ಕಳವಿಗೂ ಮೊದಲು ಬ್ಯಾಂಕ್‌ನಲ್ಲಿ ಪೂಜೆ ಮಾಡಿದ ಕಳ್ಳರು
- ಕಳವಿಗೂ ಮೊದಲು ಬ್ಯಾಂಕ್‌ನಲ್ಲಿ ಪೂಜೆ ಮಾಡಿದ ಕಳ್ಳರು
- ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ವಿಚಿತ್ರ ಘಟನೆ
- ಪೊಲೀಸರಿಗೆ ಸಲಹೆ ನೀಡಿ 34 ಲಕ್ಷದೊಂದಿಗೆ ಪರಾರಿ
ಕೊಲ್ಲಂ: ಭಾರತದಲ್ಲಿ, ಹೊಸ ಉದ್ಯಮ ಅಥವಾ ವ್ಯವಹಾರಗಳನ್ನು ಆರಂಭಿಸುವಾಗ ಪೂಜೆ ಅಥವಾ ದೇವರ ಸ್ತುತಿಯೊಂದಿಗೆ ಹೊಸ ಕಾರ್ಯ ಆರಂಭಿಸುವುದು ಸಾಮಾನ್ಯ ಹಾಗೂ ಇದು ಸಂಪ್ರದಾಯ. ಆದರೆ ಕೇರಳದಲ್ಲಿ ಕಳ್ಳರು ಕೂಡ ಕಳವಿಗೆ ಮೊದಲು ಪೂಜೆ ಮಾಡುವ ಮೂಲಕ ಕಳ್ಳತನದ ಯಶಸ್ಸಿಗೆ ದೇವರಲ್ಲಿ ಪ್ರಾರ್ಥಿಸಿದ್ದಾರೆ. ಕೇರಳದ (Kerala) ಕೊಲ್ಲಂನಲ್ಲಿ (Kollam) ಈ ವಿಚಿತ್ರ ಘಟನೆ ನಡೆದಿದೆ. ಕೊಲ್ಲಂನ ಬ್ಯಾಂಕೊಂದರಲ್ಲಿ ಕಳ್ಳರು ಕಳ್ಳತನಕ್ಕೂ ಮೊದಲು ಮದ್ಯ ಹಾಗೂ ವೀಳ್ಯದೆಲೆಯೊಂದಿಗೆ (betel leaves) ಪೂಜೆ ಸಲ್ಲಿಸಿದ್ದಾರೆ ನಂತರ 30 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು 4 ಲಕ್ಷ ರೂಪಾಯಿ ನಗದನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.
ಕೇರಳದ ಮನೋರಮಾ ಪತ್ರಿಕೆ ಪ್ರಕಾರ, ಕಳ್ಳರು ಪಠಾಣಪುರಂನ ಜನತಾ ಜಂಕ್ಷನ್‌ನಲ್ಲಿರುವ (Janata Junction) ಖಾಸಗಿ ಹಣಕಾಸು ಸಂಸ್ಥೆ ಪಠಾಣಪುರಂ ಬ್ಯಾಂಕರ್ಸ್ (Pathanapuram Bankers) ನಲ್ಲಿ ಲೂಟಿ ಮಾಡಿದ್ದಾರೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಹಣಕಾಸು ಸಂಸ್ಥೆಯ ಮಾಲೀಕ ರಾಮಚಂದ್ರನ್ ನಾಯರ್ (Ramchandran Nair) ಅವರಿಗೆ ತಮ್ಮ ಸಂಸ್ಥೆಯಲ್ಲಿ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ. ಎರಡು ಲಾಕರ್‌ಗಳಲ್ಲಿ ಇರಿಸಲಾಗಿದ್ದ 100 ಪವನ್ ಚಿನ್ನಾಭರಣ ಮತ್ತು ನಗದು ಕಳೆದು ಹೋಗಿದೆ ಎಂದು ಅವರು ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ.
ಯೂಟ್ಯೂಬ್ ನೋಡಿ ಕಳ್ಳತನಕ್ಕೆ ಇಳಿದಿದ್ದ ಖದೀಮರ ಸೆರೆ!
ಸ್ಥಳಕ್ಕಾಗಮಿಸಿದ ಪೊಲೀಸರಿಗೆ, ಚಿನ್ನ ಮತ್ತು ನಗದು ಸಂಗ್ರಹಿಸಿಟ್ಟಿದ್ದ ಲಾಕರ್ ಬಳಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿರುವುದು ಬೆಳಕಿಗೆ ಬಂದಿದೆ. ಸ್ಥಳದಲ್ಲಿ ಹಳದಿ ದಾರ, ನಿಂಬೆಹುಳಿ, ದೇವರ ಫೋಟೋದ ಜೊತೆ ನಾನು ಅಪಾಯಕಾರಿ, ನನ್ನನ್ನು ಹಿಂಬಾಲಿಸಬೇಡಿ ಎಂದು ಬರೆದಿರುವ ಚೀಟಿಯೊಂದು ಪತ್ತೆಯಾಗಿದೆ. ಪೊಲೀಸ್ ನಾಯಿಯನ್ನು ದಾರಿ ತಪ್ಪಿಸುವ ಉದ್ದೇಶದಿಂದ ಕೋಣೆಯ ಸುತ್ತಲೂ ಮಾನವ ಕೂದಲು ಕೂಡ ಕಂಡು ಬಂದಿದೆ.
