ಪಹಲ್ಗಾಮ್ ದಾಳಿಯ ನಂತರ ಭಾರತ ಸಿಂಧು ಜಲ ವಿವಾದವನ್ನು ರದ್ದುಗೊಳಿಸಿದೆ. ಈ ಬಗ್ಗೆ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಏನ್ ಹೇಳಿದ್ದಾರೆ ನೋಡಿ.

ನವದೆಹಲಿ: ಮಂಗಳವಾರ ಪಹಲ್ಗಾಮ್‌ನಲ್ಲಿ 26 ಜನರನ್ನು ಬಲಿ ಪಡೆದ ಭಯೋತ್ಪಾದಕ ದಾಳಿಯ ನಂತರ ಕೇಂದ್ರ ಸರ್ಕಾರ ತುರ್ತು ಸರ್ವಪಕ್ಷಗಳ ಸಭೆ ಕರೆದಿತ್ತು. ಈ ಸಭೆಯಲ್ಲಿ ಭಾರತದ ಮುಂದಿನ ನಡೆ ಏನು ಎಂಬುವ ಬಗ್ಗೆ ವಿವಿಧ ಪಕ್ಷಗಳ ಜೊತೆ ಚರ್ಚೆ ನಡೆಸಲಾಯ್ತು. ಈಗಾಗಲೇ ಭಾರತ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ, ವಾಘ ಗಡಿ ಬಂದು ಮಾಡುವುದು ಸೇರಿದಂತೆ ಪಾಕಿಸ್ತಾನದ ವಿರುದ್ಧ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಇವುಗಳ ಕಾರ್ಯರೂಪದ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಯಿತು. ಸಭೆಯ ನಂತರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಭಾರತದ ನಿರ್ಧಾರಗಳ ಬಗ್ಗೆ ಮಾತನಾಡಿದ್ದರು. ಅವರು ಏನು ಹೇಳಿದ್ದಾರೆ ಎಂಬ ಬಗ್ಗೆ ಇಲ್ಲಿ ಮಾಹಿತಿ ಇದೆ. 

ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ಮಾಡಿದ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದ ಅವರು ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿದ್ದಕ್ಕಾಗಿ ಸರ್ಕರವನ್ನು ಶ್ಲಾಘಿಸಿದರು. ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತಗೊಳಿಸಿರುವುದು ತುಂಬಾ ಒಳ್ಳೆಯದು, ಆದರೆ ನಾವು ನೀರನ್ನು ಎಲ್ಲಿ ಇಡಬಹುದು ಎಂದು ಪ್ರಶ್ನಿಸಿದ ಅವರು ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ನಾವು ಬೆಂಬಲಿಸುತ್ತೇವೆ. ಇದು ರಾಜಕೀಯ ವಿಷಯವಲ್ಲಎಂದು ಹೇಳಿದರು.

ಇದನ್ನೂ ಓದಿ:ಹಿಂದೂ- ಮುಸ್ಲಿಂ ಬೇರೆ ಬೇರೆ ನಿಲ್ಲಿ ಎಂದ್ರು... ಆಮೇಲೆ... ಅಪ್ಪನ ಸಾವಿನ ಭಯಾನಕತೆ ತೆರೆದಿಟ್ಟ ಬಾಲಕ

