ನವದೆಹಲಿ. (ಜೂನ್.16): ಕಾಲು ಕೆರೆದು ಸಂಘರ್ಷಕ್ಕಿಳಿದ ಚೀನಾಕ್ಕೆ ಭಾರತ ಯೋಧರು ಕೊಟ್ಟ ಖಡಕ್ ಪ್ರತ್ಯುತ್ತರಕ್ಕೆ 43 ಚೀನಾ ಸೈನಕರು ಮಟಾಶ್ ಆಗಿದ್ದಾರೆ ಎಂದು ತಿಳಿದುಬಂದಿದೆ.

"

ಸಂಘರ್ಷ ಸ್ಥಿತಿ ತಿಳಿಗೊಳಿಸಲು ಮುಂದಾದ ಭಾರತ - ಚೀನಾ

ಭಾರತ-ಚೀನಾ ಲಡಾಕ್‌ನ  ಗಲ್ವಾನ್ ವ್ಯಾಲಿ ಗಡಿ ಪ್ರದೇಶದಲ್ಲಿ ಸಂಘರ್ಷ ನಡೆದಿದ್ದು, ಈ ವೇಳೆ ಭಾರತ ಸೇನೆ  43 ಚೀನಾ ಸೈನಕರನ್ನು ಹೊಡೆದುರುಳಿಸಿದೆ. ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಇನ್ನು ಚೀನಾ ಜೊತೆಗಿನ ನಡೆದ ನೇರ ಹಣಾಹಣಿಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಸರ್ಕಾರದ ಅಧಿಕೃತ ಮೂಲಗಳಿಂದ ತಿಳಿದುಬಂದಿದೆ ಅಂತ ಸುದ್ದಿ ಸಂಸ್ಥೆ ತಿಳಿಸಿದೆ.

"