ಗಾಜಿಯಾಬಾದ್‌ನಲ್ಲಿ ಪತ್ನಿ ಮತ್ತು ಆಕೆಯ ಕುಟುಂಬದ ಕಿರುಕುಳದಿಂದ ಬೇಸತ್ತ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೆ ಮುನ್ನ 'ಮದುವೆಯಾಗಬೇಡಿ' ಎಂದು ವಿಡಿಯೋ ಸಂದೇಶದಲ್ಲಿ ಹೇಳಿರುವ ಘಟನೆ ನಡೆದಿದೆ.

ಗಾಜಿಯಾಬಾದ್: ನಾನು ಸತ್ತ ಮೇಲೆ ಎಲ್ಲವನ್ನೂ ಮಾಡು. ಆದ್ರೆ ಮದುವೆ ಮಾತ್ರ ಅಗಬೇಡ ಎಂದು ವಿಡಿಯೋ ಮಾಡಿ ಪತ್ನಿಯ ಕಿರುಕುಳಕ್ಕೆ ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗಂಡ ಹೆಂಡತಿ ಅಂದ್ರೆ ಸಣ್ಣ ಪುಟ್ಟ ಜಗಳಗಳು ಇದ್ದೇ ಇರುತ್ತವೆ. ಆದ್ರೆ ಕೆಲವೊಮ್ಮೆ ಶುರುವಾದ ಜಗಳಗಳು ದುರಂತ ಅಂತ್ಯ ಕಾಣುತ್ತವೆ. ಇಲ್ಲೊಬ್ಬ ಪತ್ನಿಯ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ಮುನ್ನ ವ್ಯಕ್ತಿ ಮಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಡಿಎಲ್‌ಎಫ್ ಕಾಲೋನಿಯ ನಿವಾಸಿಯಾಗಿರುವ 38 ವರ್ಷದ ಜಗಜಿತ್ ಸಿಂಗ್ ರಾಣಾ ಆತ್ಮಹತ್ಯೆಗೆ ಶರಣಾದ ಗಂಡ. ಔಷಧಗಳ ಪೂರೈಕೆಗೆ ಕೆಲಸ ಮಾಡಿಕೊಂಡಿದ್ದ ಜಗಜಿತ್ ಸಿಂಗ್, ಮನೆಯಲ್ಲಿ ಒಬ್ಬನೇ ವಾಸವಾಗಿದ್ದನು. ಪತ್ನಿ ಹಾಗೂ ಆಕೆಯ ಪೋಷಕರು ನೀಡಿದ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. 3 ನಿಮಿಷದ ಸೆಲ್ಫಿ ವಿಡಿಯೋ ಮಾಡಿರುವ ಜಗಜಿತ್ ಸಿಂಗ್, ಪತ್ನಿ ಬುಲಂದ್‌ಶಹರ್ ನಿವಾಸಿ ಎಂಬ ಮಾಹಿತಿಯನ್ನು ಹೇಳಿದ್ದಾನೆ. ನಂತರ ಸೆಲ್ಫಿ ವಿಡಿಯೋವನ್ನು ತನ್ನ ಎಲ್ಲಾ ಬಂಧು ಹಾಗೂ ಆಪ್ತರಿಗೆ ವಾಟ್ಸಪ್‌ನಲ್ಲಿ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸೆಲ್ಫಿ ವಿಡಿಯೋದಲ್ಲಿ ಏನಿದೆ?
ನನ್ನ ಪತ್ನಿ ಹಾಗೂ ಆಕೆಯ ಕುಟುಂಬಸ್ಥರ ಕಿರುಕುಳದಿಂದ ಬೇಸತ್ತು ಪ್ರಾಣ ಕಳೆದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದೇನೆ. ಪತ್ನಿ ಕುಟುಂಬಸ್ಥರು ಹೇಗೆ ಕಿರುಕುಳ ನೀಡಿದ್ದಾರೆ ಎಂದು ಪದಗಳಿಗೆ ವಿವರಿಸಲು ಸಾಧ್ಯವಾಗಲ್ಲ. ಪತ್ನಿಗೆ ನನ್ನ ಆಸ್ತಿಯಲ್ಲಿ ಯಾವುದೇ ಪಾಲು ನೀಡಬೇಡಿ. ನನ್ನ ಮುಖವನ್ನು ಸಹ ಆಕೆಗೆ ತೋರಿಸಬೇಡಿ. ಕೊರಳಿಗೆ ನೇಣು ಹಾಕಿಕೊಂಡೇ ವಿಡಿಯೋ ಮಾಡಿರುವ ಜಗಜಿತ್ ಸಿಂಗ್, ಜೀವನದಲ್ಲಿ ಏನು ಮಾಡಬೇಕೋ ಎಲ್ಲವನ್ನು ಮಾಡಿ. ಆದ್ರೆ ಎಂದಿಗೂ ಮದುವೆ ಆಗಬೇಡಿ. ಜೈ ಶ್ರೀರಾಮ್ ಎಂದು ಹೇಳಿ ನೇಣು ಹಾಕಿಕೊಂಡಿದ್ದಾರೆ.

ಆತ್ಮಹತ್ಯೆಯ ವಿಷಯ ತಿಳಿಯುತ್ತಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಮೃತದೇಹವನ್ನು ಫ್ಯಾನ್‌ನಿಂದ ಕೆಳಗಿಳಿಸಿ ಮರಣೋತ್ತರ ಶವ ಪರೀಕ್ಷೆಗಾಗಿ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕುಟುಂಬಸ್ಥರಿಂದ ಹೇಳಿಕೆ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. 

ಹೋಟೆಲ್‌ನಲ್ಲಿ ಪುರುಷನ ಖಾಸಗಿ ಭಾಗಕ್ಕೆ ಕಚ್ಚಿದ ಚೇಳು; ನನ್ನ ಜೀವನವೇ ಹಾಳಾಯ್ತು ಅಂತ ಕಣ್ಣೀರಿಟ್ಟ ಪತ್ನಿ!

Scroll to load tweet…