ಭಯೋತ್ಪಾದಕ ಗುಂಪುಗಳಿಗೆ ಆಶ್ರಯ ನೀಡುವ ದೇಶದ ವಿರುದ್ಧ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬಹುದು. ಪಾಕಿಸ್ತಾನದ ವಿರುದ್ಧ ಆತ್ಮರಕ್ಷಣೆಗಾಗಿ ವಾಯು ಮತ್ತು ನೌಕಾ ದಿಗ್ಬಂಧನ ವಿಧಿಸಲು ಮತ್ತು ಶಸ್ತ್ರಾಸ್ತ್ರ ಮಾರಾಟದ ಮೇಲೆ ಪಾಕಿಸ್ತಾನದ ಮೇಲೆ ನಿರ್ಬಂಧಗಳನ್ನು ವಿಧಿಸಲು ಅಂತರರಾಷ್ಟ್ರೀಯ ಕಾನೂನು ನಮಗೆ ಅನುಮತಿ ನೀಡುತ್ತದೆ. ಆದರೆ ಬೈಸರನ್ ಹುಲ್ಲುಗಾವಲಿನಲ್ಲಿ ಸಿಆರ್‌ಪಿಎಫ್ ಅನ್ನು ಏಕೆ ನಿಯೋಜಿಸಲಿಲ್ಲ ವಿಪತ್ತುಗಳಿಗೆ ತ್ವರಿತ ಪ್ರತಿಕ್ರಿಯೆ ನೀಡುವ ತಂಡವು ಅಲ್ಲಿಗೆ ತಲುಪಲು ಒಂದು ಗಂಟೆ ತೆಗೆದುಕೊಂಡಿತು ಮತ್ತು ಅವರು ಜನರ ಧರ್ಮವನ್ನು ಕೇಳಿ ಗುಂಡು ಹಾರಿಸಿದರು ಎಂದು ಒವೈಸಿ ಹೇಳಿದರು. ಪಹಲ್ಗಾಮ್ ದಾಳಿಯ ನಂತರ ಕಾಶ್ಮೀರಿಗಳು ಮತ್ತು ಕಾಶ್ಮೀರಿ ವಿದ್ಯಾರ್ಥಿಗಳ ವಿರುದ್ಧ ಸುಳ್ಳು ಪ್ರಚಾರ ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.

ಇದನ್ನೂ ಓದಿ:ಪಹಲ್ಗಾಮ್‌ ದಾಳಿಯ ನಂತರ ಕಾಶ್ಮೀರಿ ಮುಸ್ಲಿಂ ಯುವಕನೋರ್ವನ ವೀಡಿಯೋ ಸಖತ್ ವೈರಲ್: ಆತ ಹೇಳಿದ್ದೇನು

ಕೇಂದ್ರ ಸಚಿವ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವ ಕಿರಣ್ ರಿಜಿಜು, ವಿದೇಶಾಂಗ ಸಚಿವ ಎಸ್. ಜೈಶಂಕರ್, ಕಾಂಗ್ರೆಸ್ ಅಧ್ಯಕ್ಷ, ಕಾಂಗ್ರೆಸ್ ಸಂಸದ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ (ಎಲ್‌ಒಪಿ) ರಾಹುಲ್ ಗಾಂಧಿ ಸೇರಿದಂತೆ ಇತರ ಪ್ರಮುಖ ನಾಯಕರು ಈ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ್ದರು. ಮಂಗಳವಾರ ಪೆಹಲ್ಗಾಮ್‌ನ ಬೈಸರನ್‌ ಹುಲ್ಲುಗಾವಲ್ಲಿನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ವಿದೇಶಿಯರು ಸೇರಿ 26 ಪ್ರವಾಸಿಗರು ಸಾವನ್ನಪ್ಪಿದ್ದಾರೆ. 2019ರ ಪುಲ್ವಾಮಾ ದಾಳಿಯ ನಂತರ ನಡೆದ ಅತ್ಯಂತ ದೊಡ್ಡ ದಾಳಿ ಇದಾಗಿದೆ. ಪುಲ್ವಾಮಾ ದಾಳಿಯಲ್ಲಿ 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು.

