ಸಿಎಂ ಸಿದ್ದರಾಮಯ್ಯ ವಿರುದ್ಧ ವಾಟ್ಸಪ್ ಚಾಟಿಂಗ್: ಯುವಕರಿಬ್ಬರ ಹೊಡೆದಾಟ!
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರ-ವಿರೋಧವಾಗಿ ವಾಟ್ಸಪ್ ಚಾಟಿಂಗ್ ವಿಚಾರವಾಗಿ ಯುವಕರಿಬ್ಬರು ಪರಸ್ಪರ ಬಡಿದಾಡಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಸಮೀಪದ ಮಂಗೋಟಿ ಗ್ರಾಮದಲ್ಲಿ ನಡೆದಿದೆ.
ಹೊಳೆಹೊನ್ನೂರು (ಮೇ.31): ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರ-ವಿರೋಧವಾಗಿ ವಾಟ್ಸಪ್ ಚಾಟಿಂಗ್ ವಿಚಾರವಾಗಿ ಯುವಕರಿಬ್ಬರು ಪರಸ್ಪರ ಬಡಿದಾಡಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಸಮೀಪದ ಮಂಗೋಟಿ ಗ್ರಾಮದಲ್ಲಿ ನಡೆದಿದೆ.
ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯ ಮಲ್ಲೇಶ ಮತ್ತು ಬಿಜೆಪಿ ಕಾರ್ಯಕರ್ತ ವೀರೇಶ್ ಎಂಬುವವರ ನಡುವೆ ನಡೆದಿರುವ ಹೊಡೆದಾಟ. ಹೊಡೆದಾಟದಲ್ಲಿ ಮಲ್ಲೇಶ್ ಗಾಯಗೊಂಡಿದ್ದು, ಹೊಳೆಹೊನ್ನೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಹಿಳಾ ಪೊಲೀಸರಿಂದಲೇ ಪ್ರಜ್ವಲ್‌ನ ಬಂಧಿಸಿದ್ದು ಯಾಕೆ? ಇಲ್ಲಿದೆ ಎಸ್‌ಐಟಿ ಪ್ಲಾನ್!
ಮಂಗೋಟೆಯ ಬಿಜೆಪಿ ಕಾರ್ಯಕರ್ತ ವೀರೇಶ ಎಂಬಾತ ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah)ನವರು ಜೂನ್ 4 ರಂದು ರಾಜ್ಯ ಬಿಟ್ಟು ಹೋಗಬೇಕು ಎಂದು ವಿಡಿಯೋ ಒಂದನ್ನು ಅಪಲೋಡ್ ಮಾಡಿದ್ದ. ಈ ವಿಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತ ವಿರೋಧ ವ್ಯಕ್ತಪಡಿಸಿದ್ದಕ್ಕೆ ಅಸಭ್ಯ ಮಾತುಗಳಿಂದ ನಿಂದನೆ ಮಾಡಿ ಕಾಂಗ್ರೆಸ್ ಕಾರ್ಯಕರ್ತನಿಗೆ ಬೈದಿದ್ದ ಎನ್ನಲಾಗಿದೆ. ಈ ಪೋಸ್ಟ್ ವಿಚಾರವಾಗಿ ಮಲ್ಲೇಶ ಹಾಗೂ ವೀರೇಶ ನಡುವೆ ಚಾಟಿಂಗ್, ಮಾತಿಗೆ ಮಾತು ಬೆಳೆದಿದ್ದು, ಮಲ್ಲೇಶನ ಮೇಲೆ ವೀರೇಶ ಹಲ್ಲೆ ಮಾಡಿದ್ದಾನೆ. ಗಾಯಗೊಂಡಿರುವ ಮಲ್ಲೇಶ, ಹೊಳೆಹೊನ್ನೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿಗಮದ ಹಣ ವಾಪಸ್ ಕೇಳಿದ್ದ ಅಧಿಕಾರಿ ಪತ್ರ ಬಹಿರಂಗ! ಅಧಿಕಾರಿ ಆತ್ಮಹತ್ಯೆಗೂ ಮುನ್ನವೇ ಹಗರಣ ಗೊತ್ತಿತ್ತು?