ಲೋಕಸಭಾ ಚುನಾವಣೆಗೆ ಯಾವುದೇ ಸಮಯದಲ್ಲಿ ದಿನಾಂಕ ಘೋಷಣೆಯಾಗಬಹುದು ಎಂಬ ಹೊತ್ತಿನಲ್ಲೇ ಮತ್ತೊಂದು ಚುನಾವಣಾ ಪೂರ್ವ ಸಮೀಕ್ಷೆ ವರದಿ ಪ್ರಕಟವಾಗಿದೆ.
ನವದೆಹಲಿ: ಲೋಕಸಭಾ ಚುನಾವಣೆಗೆ ಯಾವುದೇ ಸಮಯದಲ್ಲಿ ದಿನಾಂಕ ಘೋಷಣೆಯಾಗಬಹುದು ಎಂಬ ಹೊತ್ತಿನಲ್ಲೇ ಮತ್ತೊಂದು ಚುನಾವಣಾ ಪೂರ್ವ ಸಮೀಕ್ಷೆ ವರದಿ ಪ್ರಕಟವಾಗಿದೆ. ಟೈಮ್ಸ್ ನೌ ಸುದ್ದಿವಾಹಿನಿಯು, ಇಟಿಜಿ ಜೊತೆಗೂಡಿ ನಡೆಸಿದ ಸಮೀಕ್ಷೆ ಅನ್ವಯ ಬಿಜೆಪಿ 358-398 ಸ್ಥಾನ ಮತ್ತು ಕಾಂಗ್ರೆಸ್ 28-48 ಸ್ಥಾನ ಗೆಲ್ಲಲಿದೆ ಎಂದು ಹೇಳಲಾಗಿದೆ. ಇದು ಬಿಜೆಪಿಯ ಈ ಬಾರಿಯ ಕನಸಾದ 400 ಸ್ಥಾನಕ್ಕೆ ಬಹುತೇಕ ಸಮೀಪವಿದೆ.
ವರದಿ ಅನ್ವಯ ಪಶ್ಚಿಮ ಬಂಗಾಳದಲ್ಲಿ ಎನ್‌ಡಿಎ 20-24, ಟಿಎಂಸಿ 17-21, ಇಂಡಿಯಾ 0-2; ತಮಿಳುನಾಡು ಇಂಡಿಯಾ 29-35, ಬಿಜೆಪಿ 2-6, ಎಐಎಡಿಎಂಕೆ 1-3; ಆಂಧ್ರಪ್ರದೇಶ ವೈಎಸ್ಆರ್ ಕಾಂಗ್ರೆಸ್ 21-22, ಟಿಡಿಪಿ-ಜನಸೇನಾ 3-4, ಮಹಾರಾಷ್ಟ್ರ ಎನ್‌ಡಿಎ 34-38, ಇಂಡಿಯಾ 9-13, ಮಧ್ಯಪ್ರದೇಶ ಬಿಜೆಪಿ-28-29, ಇಂಡಿಯಾ 0-1; ರಾಜಸ್ಥಾನ ಬಿಜೆಪಿ 20-24, ಇಂಡಿಯಾ 0-1; ಬಿಹಾರ ಎನ್‌ಡಿಎ 34-39, ಇಂಡಿಯಾ 0-2; ಜಾರ್ಖಂಡ್ ಎನ್‌ಡಿಎ 12-14, ಇಂಡಿಯಾ 0-2; ಒಡಿಶಾ ಬಿಜೆಪಿ 10-11, ಬಿಜೆಡಿ 10-11, ಇಂಡಿಯಾ 0-1 ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ.
ನಾಳೆ ಬಿಜೆಪಿ ಸಭೆ: ಕರ್ನಾಟಕದ 20 ಸ್ಪರ್ಧಿಗಳ ಹೆಸರು ಫೈನಲ್ ಸಾಧ್ಯತೆ!
ಕರ್ನಾಟಕದಲ್ಲಿ ಬಿಜೆಪಿ 21-23,
ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 21 ರಿಂದ 23 ಸ್ಥಾನ, ಕಾಂಗ್ರೆಸ್ 4-6 ಸ್ಥಾನ, ಜೆಡಿಎಸ್ 1-2 ಸ್ಥಾನ ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ.
ಬಿಜೆಪಿ-ಜೆಡಿಎಸ್ ನಡುವೆ ಸೀಟು ಹಂಚಿಕೆ, ಹಾವೇರಿ ಸ್ಥಾನಕ್ಕಾಗಿ ಶುರುವಾಯ್ತು ಪೈಪೋಟಿ!
