Asianet Suvarna News Asianet Suvarna News

ನೇತಾಜಿ ಅಸ್ಥಿಯನ್ನು ಭಾರತಕ್ಕೆ ತರುವ ಸಮಯ ಬಂದಿದೆ: ಪುತ್ರಿ ಅನಿತಾ ಬೋಸ್‌

ಭಾರತದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾದ ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಅಸ್ಥಿಯನ್ನು ಈಗಲಾದರೂ ಭಾರತಕ್ಕೆ ತರಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ತುಂಬಿದ್ದರೂ ಸ್ವತಂತ್ರ ಭಾರತಕ್ಕೆ ಮರಳುವ ನೇತಾಜಿಯವರ  ಕನಸು ಇನ್ನೂ ನನಸಾಗಿಲ್ಲ ಎಂದು ಪುತ್ರಿ ಅನಿತಾ ಬೋಸ್‌ ಹೇಳಿದ್ದಾರೆ. 

time has come to brought back netajis remains to india says anita bose ash
Author
Bangalore, First Published Aug 15, 2022, 1:24 PM IST

ಭಾರತಕ್ಕೆ ಸ್ವಾತಂತ್ರ್ಯ ಬಂದು ಇಂದಿಗೆ 75 ವರ್ಷ ತುಂಬಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ದೇಶ ಆಚರಿಸುತ್ತಿದೆ. ಆದರೆ, ನಮ್ಮ ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬರಾದ ನೇತಾಜಿ ಸುಭಾಷ್‌ ಚಂದ್ರ ಬೋಸ್‌. ಆದರೆ, ಅವರು ಮೃತಪಟ್ಟ ಬಗ್ಗೆ ಈಗಲೂ ಹಲವರಿಗೆ ಅನುಮಾನ ಇದೆ. ಈ ಬಗ್ಗೆ ದೇಶದ ಸ್ವಾತಂತ್ರ್ಯ ದಿನದಂದು ಮಾತನಾಡಿದ ನೇತಾಜಿ ಪುತ್ರಿ ಅನಿತಾ ಬೋಸ್‌, ನೇತಾಜಿಯ ಅಸ್ಥಿಯನ್ನು ಭಾರತಕ್ಕೆ ಈಗಲಾದರೂ ತರಬೇಕು ಎಂದಿದ್ದಾರೆ.

ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಅಸ್ತಿಯನ್ನು ವಾಪಸ್‌ ಭಾರತಕ್ಕೆ ತರುವ ಸರಿಯಾದ ಸಮಯ ಬಂದಿದೆ. ಅಲ್ಲದೆ, ಆಗಸ್ಟ್ 18, 1945 ರಲ್ಲಿ ನೇತಾಜಿ ಮೃತಪಟ್ಟ ಬಗ್ಗೆ ಈಗಲೂ ಹಲವರಿಗೆ ಅನುಮಾನಗಳಿದ್ದಲ್ಲಿ ಡಿಎನ್‌ಎ ಪರೀಕ್ಷೆಯ ಮೂಲಕ ಅನುಮಾನ ಪರಿಹರಿಸಿಕೊಳ್ಳಬಹುದೆಂದು ನೇತಾಜಿ ಪುತ್ರಿ ಸಲಹೆ ನೀಡಿದ್ದಾರೆ. ಜರ್ಮನಿಯಲ್ಲಿ ವಾಸ ಮಾಡುತ್ತಿರುವ ಆಸ್ಟ್ರಿಯಾದಲ್ಲಿ ಹುಟ್ಟಿದ ಅನಿತಾ ಬೋಸ್‌ ಡಿಎನ್‌ಎ ಪರೀಕ್ಷೆಯ ಮೂಲಕ ಜಪಾನ್‌ನ ಟೋಕಿಯೋದ ರೇನ್ಕೋಜಿ ದೇವಾಲಯದಲ್ಲಿ ಇಟ್ಟಿರುವ ಅಸ್ಥಿ ನೇತಾಜಿಯದ್ದು ಹೌದೋ ಅಲ್ಲವೋ ಎಂಬುದನ್ನು ಕಂಡುಕೊಳ್ಳಬಹುದು ಎಂದು ಹೇಳಿದರು. ಹಾಗೂ, ಜಪಾನ್‌ ಸರ್ಕಾರ ಈ ವಿಧಾನಕ್ಕೆ ಒಪ್ಪಿಗೆ ನೀಡಿದೆ ಎಂದೂ ಅವರು ಹೇಳಿದರು. ತನ್ನ ತಂದೆ ಭಾರತದ ಸ್ವಾತಂತ್ರ್ಯದ ಸಂಭ್ರಮವನ್ನು ಪಡಲಿಲ್ಲ. ಅವರ ಅಸ್ಥಿಯನ್ನು ಭಾರತದ ಮಣ್ಣಿಗೆ ವಾಪಸ್‌ ತರುವ ಸಮಯ ಈಗ ಬಂದಿದೆ ಎಂದು ನೇತಾಜಿಯ ಏಕೈಕ ಪುತ್ರಿ ಅನಿತಾ ಬೋಸ್‌ ಹೇಳಿಕೆ ನೀಡಿದ್ದಾರೆ. 

