ನವದೆಹಲಿ (ಜ. 03): ಕಳ್ಳತನ ಮಾಡುವಾಗಲೂ ಅದೃಷ್ಟಇರಬೇಕು ಎನ್ನುವುದು ಇದಕ್ಕೇ ಇರಬೇಕು. ಪೋಸ್ಟ್‌ ಆಫೀಸ್‌ನ ಗೋಡೆಗೆ ಕನ್ನ ಕೊರೆದು ಒಳನುಗ್ಗಿದ ವ್ಯಕ್ತಿಯೊಬ್ಬ ಇಡೀ ಅಂಚೆ ಕಚೇರಿಯನ್ನು ಹುಡುಕಾಡಿದರೂ ಸಿಕ್ಕಿದ್ದು ಕೇವಲ 487 ರು. ಮಾತ್ರ.

ತಮಾಷೆಯೇ ಅಲ್ಲರೀ... ಲೈಂಗಿಕ ಸುಖ ಜೀವನ ನಡೆಸೋದ್ರಲ್ಲಿ ಕೃಷಿಕರೇ ನಂಬರ್ 1 ಅಂತೆ!

ಆದರೆ, ಸಮೀಪದಲ್ಲೇ ಬ್ಯಾಗ್‌ವೊಂದರಲ್ಲಿ ಇದ್ದ 5000 ರು. ಆತನ ಕಣ್ಣಿಗೆ ಬಿದ್ದಿರಲಿಲ್ಲ. ಕೊನೆಗೆ ಬಂದ ದಾರಿಗೆ ಸುಂಕ ಇಲ್ಲ ಎಂದು ಸಿಕ್ಕಿದಷ್ಟುಹಣವನ್ನು ಕಿಸೆಗೆ ಹಾಕಿಕೊಂಡು ಮನೆಗೆ ಹೋಗಿದ್ದಾನೆ. ಇಂಥದ್ದೊಂದು ಕಳ್ಳತನದ ಪ್ರಸಂಗ ನಡೆದಿದ್ದು ಪೂರ್ವ ದೆಹಲಿಯ ಪೋಸ್ಟ್‌ ಆಫೀಸ್‌ ಒಂದರಲ್ಲಿ.

ತಮಾಷೆಯೇ ಅಲ್ಲರೀ! ಕಛೇರಿ ಕೆಲಸಕ್ಕೂ ಹೆಲ್ಮೆಟ್

ಸೋಮವಾರ ಮುಂಜಾನೆ ಉಪ ಪೋಸ್ಟ್‌ ಮಾಸ್ಟರ್‌ ಕುಲ್ದೀಪ್‌ ಸಿಂಗ್‌ ವರ್ಮಾ ಎಂದಿನಂತೆ ಕಚೇರಿಗೆ ಆಗಮಿಸಿದ ಸಂದರ್ಭದಲ್ಲಿ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ಶನಿವಾರ ಸಂಜೆ 5.30 ಕ್ಕೆ ಪೋಸ್ಟ್ ಮಾಸ್ಟರ್ ಬೀಗ ಹಾಕಿಕೊಂಡು ಹೋದ ನಂತರ ಕಳ್ಳರು ಹಿಂಬದಿಯಿಂದ ಗೋಡೆಗೆ ಖನ್ನ ಹಾಕಿದ್ದಾರೆ.  ಅಲ್ಲಿ ಸೆಕ್ಯುರಿಟಿಗಳಿಲ್ಲದೇ ಇರುವುದು ಕಳ್ಳರಿಗೆ ಅನುಕೂಲವಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು ಅಲ್ಲಿ ಸಿಸಿಟಿವಿಗಳಿಲ್ಲದೇ ಇರುವುದು ತಲೆನೋವಾಗಿದೆ.