ಮಕ್ಕಳಾಗದ್ದಕ್ಕೆ ರೈಲಿನಲ್ಲಿ ಮಗು ಕದ್ದು ಕೇಶ ಮುಂಡನ ಮಾಡಿಸಿ ಪರಾರಿ: ರಾಯಚೂರಿನಲ್ಲಿ ಬೆಚ್ಚಿ ಬೀಳಿಸಿದ ಅಪಹರಣ!
ರಾಯಚೂರಿನಲ್ಲಿ ರೈಲಿನಲ್ಲಿ ಮಲಗಿದ್ದ ದಂಪತಿಯ ಮಗುವನ್ನು ಅಪಹರಿಸಿ ಪರಾರಿಯಾಗಲು ಯತ್ನಿಸಿದ ಕಲಬುರಗಿ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಗುವಿಲ್ಲದೆ 22 ವರ್ಷಗಳಿಂದ ಬಳಲುತ್ತಿದ್ದೆವು ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.
ರಾಯಚೂರು (ಸೆ.2): ಉದ್ಯಾನ್ ಎಕ್ಸ್‌ಪ್ರೆಸ್‌ನಲ್ಲಿ ಕಲಬುರಗಿಯ ದಂಪತಿಗಳು 3 ವರ್ಷದ ಮಗುವನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿಯನ್ನು ಶನಿವಾರ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಏನಿದು ಪ್ರಕರಣ?: ಆ.30 ಶುಕ್ರವಾರ ರಾಯಚೂರು ಜಿಲ್ಲೆಯ ಪ್ರಕಾಶ ಹಾಗೂ ಹಂಪಮ್ಮ ದಂಪತಿ ತಮ್ಮ ಮಕ್ಕಳೊಂದಿಗೆ ಉದ್ಯಾನ್ ಎಕ್ಸ್‌ಪ್ರೆಸ್‌ನಲ್ಲಿ ಬೆಂಗಳೂರಿಗೆ ಗುಳೆ ಹೊರಟಿದ್ದರು. ಅದೇ ರೈಲಿನಲ್ಲಿ ಕಲಬುರಗಿಯ ರೂಪೇಶ-ಕುಸುಮ ದಂಪತಿ ಪ್ರಯಾಣಿಸುತ್ತಿದ್ದರು. ರಾತ್ರಿ ರೈಲಿನಲ್ಲಿ ಪ್ರಕಾಶ ದಂಪತಿ ಮಲಗಿದ ಮೇಲೆ ಅವರ ಮಗುವನ್ನು ಎತ್ತಿಕೊಂಡು ಅನಂತಪುರ ರೈಲು ನಿಲ್ದಾಣದಲ್ಲಿ ಇಳಿದಿದ್ದಾರೆ. ಬಳಿಕ ಮಂತ್ರಾಲಯಕ್ಕೆ ಹೋಗಿ ಯಾರಿಗೂ ಗುರುತು ಸಿಗದಂತೆ ಮಗುವಿಗೆ ಕೇಶ ಮುಂಡನ ಮಾಡಿಸಿದ್ದಾರೆ. ಅಲ್ಲಿಂದ ರಾಯಚೂರು ಬಸ್ ನಿಲ್ದಾಣಕ್ಕೆ ಬಂದಿದ್ದ ಕಲಬುರಗಿ ದಂಪತಿಯನ್ನು ರೈಲ್ವೆ ಪೊಲೀಸರು ಹಿಡಿದು ಮಗುವನ್ನು ಸ್ವಂತ ಪಾಲಕರಿಗೆ ಒಪ್ಪಿಸಿದ್ದಾರೆ. ಆರೋಪಿಗಳನ್ನು ವಿಚಾರಿಸಿದಾಗ 22 ವರ್ಷಗಳಿಂದ ನಮಗೆ ಮಕ್ಕಳಾಗಿಲ್ಲ ಅದಕ್ಕಾಗಿ ಮಗುವನ್ನು ಕಿಡ್ನಾಪ್ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಜೋಗ ಜಲಪಾತ ವೀಕ್ಷಣೆ ಮತ್ತಷ್ಟು ದುಬಾರಿ, ಪ್ರವಾಸಿಗರಿಂದ ಆಕ್ರೋಶ
ದಂಪತಿಗಳು ತಮ್ಮ ಫೋನ್ ಸಂಖ್ಯೆಯನ್ನು ಇನ್ನೊಬ್ಬ ಪ್ರಯಾಣಿಕರೊಂದಿಗೆ ಹಂಚಿಕೊಂಡಿದ್ದರು ಅದರ ಆಧಾರದ ಮೇಲೆ ಅವರನ್ನು ರಾಯಚೂರು ಬಸ್ ನಿಲ್ದಾಣಕ್ಕೆ ಟ್ರ್ಯಾಕ್ ಮಾಡಿ ಮಗುವನ್ನು ರಕ್ಷಿಸಲಾಯಿತು.
ತೀರ್ಥಹಳ್ಳಿಯಲ್ಲಿ ಅಪರೂಪದ ಗರುಡ ಪದ್ಧತಿಯ ಶಿರಚ್ಛೇದನ ಸ್ಮಾರಕ ಶಿಲ್ಪ ಪತ್ತೆ !
ರಾಯಚೂರು ನಿವಾಸಿಯಾದ ಆತನ ಸಂಬಂಧಿಯಿಂದ ಬಾಲಕನನ್ನು ಗುರುತಿಸಲಾಗಿದೆ. ಪೋಷಕರ ದೂರಿನ ಆಧಾರದ ಮೇಲೆ ಅನಂತಪುರದ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಮುಂದಿನ ತನಿಖೆ ಕೈಗೊಂಡಿದ್ದಾರೆ. ಮಗು ತುಂಬಾ ಸ್ನೇಹಪರನಾಗಿರುತ್ತಾನೆ ಮತ್ತು ರೂಪೇಶ್ ಮತ್ತು ಕುಸುಮಾ ತಂದೆ ತಾಯಿಯರಲ್ಲ ಎಂದು ಹೇಳಲು ಕಷ್ಟವಾಗುತ್ತಿತ್ತು, ಏಕೆಂದರೆ ಅವನು ಅವರೊಂದಿಗೆ ತುಂಬಾ ಆತ್ಮೀಯನಾಗಿದ್ದನು ಎಂದು ರೈಲ್ವೆ ರಕ್ಷಣಾ ಪಡೆ ಇನ್ಸ್‌ಪೆಕ್ಟರ್ ಅಭಿಷೇಕ್ ಕುಮಾರ್ ಹೇಳಿದ್ದಾರೆ.