 6 ದಿನಗಳ ಕಾಲ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ. 

ತಿರುಪತಿ: ತಿರುಮದ ವಿಶ್ವಪ್ರಸಿದ್ಧ ವೆಂಕಟೇಶ್ವರ ದೇವಾಲಯದಲ್ಲಿ 6 ದಿವಸಗಳ ಮಹಾಸಂಪ್ರೋಕ್ಷಣೆ ಶುದ್ಧೀಕರಣ ವಿಧಿ ಶನಿವಾರ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ನಿತ್ಯ 30 ಸಾವಿರ ಭಕ್ತರಿಗೆ ಮಾತ್ರ ಈ 6 ದಿವಸಗಳ ಅವಧಿಯಲ್ಲಿ ಪ್ರವೇಶಾವಕಾಶ ಕಲ್ಪಿಸಲಾಗುತ್ತದೆ.

ಶನಿವಾರ ರಾತ್ರಿ 9 ಗಂಟೆಗೆ ಅಷ್ಟಬಂಧ ಬಾಲಾಲಯ ಮಹಾಸಂಪ್ರೋಕ್ಷಣೆ ಆರಂಭವಾಗಲಿದೆ. ಈ ವೇಳೆ ಅರ್ಚಕರು ದೇವಾಲಯದ ಗರ್ಭಗುಡಿಯಲ್ಲಿ ಇರುವ ಸಣ್ಣಪುಟ್ಟರಿಪೇರಿ ಕಾರ್ಯ ಕೈಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಶುದ್ಧೀಕರಣ ನಡೆಸಲಾಗುತ್ತದೆ.

ವಾಡಿಕೆಯಂತೆ ನಿತ್ಯ 1 ಲಕ್ಷ ಭಕ್ತರು ತಿರುಮಲಕ್ಕೆ ಭೇಟಿ ನೀಡುತ್ತಾರೆ. ಈ 6 ದಿನಗಳಲ್ಲಿ ನಿತ್ಯ ಕೇವಲ 30 ಸಾವಿರ ಭಕ್ತರಿಗೆ ಅವಕಾಶ ನೀಡಲಾಗುತ್ತದೆ.

loader