ಸರ್ವಪಕ್ಷ ಸಭೆಯಲ್ಲಿ ಎಲ್ಲರಿಗೂ ಅವಕಾಶ ನೀಡದಿದ್ದಕ್ಕೆ ಒವೈಸಿ ಅಸಮಾಧಾನ

ಪಹಲ್ಗಾಮ್‌ ದಾಳಿಯ ನಂತರದ ಕ್ರಮಗಳ ಕುರಿತು ಚರ್ಚಿಸಲು ಕೇಂದ್ರ ಸರ್ಕಾರ ಕರೆದಿದ್ದ ಸಭೆಯಲ್ಲಿ ಭಾಗವಹಿಸಲು ಪಕ್ಷಗಳು, ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ಕನಿಷ್ಠ ಐದು ಸಂಸದರನ್ನು ಹೊಂದಿರುವ ಪಕ್ಷಗಳಿಗೆ ಮಾತ್ರ ಅವಕಾಶ ನೀಡಿರುವುದಕ್ಕೆ ಒವೈಸಿ ಇದೇ ವೇಳೆ ಅಸಮಾಧಾನ ವ್ಯಕ್ತಪಡಿಸಿದರು. ಈ ಅರ್ಹತೆಯ ಮಿತಿಯಿಂದಾಗಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಸೇರಿದಂತೆ ಹಲವಾರು ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳು ಸಭೆಯಿಂದ ಹೊರಗುಳಿಯಬೇಕಾಯಿತು. ಇದೊಂದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಒವೈಸಿ ಅಸಮಾಧಾನ ವ್ಯಕ್ತಪಡಿಸಿದರು. 

ಪಹಲ್ಗಾಮ್ ಸರ್ವಪಕ್ಷ ಸಭೆಗೆ ಸಂಬಂಧಿಸಿದಂತೆ, ನಾನು ನಿನ್ನೆ ರಾತ್ರಿ ಕಿರಣ್ ರಿಜಿಜು ಅವರೊಂದಿಗೆ ಮಾತನಾಡಿದೆ. ಅವರು 5 ರಿಂದ 10 ಸಂಸದರನ್ನು ಹೊಂದಿರುವ ಪಕ್ಷಗಳನ್ನು ಮಾತ್ರ ಆಹ್ವಾನಿಸುವ ಬಗ್ಗೆ ಯೋಚಿಸುತ್ತಿದ್ದೇವೆ ಎಂದು ಹೇಳಿದರು. ಕಡಿಮೆ ಸಂಸದರನ್ನು ಹೊಂದಿರುವ ಪಕ್ಷಗಳನ್ನು ಏಕೆ ಆಹ್ವಾನಿಸಬಾರದು ಎಂದು ನಾನು ಕೇಳಿದಾಗ, ಸಭೆ ತುಂಬಾ ದೀರ್ಘ'ವಾಗುತ್ತದೆ ಎಂದು ಅವರು ಹೇಳಿದರು. 'ನಮ್ಮಂತಹ ಸಣ್ಣ ಪಕ್ಷಗಳ ಬಗ್ಗೆ ಏನು ನಿರ್ಧಾರ ಎಂದು ನಾನು ಕೇಳಿದಾಗ, ನನ್ನ ಧ್ವನಿ ಹೇಗಿದ್ದರೂ ತುಂಬಾ ಜೋರಾಗಿದೆ ಎಂದು ಅವರು ತಮಾಷೆ ಮಾಡಿದರು ಎಂದು ಒವೈಸಿ ಅಸಮಾಧಾನಗೊಂಡಿದ್ದಾರೆ. ಇದು ಬಿಜೆಪಿ ಅಥವಾ ಇನ್ನೊಂದು ಪಕ್ಷದ ಆಂತರಿಕ ಸಭೆಯಲ್ಲ, ಭಯೋತ್ಪಾದನೆ ಮತ್ತು ಭಯೋತ್ಪಾದಕರಿಗೆ ಆಶ್ರಯ ನೀಡುವ ದೇಶಗಳ ವಿರುದ್ಧ ಬಲವಾದ ಮತ್ತು ಒಗ್ಗಟ್ಟಿನ ಸಂದೇಶವನ್ನು ಕಳುಹಿಸಲು ನಡೆಯುತ್ತಿರುವ ಸರ್ವಪಕ್ಷ ಸಭೆಯಾಗಿದೆ ಎಂದು ಅವರು ಹೇಳಿದರು. 

Scroll to load tweet…