Asianet Suvarna News Asianet Suvarna News

ನಮ್ಮ ರೈತರಿಗಿಂತ ವಿದೇಶಗಳ ರೈತರ ಬದುಕು ಹೇಗೆ ಭಿನ್ನ?

ಭಾರತದ ರೈತರು ಹಲವಾರು ವಿಧದ ಬೆಳೆಗಳನ್ನು ಕಂಡುಹಿಡಿದು ಜಗತ್ತಿಗೆ ಪರಿಚಯಿಸಿದ್ದಾರೆ. 2500 ವರ್ಷಗಳ ಹಿಂದೆಯೇ ಕಬ್ಬು ಬೆಳೆ ಬೆಳೆಯಲಾಗುತ್ತಿತ್ತು. ಅತಿ ಹೆಚ್ಚು ಕೃಷಿ ಉತ್ಪನ್ನಗಳನ್ನು ಬೆಳೆಯುವ ಜಗತ್ತಿನ ಎರಡನೇ ದೇಶ ನಮ್ಮದು. ಮೇಲಾಗಿ ಭಾರತ ಕೃಷಿ ಪ್ರಧಾನ ರಾಷ್ಟ್ರ. 

This is how are foreign farmers different from Indian farmers
Author
Bengaluru, First Published Dec 23, 2019, 3:45 PM IST

ಭಾರತದ 6 ನೇ ಪ್ರಧಾನ ಮಂತ್ರಿ ಚೌಧರಿ ಚರಣಸಿಂಗ್‌ ಅವರ ಜನ್ಮದಿನವಾದ ಡಿಸೆಂಬರ್‌ 23ನ್ನು ರಾಷ್ಟ್ರೀಯ ರೈತರ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಭಾರತದ ಕೃಷಿ ಕ್ಷೇತ್ರ ಮತ್ತು ಮುಂದುವರಿದ ದೇಶಗಳ ಕೃಷಿ ಕ್ಷೇತ್ರದ ನಡುವಿನ ವ್ಯತ್ಯಾಸದ ಕಿರುನೋಟ ಇಲ್ಲಿದೆ.

ಭಾರತದ ಕೃಷಿಯಲ್ಲಿ ಉದ್ಯೋಗ ಹೆಚ್ಚು, ಆದಾಯ ಕಡಿಮೆ

ಭಾರತದ ರೈತರು ಹಲವಾರು ವಿಧದ ಬೆಳೆಗಳನ್ನು ಕಂಡುಹಿಡಿದು ಜಗತ್ತಿಗೆ ಪರಿಚಯಿಸಿದ್ದಾರೆ. 2500 ವರ್ಷಗಳ ಹಿಂದೆಯೇ ಕಬ್ಬು ಬೆಳೆ ಬೆಳೆಯಲಾಗುತ್ತಿತ್ತು. ಅತಿ ಹೆಚ್ಚು ಕೃಷಿ ಉತ್ಪನ್ನಗಳನ್ನು ಬೆಳೆಯುವ ಜಗತ್ತಿನ ಎರಡನೇ ದೇಶ ನಮ್ಮದು. ಮೇಲಾಗಿ ಭಾರತ ಕೃಷಿ ಪ್ರಧಾನ ರಾಷ್ಟ್ರ. ಅಧಿಕೃತವಾಗಿ ಕೆಲವೇ ಲಕ್ಷ ಜನರು ಕೃಷಿಕರು. ಆದರೆ ಅವರಿಗೆ ಸಹಾಯ ಮಾಡುವ ಕುಟುಂಬದವರನ್ನೂ ಲೆಕ್ಕ ಹಾಕಿದರೆ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡವರ ಸಂಖ್ಯೆ 50 ಕೋಟಿಗೂ ಹೆಚ್ಚು.

ಆದರೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಉದ್ಯೋಗ ಸೃಷ್ಟಿಸಿರುವ ಕೃಷಿ ಕ್ಷೇತ್ರವು ದೇಶದ ಜಿಡಿಪಿ ನೀಡುತ್ತಿರುವ ಕೊಡುಗೆ ಕೇವಲ 16%. ಆದರೆ ಅಮೆರಿಕದಲ್ಲಿನ ಕೃಷಿ ಪದ್ಧತಿ ಭಾರತಕ್ಕಿಂತ ಭಿನ್ನವಾಗಿದೆ. ಇಲ್ಲಿನ ಒಟ್ಟು ಜನಸಂಖ್ಯೆಯ 2% ಕೃಷಿಕರು (20 ಲಕ್ಷ) ಸುಮಾರು 200 ಕೋಟಿ ಜನರಿಗೆ ಬೇಕಾಗುವ ಆಹಾರೋತ್ಪನ್ನಗಳನ್ನು ಬೆಳೆಯುತ್ತಾರೆ. ಅಲ್ಲಿನ ಕೃಷಿ ಕ್ಷೇತ್ರದಿಂದ ದೇಶಕ್ಕೆ 100 ಬಿಲಿಯನ್‌ ಡಾಲರ್‌ (711 ಕೋಟಿ) ಆದಾಯ ಲಭಿಸುತ್ತಿದೆ. ಇದು ಇಂಡೊನೇಷ್ಯಾದ ಜಿಡಿಪಿಗಿಂತಾ ಹೆಚ್ಚು.

ಅತ್ಯಂತ ಕಡಿಮೆ ನೀರು ಬಳಸಿ ಬಂಪರ್ ಭತ್ತ ಪಡೆದ ಮೈಸೂರು ರೈತ!

ವಿದೇಶಗಳಲ್ಲಿ ಯಂತ್ರದ ಬಳಕೆ ಹೆಚ್ಚು

ಭಾರತದಲ್ಲಿ ರೈತರು ಸಾಮಾನ್ಯವಾಗಿ 1 ಎಕರೆಯಿಂದ 100 ಎಕರೆ ಪ್ರದೇಶದ ಒಳಗೆ ಕೃಷಿ ಭೂಮಿ ಹೊಂದಿರುತ್ತಾರೆ. ಬಹುತೇಕರು ಸಣ್ಣ ಹಿಡುವಳಿದಾರರು. ಹಾಗೆಯೇ ಇಲ್ಲಿ ಕೃಷಿ ಕ್ಷೇತ್ರದ ಎಲ್ಲ ಕೆಲಸಗಳಿಗೆ ಮಾನವ ಶ್ರಮವೇ ಹೆಚ್ಚು ಬಳಕೆಯಾಗುತ್ತದೆ. ಆದರೆ ಅಮೆರಿಕದಲ್ಲಿ ಅಥವಾ ಚೀನಾದಲ್ಲಿ ಕೃಷಿ ಕ್ಷೇತ್ರದಲ್ಲಿ ಮಾನವ ಶ್ರಮಕ್ಕಿಂತ ಹೆಚ್ಚಾಗಿ ತಂತ್ರಜ್ಞಾನ, ಅತ್ಯಾಧುನಿಕ ಯಂತ್ರೋಪಕರಣಗಳು ಬಳಕೆಯಾಗುತ್ತವೆ.

ನಮ್ಮಲ್ಲಿ ರೈತರು ಅತ್ಯಾಧುನಿಕ ಯಂತ್ರೋಪಕರಣಗಳನ್ನು ಉಪಯೋಗಿಸದೆ ಸಾಂಪ್ರದಾಯಿಕ ಕೃಷ ಪದ್ಧತಿಯನ್ನೇ ಅನುಸರಿಸುತ್ತಾರೆ. ಸಣ್ಣ ಹಿಡುವಳಿದಾರರೇ ಹೆಚ್ಚಿರುವುದರಿಂದ ಮನೆಗೆ ಬೇಕಾದಷ್ಟುಆಹಾರ ಬೆಳೆದರೆ ಸಾಕು ಎನ್ನುವ ಮನೋಭಾವ ಹೆಚ್ಚಿರುತ್ತದೆ. ಇದೇ ಕಾರಣಕ್ಕೆ ಭಾರತದಲ್ಲಿ ಅತಿ ಹೆಚ್ಚು ಜನರು ಈ ಕ್ಷೇತ್ರದಲ್ಲಿ ತೊಡಗಿದ್ದರೂ ಇಳುವರಿ ಮಾತ್ರ ಕಡಿಮೆ.

