ಕಾರು ರಿವರ್ಸ್ ತೆಗೆಯುವ ವೇಳೆ 2 ವರ್ಷದ ಕಂದಮ್ಮ ಸಾವು
ಕಾರು ರಿವರ್ಸ್ ತೆಗೆಯುವ ವೇಳೆ ಚಕ್ರಕ್ಕೆ ಸಿಲುಕಿ ಎರಡು ವರ್ಷದ ಕಂದ ಸಾವೀಗೀಡಾದ ಹೃದಯ ವಿದ್ರಾವಕ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಕಾರು ಚಾಲಕನನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ.
ನವದೆಹಲಿ: ಕಾರು ರಿವರ್ಸ್ ತೆಗೆಯುವ ವೇಳೆ ಚಕ್ರಕ್ಕೆ ಸಿಲುಕಿ ಎರಡು ವರ್ಷದ ಕಂದ ಸಾವೀಗೀಡಾದ ಹೃದಯ ವಿದ್ರಾವಕ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಕಾರು ಚಾಲಕನನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ.
ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ರೋಹಿಣಿ (Rohini) ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮಗು (Baby)ತನ್ನ ಮನೆಯ ಮುಂದೆ ಗೇಟ್‌ನ ಹೊರಭಾಗದಲ್ಲಿ ರಸ್ತೆಯಲ್ಲಿ ಆಟವಾಡುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.
ನೆರೆ ಮನೆಯವರು ಕಾರು ರಿವರ್ಸ್ ತೆಗೆಯುತ್ತಿದ್ದ ವೇಳೆ ಈ ಅವಘಡ ನಡೆದಿದ್ದು, ಘಟನೆಯ ಬಳಿಕ ಪೊಲೀಸರು (Police) ಕಾರು ಚಾಲಕನನ್ನು (car Driver) ವಶಕ್ಕೆ ಪಡೆದಿದ್ದಾರೆ. ಕಳೆದ ತಿಂಗಳು ಈಶಾನ್ಯ ದೆಹಲಿಯಲ್ಲಿ ರಸ್ತೆ ವಿಭಾಜಕದ ಮೇಲೆ ಮಲಗಿದ್ದವರ ಮೇಲೆ ಟ್ರಕ್ಕೊಂದು ಹರಿದು ನಾಲ್ವರು ಸಾವಿಗೀಡಾಗಿದ್ದರು.
ಹೊಚ್ಚ ಹೊಸ ಕಾರಿನಲ್ಲಿ ಮನೆಗೆ ಬಂದ ಮಾಲೀಕ, ಪಾರ್ಕ್ ಮಾಡಿದ್ದ ಬೈಕ್ ಮೇಲೆ ಹತ್ತಿಸಿ ಅಪಘಾತ!