ದರೋಡೆಕೋರರು ಛಾವಣಿಯ ಮೂಲಕ ಮೂರು ಅಂತಸ್ತಿನ ಕಟ್ಟಡದ ಮೊದಲ ಮಹಡಿಯನ್ನು ತಲುಪಿದ್ದು, ನಂತರ ಮುಖ್ಯದ್ವಾರದ ಕಬ್ಬಿಣದ ಗ್ರಿಲ್‌ಗಳನ್ನು ಮುರಿದಿದ್ದಾರೆ. ಬಳಿಕ ಬಲವಂತವಾಗಿ ಬಾಗಿಲು ತೆಗೆದಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದುಷ್ಕರ್ಮಿಗಳು ಕಟರ್ ಬಳಸಿ ಲಾಕರ್‌ಗಳನ್ನು ತೆರೆದು ಚಿನ್ನ ಮತ್ತು ಹಣವನ್ನು ಕದ್ದು ಪರಾರಿಯಾಗಿದ್ದಾರೆ ಎಂದು ಅಧಿಕಾರಿ ವಿವರಿಸಿದ್ದಾರೆ.
Udupi: ಇವನೆಂಥಾ ಕಳ್ಳ ಮಾರಾಯ್ರೇ: ಎಂಟು ಲಕ್ಷ ಕದ್ದವ ಒಂದು ಲಕ್ಷ ಯಾಕೆ ಬಿಟ್ಟು ಹೋದ?
ಇಂತಹದ್ದೇ ವಿಚಿತ್ರ ಘಟನೆಯೊಂದರಲ್ಲಿ, ಉತ್ತರಪ್ರದೇಶದ ಚಿತ್ರಕೂಟದಲ್ಲಿ ಬಾಲಾಜಿ ದೇವಸ್ಥಾನದಿಂದ 16 ಅಮೂಲ್ಯ ವಿಗ್ರಹಗಳನ್ನು ಕದ್ದೊಯ್ದ ಕಳ್ಳರು ಅದರಲ್ಲಿ 14 ವಿಗ್ರಹಗಳನ್ನು ದೇವಾಲಯದ ಪ್ರಧಾನ ಅರ್ಚಕರ ಮನೆಯ ಬಳಿ ಭಾನುವಾರ ಬಿಟ್ಟು ಹೋಗಿದ್ದಾರೆ. ಅಲ್ಲದೇ ಕದ್ದ ವಿಗ್ರಹಗಳನ್ನು ವಾಪಸ್ ತಂದಿಟ್ಟಿರುವುದಕ್ಕೆ ಕಾರಣವನ್ನು ತಿಳಿಸಿರುವ ಅವರು ಅಪರಾಧ ಮಾಡಿದ ನಂತರ ದುಃಸ್ವಪ್ನಗಳು ಬರುತ್ತಿವೆ ಮತ್ತು ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಚೀಟಿಯಲ್ಲಿ ಬರೆದಿಟ್ಟು ಹೋಗಿದ್ದರು.
ಇಲ್ಲೊಬ್ಬ ಕಳ್ಳ (Thief) ಕುತೂಹಲಕಾರಿ ರೀತಿಯಲ್ಲಿ ಹಣ (Money) ದೋಚಿದ್ದಾನೆ. ಕಳ್ಳತನಕ್ಕೆಂದು ಬರುವ ಆಸಾಮಿಗಳು ಕೈಗೆ ಸಿಕ್ಕಿದ್ದನ್ನೆಲ್ಲ ಬಾಚಿಕೊಂಡು ಹೋಗುವುದನ್ನು ಕೇಳಿದ್ದೇವೆ. ಆದರೆ ಇಲ್ಲಿ ಈ ಚೋರನ ಕಥೆ ಕೇಳಿದರೆ ನಿಜಕ್ಕೂ ಆಶ್ಚರ್ಯ ಆಗುತ್ತೆ. ಈ ಘಟನೆ ನಡೆದಿರುವುದು ಉಡುಪಿ (Udupi) ಜಿಲ್ಲೆಯ ಮಲ್ಪೆ ಪೊಲೀಸ್ ಠಾಣಾ (Malpe Police Station) ವ್ಯಾಪ್ತಿಯಲ್ಲಿ. ಇಲ್ಲಿ ಕಳ್ಳತನಕ್ಕೆ ಬಂದ ಕಳ್ಳನೋರ್ವ ಅಲ್ಲಿದ್ದ ಎಂಟು ಲಕ್ಷ ನಗದನ್ನು ಕದ್ದು ಒಂದು ಲಕ್ಷ ಹಣವನ್ನು ಮಾತ್ರ ಬಿಟ್ಟಿ ಹೋಗಿದ್ದ.