ಕೃಷಿ ಕ್ಷೇತ್ರದಲ್ಲಿ ಹೆಣ್ಣುಮಕ್ಕಳ ಪಾಲೆಷ್ಟು?

ಭಾರತದಲ್ಲಿ ಕೃಷಿಕ ಎಂದರೆ ಆತನ ಹೆಂಡತಿ, ಮಕ್ಕಳು, ಮನೆಮಂದಿಯೆಲ್ಲರ ಉದ್ಯೋಗವೂ ಅದೇ. ಹಾಗಾಗಿ ಅಸಂಖ್ಯಾತ ಮಹಿಳೆಯರು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನೂ ಕೆಲ ಮಹಿಳೆಯರು ಸ್ವಾವಲಂಬಿಯಾಗಿ ಕೃಷಿಯನ್ನೇ ಉದ್ಯೋಗವನ್ನಾಗಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಅಮೆರಿಕ ಅಥವಾ ಮುಂದುವರಿದ ದೇಶಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆ ತೀರಾ ಕಡಿಮೆ.

ಹವಾಮಾನ ವೈಪರಿತ್ಯ ಎಲ್ಲ ದೇಶದ ಕೃಷಿಕರ ಸಮಸ್ಯೆ

ಇನ್ನು ಭಾರತದಲ್ಲಿ ಕೃಷಿ ಎಂದರೆ ಮಳೆಯೊಂದಿಗೆ ಆಡುವ ಜೂಜಾಟ ಎನ್ನುವ ಮಾತಿದೆ. ಹವಾಮಾನ ಬದಲಾವಣೆ, ಪ್ರವಾಹ, ಅತಿವೃಷ್ಟಿ, ಅನಾವೃಷ್ಟಿಮುಂತಾದ ಪಾಕೃತಿಕ ವಿಕೋಪಗಳಿಂದ ಭಾರತದ ಕೃಷಿಯು ನಲುಗುತ್ತಿದೆ. ಬೇರೆ ದೇಶಗಳಲ್ಲಿ ಈ ಪರಿಸ್ಥಿತಿ ವಿಭಿನ್ನವಾಗಿಲ್ಲ .

ಅಡಿಕೆ ತೋಟದಲ್ಲೂ ಬತ್ತದ ಕೃಷಿ; ಹೊಸ ಪ್ರಯೋಗಕ್ಕೆ ಕೈ ಹಾಕಿದ ರೈತ!

ಅಮೆರಿಕದಲ್ಲಿಯೂ ಹವಾಮಾನ ವೈಪರಿತ್ಯದಿಂದ 90% ಬೆಳೆ ಹಾಳಾಗುತ್ತದೆ ಎಂದು ಅಮೆರಿಕ ಕೃಷಿ ಇಲಾಖೆ ಅಂದಾಜಿಸಿದೆ. ಜನವರಿಯಲ್ಲಿನ ವಿಪರೀತ ಶೀತ, ಫೆಬ್ರವರಿಯಲ್ಲಿ ಹಿಮ ಕುಸಿತ, ಅನಂತರ ಅತಿವೃಷ್ಟಿ, ಅದರ ಜೊತೆಗೆ ಬೇಸಿಗೆಯಲ್ಲಿ ಕಾಳ್ಗಿಚ್ಚುಗಳು ಅಮೆರಿಕ ಕೃಷಿಕರಿಗಿರುವ ದೊಡ್ಡ ಸವಾಲು.

