ನವದೆಹಲಿ(ಜೂ.17): ಭಾರತ- ಚೀನಾ ಯೋಧರ ನಡುವೆ ಹಲವು ತಾಸು ಹೊಡೆದಾಟ ನಡೆದು, ಉಭಯ ದೇಶಗಳ ಸೈನಿಕರು ಸಾವಿಗೀಡಾಗಿದ್ದಾರೆ. ಆದರೆ ಈ ದಾಳಿ ಕಲ್ಲು, ಡಿಗೆ, ರಾಡ್‌ಗಳಿಂದ ನಡೆದಿfದೆ ಎನ್ನಲಾಗಿದೆ. ಸಾಮಾನ್ಯವಾಗಿ ಗಡಿಯಲಲ್ಲಿ ಗುಂಡಿನ ದಾಳಿ ನಡೆಯುತ್ತದೆ. ಆದರೆ ಇಲ್ಲಿ ಯಾಕೆ ಹಾಗಾಗಿಲ್ಲ? ಇಲ್ಲಿದೆ ಕಾರಣ

ಕತ್ತಲಾಗುತ್ತಿದ್ದಂತೆ ಚೀನಿಯರಿಂದ ಕಲ್ಲು, ಬಡಿಗೆಯಿಂದ ಭಾರತೀಯರ ಸೈನಿಕರ ಕಗ್ಗೊಲೆ!

ಎರಡೂ ದೇಶಗಳ ಯೋಧರ ನಡುವೆ ಗುಂಡಿನ ಚಕಮಕಿ ನಡೆಯದಿರುವುದಕ್ಕೆ ಕಾರಣ- ಒಪ್ಪಂದಗಳು. 1993ರಲ್ಲಿ ಭಾರತ- ಚೀನಾ ನಡುವೆ ಏರ್ಪಟ್ಟಿರುವ ಒಪ್ಪಂದದ ಪ್ರಕಾರ, ಉಭಯ ದೇಶಗಳ ಪೈಕಿ ಯಾವುದೇ ದೇಶದ ಸೈನಿಕರು ಗಡಿ ದಾಟಿ ಬಂದರೆ, ಅವರಿಗೆ ಎಚ್ಚರಿಕೆ ನೀಡಿ ಕಳುಹಿಸಬೇಕು. 1996ರ ಒಪ್ಪಂದದ ಪ್ರಕಾರ, ಗಡಿ ವಾಸ್ತವಿಕ ರೇಖೆಯ 2 ಕಿ.ಮೀ. ಸುತ್ತಳತೆಯಲ್ಲಿ ಯಾವುದೇ ದೇಶ ಗುಂಡಿನ ದಾಳಿ ಅಥವಾ ಸ್ಫೋಟ ನಡೆಸಕೂಡದು. ಹೀಗಾಗಿ ಎರಡೂ ದೇಶಗಳ ಯೋಧರು ಗಡಿಯಲ್ಲಿ ಶಸ್ತ್ರಾಸ್ತ್ರ ತೋರಿಸುವುದಿಲ್ಲ.

ಗಲ್ವಾನ್‌ ಕಣಿವೆಯಲ್ಲಿ ಭಾರತೀಯ ಸೇನೆಯ ಮೇಲೆ ದಾಳಿ ಮಾಡುವ ಮೂಲಕ ಚೀನಾ 1993, 1996 ಮತ್ತು 2013ರಲ್ಲಿ ಮಾಡಿಕೊಳ್ಳಲಾದ ಗಡಿ ಶಾಂತಿ ಒಪ್ಪಂದವನ್ನು ಉಲ್ಲಂಘಿಸಿದೆ. 1993ರ ಒಪ್ಪಂದದ ಪ್ರಕಾರ, ಒಂದು ವೇಳೆ ಉಭಯ ಪಡೆಗಳ ಯಾವುದೇ ಯೋಧರು ಗಡಿ ದಾಟಿ ಒಳಗೆ ಬಂದರೆ ಅವರನ್ನು ವಾಪಸ್‌ ವಾಪಸ್‌ ಕುಳುಹಿಸಬೇಕು. ಆದರೆ, ಚೀನಾ ಗಲ್ವಾನ್‌ನಲ್ಲಿ ಈ ನಿಯಮ ಪಾಲಿಸಿಲ್ಲ.

ಗಡಿ ಸಂಘರ್ಷ: ಭಾರತ ಸೇನೆ ಕೊಟ್ಟ ಎದುರೇಟಿಗೆ 43 ಚೀನಾ ಸೈನಿಕರು ಮಟಾಶ್

1996ರ ಒಪ್ಪಂದದ ಪ್ರಕಾರ, ಗಡಿಯಲ್ಲಿ ಉಭಯ ಪಡೆಗಳ ಯೋಧರು ಮುಖಾಮುಖಿಯಾದರೆ, ಸ್ವಯಂ ನಿಯಂತ್ರಣ ಹೇರಿಕೊಳ್ಳಬೇಕು, ಆಕ್ರಮಣಕ್ಕೆ ಮುಂದಾಗಬಾರದು. ಅದೇ ರೀತಿ 2013ರ ಒಪ್ಪಂದದ ಪ್ರಕಾರ, ಗಡಿಯನ್ನು ಗುರುತಿಸಲು ಸಾಧ್ಯವಾಗದೇ ಇದ್ದಲ್ಲಿ ಗಡಿಯಲ್ಲಿ ಕಾವಲು ಕಾಯುವುದನ್ನು ನಿಲ್ಲಿಬೇಕು ಎಂದು ತಿಳಿಸಲಾಗಿದೆ. ಆದರೆ, ಈ ಮೂರು ಒಪ್ಪಂದದಲ್ಲಿನ ಯಾವುದೇ ಅಂಶವನ್ನು ಚೀನಾ ಗಲ್ವಾನ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ಪಾಲಿಸಿಲ್ಲ.