ಇದನ್ನು ಓದಿ: Indian Independence Day Live News : ಸೆಪ್ಟೆಂಬರ್‌ನಲ್ಲಿ ಸಂಗೊಳ್ಳಿ ರಾಯಣ್ಣ ಆರ್ಮಿ ಸ್ಕೂಲ್‌ ಉದ್ಘಾಟನೆ...

ಆಧುನಿಕ ತಂತ್ರಜ್ಞಾನವು ಈಗ ಅತ್ಯಾಧುನಿಕ ಡಿಎನ್‌ಎ ಪರೀಕ್ಷೆಯ ವಿಧಾನಗಳನ್ನು ಒದಗಿಸುತ್ತದೆ, ಅಸ್ಥಿಯಿಂದ ಡಿಎನ್‌ಎಯನ್ನು ಹೊರತೆಗೆಯಬಹುದು. ನೇತಾಜಿ ಆಗಸ್ಟ್ 18, 1945 ರಂದು ನಿಧನರಾದರು ಎಂದು ಇನ್ನೂ ಅನುಮಾನಿಸುವವರಿಗೆ, ಜಪಾನ್‌ನ ಟೋಕಿಯೋದ ರೆಂಕೋಜಿ ದೇವಸ್ಥಾನದಲ್ಲಿ ಇರಿಸಲಾಗಿರುವ ಅಸ್ಥಿಯ ವೈಜ್ಞಾನಿಕ ಪುರಾವೆಗಳನ್ನು ಪಡೆಯಲು ಇದು ಅವಕಾಶವನ್ನು ನೀಡುತ್ತದೆ ಎಂದು ಅನಿತಾ ಬೋಸ್‌ ಹೇಳಿದ್ದಾರೆ.ರೆಂಕೋಜಿ ದೇವಸ್ಥಾನದ ಅರ್ಚಕರು ಮತ್ತು ಜಪಾನ್ ಸರ್ಕಾರವು ಅಂತಹ ಪರೀಕ್ಷೆಗೆ ಒಪ್ಪಿಗೆ ನೀಡಿದೆ ಎಂದು ಭಾರತೀಯ ಸರ್ಕಾರದ ತನಿಖೆಯ ಅನುಬಂಧಗಳಲ್ಲಿನ ದಾಖಲೆಗಳು ತೋರಿಸುತ್ತವೆ ಎಂದೂ ಅನಿತಾ ಹೇಳಿದರು.

ಆದ್ದರಿಂದ ನಾವು ಅಂತಿಮವಾಗಿ ಅವರನ್ನು ಮನೆಗೆ ಕರೆತರಲು ಸಿದ್ಧರಾಗೋಣ! ನೇತಾಜಿಗೆ ಅವರ ಜೀವನದಲ್ಲಿ ಅವರ ದೇಶದ ಸ್ವಾತಂತ್ರ್ಯಕ್ಕಿಂತ ಮುಖ್ಯವಾದುದು ಯಾವುದೂ ಇರಲಿಲ್ಲ. ಪರಕೀಯರ ಆಳ್ವಿಕೆಯಿಂದ ಮುಕ್ತವಾದ ಭಾರತದಲ್ಲಿ ಬದುಕುವುದಕ್ಕಿಂತ ಹೆಚ್ಚು ಅವರು ಹಂಬಲಿಸಲಿಲ್ಲ! ಏಕೆಂದರೆ ಅವರು ಅನುಭವಿಸಲು ಬದುಕಲಿಲ್ಲ. ಸ್ವಾತಂತ್ರ್ಯದ ಸಂತೋಷ, ಕನಿಷ್ಠ ಅವರ ಅಸ್ಥಿಯಾದರೂ ಭಾರತೀಯ ನೆಲಕ್ಕೆ ಮರಳುವ ಸಮಯ ಎಂದೂ ಅನಿತಾ ಬೋಸ್‌ ಹೇಳಿಕೊಂಡಿದ್ದಾರೆ.