ಸರ್ಕಾರದ ಬೆಂಬಲ ಎಷ್ಟು ಮುಖ್ಯ?

ಭಾರತದಲ್ಲಿ ರೈತರಿಗೆ ಸರ್ಕಾರ ನೀಡುವ ಬೆಂಬಲವೂ ಅಷ್ಟಕ್ಕಷ್ಟೆ. ಇಲ್ಲಿ ಕಂಪನಿಯೊಂದು ತಾನು ಉತ್ಪಾದಿಸಿದ ಉತ್ಪನ್ನಕ್ಕೆ ಬೆಲೆ ಏನೆಂಬುದನ್ನು ತಾನೇ ನಿರ್ಧರಿಸುತ್ತದೆ. ಆದರೆ ರೈತರು ಕಷ್ಟಪಟ್ಟು ಉತ್ತಿ ಬಿತ್ತಿ ಉತ್ಪಾದಿಸಿದ ಕೃಷಿ ಉತ್ಪನ್ನಗಳಿಗೆ ಬೆಲೆ ನಿಖರವಾಗಿರುವುದಿಲ್ಲ. ಹವಾಮಾನ ವೈಪರಿತ್ಯ ಸಮಸ್ಯೆಗಳು ಒಂದೆಡೆಯಾದರೆ, ಸದಾ ಬದಲಾಗುವ ಬೆಲೆ ಇನ್ನೊಂದು ದೊಡ್ಡ ಸಮಸ್ಯೆ. ಹಾಗೆಯೇ ಸರ್ಕಾರ ರೈತರಿಗೆ ಕೊಡುವ ಸಬ್ಸಿಡಿ, ಬೆಳೆ ವಿಮೆ ಎಲ್ಲವೂ ಕಡಿಮೆ.

ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಸರ್ಕಾರ ಬೆಳೆ ವಿಮೆ ಕೊಡುವುದಾಗಿ ಹೇಳುತ್ತದೆ. ಇದಕ್ಕಾಗಿ ಅರ್ಜಿ ಸಲ್ಲಿಸಿದ ರೈತರಿಗೆ ಎಕರೆಗೆ ಇಂತಿಷ್ಟುಎಂದೇನೋ ಕೊಡುತ್ತದೆ. ಪ್ರಾಕೃತಿಕ ವಿಕೋಪದಿಂದ ಬೆಳೆದ ಬೆಳೆಯೆಲ್ಲಾ ಕಳೆದುಕೊಂಡ ರೈತನಿಗೆ ಸರ್ಕಾರ ಕೊಡುವ ಪರಿಹಾರ ಕೆಲವೊಮ್ಮೆ ಸಾವಿರ ರು.ಗೂ ಕಡಿಮೆ ಇರುತ್ತದೆ. ಈ ಪರಿಹಾರ ಪಡೆದು ಏನು ಮಾಡಲು ಸಾಧ್ಯ? ಆದರೆ ಮುಂದುವರಿದ ದೇಶಗಳಲ್ಲಿ ಹಾಗಲ್ಲ. ರೈತರು ಬೆಳೆದೆ ಬೆಳೆಗೆ ತಕ್ಕ ಬೆಲೆ ನೀಡುವುದು ಮಾತ್ರವಲ್ಲದೆ, ನೀಡುವ ಸಬ್ಸಿಡಿ, ಬೆಳೆ ವಿಮೆಯೂ ಉತ್ತಮವಾಗಿರುತ್ತದೆ. ಹಾಗೆಯೇ ಅಲ್ಲಿ ರೈತರು ಬೆಳೆದ ಬೆಳೆಗಳ ರಕ್ಷಣೆಗೆ ಸೂಕ್ತ ವ್ಯವಸ್ಥೆ ಇದೆ.

ನಿಮ್ಮ ಜಮೀನಲ್ಲಿ ಎರೆಹುಳು ಬರುವಂತೆ ಮಾಡಿದ್ರೆ ಕೈತುಂಬಾ ಹಣವೂ ಬರುತ್ತೆ!

