ವಾಹನ ಸವಾರರು ತಮ್ಮ ಸುರಕ್ಷತೆಗಾಗಿ ಹೆಲ್ಮೆಟ್‌ ಧರಿಸುತ್ತಾರೆ. ಇಲ್ಲದಿದ್ದರೆ ದುಬಾರಿ ದಂಡ ಬೀಳುತ್ತದೆ.ಇಲ್ಲಿ ಆಫೀಸ್ ಕೆಲಸಕ್ಕೂ ಹೆಲ್ಮೇಟ್ ಧರಿಸಿ ಬರಬೇಕು. ಇಲ್ಲದಿದ್ದರೆ ತಲೆದಂಡವಾಗುವುದು ಗ್ಯಾರಂಟಿ! ಅರೇ, ಏನಿದು? ಹೊಸ ನಿಯಮವಾ? ಎಂದು ಯೋಚಿಸ್ತಾ ಇದ್ದೀರಾ? ಇಲ್ಲಿದೆ ನೋಡಿ ಕಥೆ ಮಜಾ!  

ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ ವಿದ್ಯುತ್‌ ಸರಬರಾಜು ಇಲಾಖೆಯ ಸಿಬ್ಬಂದಿ ಪ್ರತಿನಿತ್ಯ ಹೆಲ್ಮೆಟ್‌ ಧರಿಸಿ ಕಾರ್ಯನಿರ್ವಹಿಸುತ್ತಿದ್ದಾರೆ.  ಏಕೆಂದರೆ ಅವರು ಇರುವ ಕಟ್ಟಡದ ಮೇಲ್ಚಾವಣಿ ಶಿಥಿಲಗೊಂಡು ಹಲವಾರು ರಂಧ್ರಗಳು ಆಗಿವೆಯಂತೆ. ಯಾವುದೇ ಸಂದರ್ಭದಲ್ಲಾದರೂ ಕಟ್ಟಡ ತಮ್ಮ ಮೇಲೆ ಬೀಳಬಹುದು ಎಂಬ ಭಯದಿಂದ ಎಲ್ಲರೂ ಹೆಲ್ಮೆಟ್‌ ಧರಿಸಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಸಿಬ್ಬಂದಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

12-13 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಟ್ಟಡದ ಮೇಲ್ಚಾವಣಿ ಶಿಥಿಲಗೊಂಡು ಮೈಮೇಲ್ ಬೀಳುವ ಆತಂಕದಲ್ಲಿದ್ದಾರೆ ನೌಕರರು. ಹಾಗಾಗಿ ತಲೆಯ ಸೇಫ್ಟಿಗಾಗಿ ಪ್ರತಿನಿತ್ಯ ಹೆಲ್ಮೇಟ್ ಧರಿಸಿಯೇ ಕಛೇರಿಗೆ ಬರುತ್ತಾರೆ.