Asianet Suvarna News Asianet Suvarna News

ಆಕಾಶದಲ್ಲಿ ಸಿಡಿಮದ್ದಿನಂತೆ ಚಿತ್ತಾರ ಮೂಡಿಸಿದ ಸಿಡಿಲು: ವಿಮಾನದಿಂದ ಸೆರೆಯಾದ ಅಪರೂಪದ ದೃಶ್ಯ

ವಿಮಾನ ಪ್ರಯಾಣಿಕರೊಬ್ಬರು ವಿಮಾನದಲ್ಲಿ ಸಾಗುತ್ತಿರುವ ವೇಳೆ ಕಾಣಿಸಿಕೊಂಡ ಸಿಡಿಲು ಮಿಂಚಿನ ವೀಡಿಯೋವೊಂದನ್ನು ತಮ್ಮ ಮೊಬೈಲ್‌ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ವೈರಲ್ ಆಗಿದೆ. 

Thunderstorms scene captured from flight goes viral in social Media akb
Author
First Published Sep 5, 2023, 6:28 PM IST

ಸಾಮಾನ್ಯವಾಗಿ ಮಳೆಗಾಲದಲ್ಲಿ ಮಳೆ ಬರುವುದಕ್ಕೂ ಮೊದಲು ಮೋಡ ಕವಿದು ಕತ್ತಲು ಆವರಿಸಿದಾಗ ಗುಡುಗು ಸಿಡಿಲು ಮಿಂಚು ಜೊತೆ ಜೊತೆಯೇ ಬರುವುದನ್ನು ನೀವು ನೋಡಿರಬಹುದು. ಆದರೆ 35  ಸಾವಿರ ಅಡಿ ಎತ್ತರದಲ್ಲಿ ವಿಮಾನದಲ್ಲಿ ಮಿಂಚು ಕಾಣಿಸಿಕೊಂಡರೆ ಹೇಗಿರುತ್ತೆ? ವಿಮಾನ ಪ್ರಯಾಣಿಕರೊಬ್ಬರು ವಿಮಾನದಲ್ಲಿ ಸಾಗುತ್ತಿರುವ ವೇಳೆ ಕಾಣಿಸಿಕೊಂಡ ಸಿಡಿಲು ಮಿಂಚಿನ ವೀಡಿಯೋವೊಂದನ್ನು ತಮ್ಮ ಮೊಬೈಲ್‌ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ವೈರಲ್ ಆಗಿದೆ. 

ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ (Instagram) ಪರಂ ಎಂಬುವವರು ಈ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದು,35 ಸಾವಿರ ಅಡಿ ಎತ್ತರದಲ್ಲಿ ಸಿಡಿಲು ಕಾಣಿಸಿಕೊಂಡರೆ ಹೇಗಿರುತ್ತದೆ ಎಂಬ ಬಗ್ಗೆ ಯೋಚಿಸಿದ್ದೀರ ಎಂದು ಪ್ರಶ್ನಿಸಿದ್ದಾರೆ.  ಈ ವೀಡಿಯೋದಲ್ಲಿ ಇಡೀ ಆಕಾಶವನ್ನು ಬೆಳಗುವಂತೆ ಮಿಂಚಿನ ತೀವ್ರವಾದ ಸ್ಫೋಟಗಳೊಂದಿಗೆ ವೀಡಿಯೊ ಆರಂಭವಾಗುತ್ತದೆ, ಅನೇಕ ವೀಕ್ಷಕರು ಗುಡುಗು ಸಹಿತ ಕಾಣಿಸಿಕೊಂಡ ಈ ಸಿಡಿಲಿನ ತೀವ್ರತೆಗೆ ವಿಸ್ಮಯಗೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಆದಾಗಿನಿಂದ ಈ ವೀಡಿಯೊವನ್ನು 57,000 ಕ್ಕೂ ಹೆಚ್ಚು  ಜನ ವೀಕ್ಷಿಸಿದ್ದಾರೆ.  ವೀಡಿಯೋ ನೋಡಿದವರಲ್ಲಿ ಒಬ್ಬರು, ಮೋಡಗಳ  ಮೇಲೆ ವಾಸ ಮಾಡುವ ಜನ ಪಾರ್ಟಿ ಮಾಡುತ್ತಿದ್ದಾರೆ ಎನಿಸುತ್ತಿದೆ ಎಂದು ವೀಡಿಯೋ ನೋಡಿ ಕಾಮೆಂಟ್ ಮಾಡಿದ್ದಾರೆ.  ಯಾರೋ ಫ್ಲ್ಯಾಶ್ ಲೈಟ್ ಹಿಡಿದು ಮೋಡದ ಸುತ್ತ  ಓಡುತ್ತಿರಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಒಡಿಶಾದಲ್ಲಿ 2 ತಾಸಲ್ಲಿ 61 ಸಾವಿರ ಸಿಡಿಲು, 10 ಜನರ ಸಾವು!

ಸಿಡಿಲು ಗುಡುಗು ಮಿಂಚು (Thunderstorms) ಮನದಲ್ಲಿ ಹಲವು ರೀತಿಯ ಚಿತ್ರಣಗಳನ್ನು ಮೂಡಿಸುತ್ತದೆ. ಮೋಡ ಕವಿದು ಮಳೆಯಾಗುವ ವೇಳೆ ಬರುವ ಈ ಸಿಡಿಲು ಭಯ ಮೂಡಿಸುವುದರ ಜೊತೆಗೆ ಕೆಲವೊಮ್ಮೆ ಆಸ್ತಿ ಪಾಸ್ತಿ ನಷ್ಟ ಪ್ರಾಣ ಹಾನಿಗೂ  ಕಾರಣವಾಗುತ್ತದೆ. ಆಕಾಶದಲ್ಲಿ ಹಲವು ಬೆಳಕಿನ ಚಿತ್ತಾರ ಮೂಡಿಸುವ ಈ ಸಿಡಿಲು ಗಾಳಿಯ ಒತ್ತಡದ ಬದಲಾವಣೆಯ ಕಾರಣದಿಂದಲೂ ಸಂಭವಿಸುತ್ತದೆ. 

ಕರ್ನಾಟಕದ ಹಲವೆಡೆ ಭಾರೀ ಮಳೆ, ಸಿಡಿಲು ಬಡಿದು ಮಹಿಳೆ ಸಾವು

 
 
 
 
 
 
 
 
 
 
 
 
 
 
 

A post shared by Param. (@parampreeeeet)

 

Follow Us:
Download App:
  • android
  • ios