ಅತಿ ಹೆಚ್ಚು ಆಹಾರ ಉತ್ಪಾದಿಸುವ ರಾಷ್ಟ್ರಗಳು

ಚೀನಾ

ಭಾರತ

ಅಮೆರಿಕ

ಬ್ರೆಜಿಲ್‌

ನೈಜೀರಿಯಾ

ಇಂಡೋನೇಷ್ಯಾ

ಭಾರತದಲ್ಲಿ 2016 ರಲ್ಲಿ 11,379 ರೈತರ ಆತ್ಮಹತ್ಯೆ

ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ ಇತ್ತೀಚೆಗೆ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ 2016ರಲ್ಲಿ 11,379 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅದರಂತೆ ದೇಶಾದ್ಯಂತ ಪ್ರತಿ ತಿಂಗಳು 948, ಪ್ರತಿ ದಿನ 31 ರೈತರು ಸಾವನ್ನಪ್ಪಿದ್ದಾರೆ. 2015ರಲ್ಲಿ 21,360, 2014ರಲ್ಲಿ 12,602 ರೈತರು ಆತ್ಮಹತ್ಯೆಗೆ ಶರಣಾಗಿದ್ದರು.

ಭತ್ತದ ಇಳುವರಿ ಹೆಚ್ಚಿಸಲು ಅಜೋಲಾ!

ರೈತರ ಸಮಸ್ಯೆಗೆ ಸಾಲ ಮನ್ನಾ ಪರಿಹಾರವೇ?

ಇದುವರೆಗೆ ಹಲವು ರಾಜ್ಯಗಳು ತಾವು ನೀಡಿದ ಭರವಸೆಯಂತೆ ರೈತರ ಸಾಲ ಮನ್ನಾ ಮಾಡಿವೆ. ಆದರೆ ಅಲ್ಲಿಗೆ ರೈತರ ಸಮಸ್ಯೆಗಳೆಲ್ಲಾ ಪರಿಹಾರವಾಗಿದೆಯೇ? ಇಲ್ಲ. ಸಾಲಮನ್ನಾವಾದ ಬಳಿಕ ಮತ್ತೆ ಸಾಲ ಮಾಡುತ್ತಾರೆ. ಇದೇ ಮುಂದುವರೆಯುತ್ತದೆ ಬಿಟ್ಟರೆ ಬೇರೇನೂ ಉಪಯೋಗ ಇಲ್ಲ. ಆದರೆ ಮತ್ತೊಂದೆಡೆ ಕಾರ್ಪೊರೇಟ್‌ ವಲಯದಲ್ಲಿಯೇ ಸಾಲ ಮರುಪಾವತಿ ಸಂಸ್ಕೃತಿ ಮರೆಯಾಗಿದೆ. ಹೀಗಿದ್ದಾಗ ರೈತರ ಸಾಲವನ್ನೇಕೆ ಮನ್ನಾ ಮಾಡಬಾರದು ಎಂಬ ವಾದವೂ ಇದೆ.

ವಾಸ್ತವವಾಗಿ ಭಾರತದಂತಹ ಕೃಷಿ ಪ್ರಧಾನ ರಾಷ್ಟ್ರಗಳಲ್ಲಿ ಕೃಷಿ ಕ್ಷೇತ್ರದ ಸಬಲೀಕರಣವಾಗುವಂತಹ ಶಾಶ್ವತ ಪರಿಹಾರ ಬೇಕು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ತಂದು ಕೊಡುವ ಬೆಳೆಗಳಿಗೆ ಆದ್ಯತೆ ನೀಡಬೇಕು. ಸರ್ಕಾರ ಮಾರುಕಟ್ಟೆಕಾಯ್ದೆ/ ಮೂಲ ಸೌಕರ್ಯಗಳತ್ತ ಗಮನ ನೀಡಬೇಕಿದೆ.

Follow Us:
Download App:
  • android
  • ios