ಬಾಯಾರಿದ ಕೋತಿ ಮನೆಗೆ ನುಗ್ಗಿದೆ. ನಳ್ಳಿ ತಿರುಗಿಸಿ ನೀರು ಕುಡಿದಿದೆ. ಇನ್ನೇನು ಮನೆಯಿಂದ ಮತ್ತೆ ಕಾಡಿನತ್ತ ತೆರಳಬೇಕು ಅನ್ನುವಷ್ಟರಲ್ಲೇ ಮನೆಯಲ್ಲಿದ್ದ ಮಹಿಳೆ ಕೋತಿಗೆ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಅಚ್ಚರಿ ಎಂದರೆ ಈ ಕೋತಿ ಮನವಿಗೆ ಸ್ಪಂದಿಸಿದೆ.

ಕೋತಿಗಳು ಆಹಾರ ಅರಸುತ್ತಾ, ನೀರು ಹುಡುಕುತ್ತಾ ನಾಡಿಗೆ ಬರವುದು, ತೋಟಕ್ಕೆ ನುಗ್ಗುವುದು ಸಾಮಾನ್ಯವಾಗಿದೆ. ಹಲವು ಬಾರಿ ಪಟ್ಟಣ, ಮನೆ, ಕಚೇರಿಗಳಳಲ್ಲಿ ಕೋತಿ ಕಾಣಿಸಿಕೊಂಡು ಕೋಲಾಹಲ ಸೃಷ್ಟಿಸಿದ ಘಟನೆಗಳು ಇವೆ. ಕೆಲವು ಬಾರಿ ಕೋತಿಯ ನಡೆಗಳು ಅಚ್ಚರಿಗೆ ಕಾರಣವಾಗಿದೆ. ಇದೀಗ ಕೋತಿಯೊಂದು ಬಾಯಾರಿ ನೀರು ಹುಡುಕುತ್ತಾ ಬಂದಿದೆ. ನೇರವಾಗಿ ಮನೆಗೆ ನುಗ್ಗಿದೆ. ಹುಡುಕಾಡಿ ಟ್ಯಾಪ್ ಬಳಿ ಬಂದ ಕೋತಿ ಟ್ಯಾಪ್ ತಿರುಗಿಸಿ ನೀರು ಕುಡಿದಿದೆ. ನೀರು ಕುಡಿತು ಮತ್ತೆ ಕಾಡಿನತ್ತ ಹೊರಡುತ್ತಿದ್ದ ಕೋತಿಗೆ ಮನೆಯ ಮಹಿಳೆಯ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಅಚ್ಚರಿ ಎಂದರೆ ಈ ಕೋತಿ ಮಹಿಳೆ ಮನವಿಗೆ ಸ್ಪಂದಿಸಿದ ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ.

ಬಾಯಾರಿದ ಕೋತಿಯಿಂದ ನೀರಿಗಾಗಿ ಹುಡುಕಾಟ

ಪ್ರತಿ ದಿನ ಮನೆಯ ಹತ್ತಿರ ಬರುತ್ತಿದ್ದ ಈ ಕೋತಿ ಬಾಯಾರಿಕೆಯಿಂದ ನೇರವಾಗಿ ಮನೆಗ ನುಗ್ಗಿದೆ. ಹೀಗಾಗಿ ಮನೆಯಲ್ಲಿದ್ದ ಸದಸ್ಯರು ಕೋತಿಯಿಂದ ತೀವ್ರವಾಗಿ ಭಯಗೊಂಡಿಲ್ಲ. ಬದಲಾಗಿ ಕೋತಿಯಿಂದ ದೂರ ಸರಿದು ನಿಂತಿದ್ದಾರೆ.ಕೋತಿ ಬಾಯಾರಿದ ಕಾರಣ ಎಲ್ಲಾ ಕಡೆ ಹುಡುಕಾಡಿದೆ. ಕೊನೆಗೆ ನಳ್ಳಿ ಬಳಿ ಬಂದು ನೀರು ಕುಡಿಯಲು ಯತ್ನಿಸಿದೆ. ಸಾಮಾನ್ಯವಾಗಿ ರಸ್ತೆ ಬದಿಯಲ್ಲಿರುವ ಕೋತಿಗಳು ಬಾಟಲಿ ಕೊಟ್ಟರು ಮುಚ್ಚಳ ತಿರುಗಿಸಿ ತೆಗೆದು ಕುಡಿಯುತ್ತದೆ. ಮನೆಗೆ ನುಗ್ಗಿದ ಕೋತಿ ನಳ್ಳಿಯನ್ನು ಹಿಡಿದು ನೋಡಿದರೆ ನೀರು ಬಂದಿಲ್ಲ, ಕೊನೆಗೆ ತಳ್ಳಿದಾಗ ನೀರು ಬಂದಿದೆ.