ನೇತಾಜಿ ಆಗಸ್ಟ್ 18, 1945 ರಂದು ತೈವಾನ್‌ನಲ್ಲಿ ವಿಮಾನ ಅಪಘಾತದಲ್ಲಿ ನಿಧನರಾದರು ಎಂದು ವ್ಯಾಪಕವಾಗಿ ನಂಬಲಾಗಿದ್ದರೂ, ಈಗಲೂ ಅವರ ಸಾವು ನಿಗೂಢವಾಗಿಯೇ ಉಳಿದಿದೆ. ಆಗಸ್ಟ್ 18, 1945 ರಂದು ತೈಪೆಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ನೇತಾಜಿ ಸಾವನ್ನಪ್ಪಿದ್ದಾರೆ ಎಂದು ಎರಡು ತನಿಖಾ ಆಯೋಗಗಳು ತೀರ್ಮಾನಿಸಿದ್ದವು. ಆದರೆ,ನ್ಯಾಯಮೂರ್ತಿ ಎಂ.ಕೆ. ಮುಖರ್ಜಿ ನೇತೃತ್ವದ ಮೂರನೇ ತನಿಖಾ ಸಮಿತಿಯು ಅದನ್ನು ವಿರೋಧಿಸಿದ್ದು, ಆ ವಿಮಾನ ಅಪಘಾತದ ನಂತರವೂ ಬೋಸ್ ಜೀವಂತವಾಗಿದ್ದರು ಎಂದು ಸೂಚಿಸಿತ್ತು.   

ಇದನ್ನೂ ಓದಿ: ಪಂಚ ಪ್ರಾಣಗಳ ಈಡೇರಿಕೆಗೆ ಸಂಕಲ್ಪ ತೊಡೋಣ: ಪ್ರಧಾನಿ ಮೋದಿ

ಈ ಹಿನ್ನೆಲೆ, ನೇತಾಜಿಯವರ ಏಕೈಕ ಮಗಳಾಗಿ, ಅವರ ಆತ್ಮೀಯ ಬಯಕೆಯಂತೆ ದೇಶಕ್ಕೆ ಸ್ವಾತಂತ್ರ್ಯ ದೊರಕಿದ ಬಳಿಕ ಭಾರತಕ್ಕೆ ಮರಳುವ ಅವರ ಆಸೆ ಈ ರೂಪದಲ್ಲಾದರೂ ಈಡೇರುತ್ತದೆ ಮತ್ತು ಅವರನ್ನು ಗೌರವಿಸಲು ಸೂಕ್ತವಾದ ಸಮಾರಂಭಗಳನ್ನು ನಡೆಸಲಾಗುವುದು ಎಂದು ಖಚಿತಪಡಿಸಿಕೊಳ್ಳಲು ನಾನು ಬಾಧ್ಯತೆ ಹೊಂದಿದ್ದೇನೆ" ಎಂದು ಅನಿತಾ ಬೋಸ್‌ ಹೇಳಿದ್ದಾರೆ. ಅಲ್ಲದೆ, ಭಾರತವು ವಸಾಹತುಶಾಹಿ ಆಡಳಿತದ ಸಂಕೋಲೆಗಳನ್ನು ಹೊರಹಾಕಿ 75 ವರ್ಷಗಳು ಕಳೆದಿದ್ದರೂ, ಸ್ವಾತಂತ್ರ್ಯ ಹೋರಾಟದ ಪ್ರಮುಖ "ವೀರ" ರಲ್ಲಿ  ಒಬ್ಬರಾದ ಸುಭಾಷ್‌ ಚಂದ್ರ ಬೋಸ್ ಅವರು ಇನ್ನೂ ತನ್ನ ತಾಯ್ನಾಡಿಗೆ ಹಿಂತಿರುಗಿಲ್ಲ ಎಂದು ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಪುತ್ರಿ ಜರ್ಮನಿಯಲ್ಲಿ ಹೇಳಿದ್ದಾರೆ. 

Follow Us:
Download App:
  • android
  • ios