ಬೈಕ್‌ಗೆ ಡಿಕ್ಕಿ ಹೊಡೆದು ಬೆಂಕಿಗಾಹುತಿಯಾದ ಪೊಲೀಸ್ ಬಸ್: ಮೂವರು ಬೈಕರ್‌ಗಳು ಸಾವು

ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಭಾಗವಹಿಸಿದ್ದ ಕಾರ್ಯಕ್ರಮದಿಂದ ಪೊಲೀಸರನ್ನು ಕರೆದೊಯ್ಯುತ್ತಿದ್ದ ಪೊಲೀಸ್ ಬಸ್‌  ಬೈಕ್‌ಗೆ ಡಿಕ್ಕಿಯಾದ ಪರಿಣಾಮ ಮೂವರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

three Bikers killed in road accident, after police bus hits their bike in Chhapra-Siwan Highway, bihar akb

ಪಾಟ್ನಾ: ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಭಾಗವಹಿಸಿದ್ದ ಕಾರ್ಯಕ್ರಮದಿಂದ ಪೊಲೀಸರನ್ನು ಕರೆದೊಯ್ಯುತ್ತಿದ್ದ ಪೊಲೀಸ್ ಬಸ್‌  ಬೈಕ್‌ಗೆ ಡಿಕ್ಕಿಯಾದ ಪರಿಣಾಮ ಮೂವರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ನಂತರ ಪೊಲೀಸ್ ವಾಹನದ ಪೆಟ್ರೋಲ್ ಟ್ಯಾಂಕ್‌ಗೆ ಬೆಂಕಿ ಹತ್ತಿಕೊಂಡಿದ್ದು, ಪೊಲೀಸ್ ವಾಹನ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಬೆಂಕಿ ಸಂಪೂರ್ಣವಾಗಿ ವ್ಯಾಪಿಸಿಕೊಳ್ಳುವ ಮುನ್ನವೇ ಪೊಲೀಸರು ಬಸ್‌ನಿಂದ ಕೆಳಗೆ ಇಳಿದು ಅಪಾಯದಿಂದ ಪಾರಾಗಿದ್ದಾರೆ. 

ಬಿಹಾರದ ಚಪ್ರಾ-ಸಿವನ್ ಹೆದ್ದಾರಿಯಲ್ಲಿ (Chapra-Siwan Highway) ಇಂದು ಮುಂಜಾನೆ ಈ ಅನಾಹುತ ಸಂಭವಿಸಿದೆ. ಬೈಕ್‌ಗೆ ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಬಸ್‌ನ ಕೆಳಗಿರುವ ಪೆಟ್ರೋಲ್‌ಟ್ಯಾಂಕ್‌ಗೆ ಬೆಂಕಿ ಹೊತ್ತಿಕೊಂಡಿದೆ. ಅಲ್ಲದೇ ಬೈಕ್ ಸವಾರನೋರ್ವ ಅದರ ಕೆಳಗೆ ಸಿಲುಕಿ ಬೆಂಕಿಗಾಹುತಿಯಾಗಿದ್ದಾನೆ. ಬೆಂಕಿ ಹೊತ್ತಿ ಉರಿಯುತ್ತಿದ್ದರೆ ಪೊಲೀಸರು ಕೂಡಲೇ ಬಸ್‌ನಿಂದ ಹೊರಗಿಳಿಯುತ್ತಿರುವ ದೃಶ್ಯ  ವಿಡಿಯೋದಲ್ಲಿ ಸೆರೆ ಆಗಿದೆ. 

ಹೀಗೆ ಸಜೀವ ದಹನವಾದ ಬೈಕರ್ ಅಪಘಾತದ ಬಳಿಕ ತನ್ನ ಬೈಕ್‌ ಜೊತೆ ಪೊಲೀಸ್ ಬಸ್‌ ಕೆಳಗೆ ಸಿಲುಕಿಕೊಂಡಿದ್ದ. ವೇಗವಾಗಿ ಸಾಗುತ್ತಿದ್ದ ಪೊಲೀಸ್ ವ್ಯಾನ್ ಬೈಕ್‌ಗೆ ಗುದ್ದಿ ಬೈಕ್‌ನ್ನು ಸುಮಾರು 90 ಮೀಟರ್ ದೂರದವರೆಗೆ ಎಳೆದೊಯ್ದಿದೆ. ಪರಿಣಾಮ ಬಸ್‌ನ ಪೆಟ್ರೋಲ್ ಟ್ಯಾಂಕರ್‌ಗೆ ಘರ್ಷಣೆಯುಂಟಾಗಿ ಬೆಂಕಿ ತಗುಲಿದ್ದು, ಒಬ್ಬ ಬೈಕರ್ ಸಜೀವ ದಹನಗೊಂಡಿದ್ದಾನೆ. 

ವಂದೇ ಭಾರತ್ ರೈಲಿಗೆ ದಿನಕ್ಕೊಂದು ವಿಘ್ನ, 3ನೇ ದಿನ ಚಕ್ರ ಜಾಮ್‌ನಿಂದ ಶತಾಬ್ದಿಗೆ ಪ್ರಯಾಣಿಕರ ಶಿಫ್ಟ್!

ಪೊಲೀಸರನ್ನು ಕರೆದೊಯ್ಯುತ್ತಿದ್ದ ಈ ಬಸ್ ಹಿರಿಯ ರಾಜಕೀಯ ಮುತ್ಸದಿ (political icon) ದಿವಂಗತ ಜಯ ಪ್ರಕಾಶ್ ನಾರಾಯಣ್ (Jay Prakash Narayan) ಅವರ 120ನೇ ಜನ್ಮ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದ ಭದ್ರತೆಗೆ ಕರೆದೊಯ್ದಿದ್ದ ಪೊಲೀಸರನ್ನು ವಾಪಸ್ ಕರೆತರುತ್ತಿತ್ತು. ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ (Union Home Minister) ಅಮಿತ್ ಷಾ (Amit Shah) ಭಾಗವಹಿಸಿದ್ದರು. 

ಕಾರು ರಿವರ್ಸ್‌ ತೆಗೆಯುವ ವೇಳೆ 2 ವರ್ಷದ ಕಂದಮ್ಮ ಸಾವು


ವಿಡಿಯೋದಲ್ಲಿ ಬೆಂಕಿ ಧಗಧಗನೇ ಉರಿಯುತ್ತಿದ್ದು, ಪೊಲೀಸ್ ವಾಹನದಿಂದ ದಟ್ಟ ಹೊಗೆ ಬರುತ್ತಿರುವುದು ಕಾಣಿಸುತ್ತಿದೆ. ಒಬ್ಬ ಸಜೀವ ದಹನಗೊಂಡಿದ್ದರೆ, ಮತ್ತಿಬ್ಬರ ಮೃತದೇಹ ರಸ್ತೆಯಲ್ಲಿ ಬಿದ್ದಿದೆ.  ಒಂದೇ ಬೈಕ್‌ನಲ್ಲಿ ಮೂವರು ಸಂಚರಿಸುತ್ತಿದ್ದಾಗ ಬಸ್ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Latest Videos
Follow Us:
Download App:
  • android
  • ios