ಮಹಿಳೆಯ ವಿಶೇಷ ಮನವಿ

ಕೋತಿ ಅತೀವ ಖುಷಿಯಿಂದ ನೀರು ಕುಡಿದಿದೆ. ಬೇಕಾದಷ್ಟು ನೀರು ಕುಡಿದ ಕೋತಿ ಮನೆಯ ಸದಸ್ಯರನ್ನು ನೋಡಿ ಅಲ್ಲಿಂದ ತೆರಳಲು ಸಜ್ಜಾಗಿದೆ. ನಳ್ಳಿ ಬಿಟ್ಟು ಹೊರ ನಡೆಯುತ್ತಿದ್ದಂತೆ ಮಹಿಳೆ ಮನವಿಯೊಂದನ್ನು ಮಾಡಿದ್ದಾರೆ. ನಳ್ಳಿ ಆಫ್ ಮಾಡುವಂತೆ ಮಹಿಳೆ ಮನವಿ ಮಾಡಿದ್ದಾರೆ. ಒಂದೆಡೆರು ಹೆಜ್ಜೆ ಇಟ್ಟಿದ್ದ ಕೋತಿ ಮಹಿಳೆ ಮನವಿ ಬಳಿಕ ಹಿಂದಿರುಗಿ ಟ್ಯಾಪ್ ಆಫ್ ಮಾಡಿದೆ. ಮಹಿಳೆ ಇದರಿಂದ ಪುಳಕಿತಗೊಂಡಿದ್ದಾರೆ. ತನ್ನ ಮಾತನ್ನು ಕೇಳಿಸಿಕೊಂಡು ಕೋತಿ ನಳ್ಳಿ ಆಫ್ ಮಾಡಿದೆ ಎಂದು ಮಹಿಳೆ ಕುಣಿದು ಕುಪ್ಪಳಿಸಿದ್ದಾರೆ.

ಇತ್ತ ನಳ್ಳಿ ಆಫ್ ಮಾಡಿದ ಕೋತಿ ಬಳಿಕ ಕಾಡಿನತ್ತ ತೆರಳಿದೆ. ಆದರೆ ಈ ಘಟನೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಕೋತಿ ಅತ್ಯಂತ ಜವಾಬ್ದಾರಿಯುತವಾಗಿ ನಡೆದುಕೊಂಡಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಡಿನಲ್ಲಿ ನೀರು, ಆಹಾರ ಏನೂ ಇಲ್ಲ. ಹೀಗಾಗಿ ಕೋತಿಗೆ ನೀರಿನ ಮಹತ್ವದ ತಿಳಿದಿದೆ.ಹೀಗಾಗಿ ನಳ್ಳಿ ಆಫ್ ಮಾಡು ಎಂದ ತಕ್ಷಣವೇ ಟ್ಯಾಪ್ ಆಫ್ ಮಾಡಿ ತೆರಳಿದೆ ಎಂದು ಹಲವರು ಕಮೆಂಟ್ಸ್ ಮಾಡಿದ್ದಾರೆ.

ಮನೆಗೆ ನುಗ್ಗಿದ ಕೋತಿ ನೀರಿಗಾಗಿ ಹುಡುಕಾಡಿ ನೀರು ಕುಡಿದಿದೆ, ಬಳಿಕ ನಳ್ಳಿ ಆಫ್ ಮಾಡಿ ತೆರಳಿದೆ. ಈ ಘಟನೆ ಎಲ್ಲರಿಗೂ ಮಾದರಿಯಾಗಿದೆ. ನೀರು ಅದೆಷ್ಟು ಅಮೂಲ್ಯ ಅನ್ನೋದು ಮಾನವನಿಗೆ ಕೋತಿ ಮನವರಿಕೆ ಮಾಡಿದಂತಿದೆ ಎಂದು ಹಲರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಇದೀಗ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

Scroll to load tweet…