ಇಲ್ಲೊಬ್ಬ ಕಳ್ಳನ ಕಿತಾಪತಿಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ವೀಡಿಯೋದಲ್ಲಿ ಕಳ್ಳನನ್ನು ವಿಚಾರಣೆ ನಡೆಸಿದ ಪೊಲೀಸರು ಆತ ಹೇಗೆ ಬೀಗ ಹಾಕಿದ ಮನೆಗಳಲ್ಲಿ ಅಷ್ಟು ಸುಲಭವಾಗಿ ಕದಿಯುತ್ತಿದ್ದ ಎಂಬುದನ್ನು ಆತನಿಂದಲೇ ಬಾಯ್ಬಿಡಿಸಿದ್ದಾರೆ.

ಕಳ್ಳರು ಪ್ರತಿದಿನವೂ ಹೊಸ ಹೊಸ ಟ್ರಿಕ್‌ಗಳನ್ನು ಬಳಸಿ ಕಳ್ಳತನಕ್ಕೆ ಇಳಿಯುತ್ತಾರೆ. ಅದೇ ರೀತಿ ಇಲ್ಲೊಬ್ಬ ಕಳ್ಳನ ಕಿತಾಪತಿಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ವೀಡಿಯೋದಲ್ಲಿ ಕಳ್ಳನನ್ನು ವಿಚಾರಣೆ ನಡೆಸಿದ ಪೊಲೀಸರು ಆತ ಹೇಗೆ ಬೀಗ ಹಾಕಿದ ಮನೆಗಳಲ್ಲಿ ಅಷ್ಟು ಸುಲಭವಾಗಿ ಕದಿಯುತ್ತಿದ್ದ ಎಂಬುದನ್ನು ಆತನಿಂದಲೇ ಬಾಯ್ಬಿಡಿಸಿದ್ದಾರೆ. ಕಳ್ಳನ ಹೊಸತಂತ್ರದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಕಳ್ಳ ಹೇಗೆ ಕಳ್ಳತನ ಮಾಡುತ್ತಿದ್ದ ಎಂಬುದನ್ನು ತಿಳಿದ ಪೊಲೀಸರು ಕೂಡ ಒಂದು ಕ್ಷಣ ದಂಗಾಗಿದ್ದಾರೆ. ಹಾಗಾದರೆ ಬೀಗ ಒಡೆಯಲು ಕಳ್ಳ ಮಾಡುತ್ತಿದ್ದ ಐಡಿಯಾ ಏನು?

ವೀಡಿಯೋದಲ್ಲಿ ಕಳ್ಳತನ ಪ್ರಕರಣದಲ್ಲಿ ಸಿಕ್ಕಿಬಿದ್ದ ಕಳ್ಳನನ್ನು ಪೊಲೀಸರು ವಿಚಾರಣೆ ನಡೆಸುತ್ತಾ ಹೇಗೆ ನೀನು ಬೀಗ ಹಾಕಿದ ಮನೆಯನ್ನು ಕೀ ಇಲ್ಲದೆಯೂ, ಬೀಗವನ್ನು ಒಡೆಯದೆಯೂ ಹೇಗೆ ತೆರೆಯುತ್ತಿದೆ ಎಂಬುದನ್ನು ತೋರಿಸುವಂತೆ ಕೇಳಿದ್ದಾರೆ. ಈಗಾಗಲೇ ಪೊಲೀಸರು ಕಳ್ಳತನಕ್ಕೆ ಸಂಬಂಧಿಸಿದಂತೆ ಆತನನ್ನು ಸಾಕಷ್ಟು ಬೆಂಡೆಂತ್ತಿದ್ದಂತೆ ಕಾಣುತ್ತಿದ್ದು, ಆತ ಅಳುತ್ತಲೇ ಕ್ಷಮಿಸಿ ಬಿಡಿ ಸರ್ ಇನ್ನೆಂದು ನಾನು ಈ ಕೃತ್ಯ ಮಾಡುತ್ತಿಲ್ಲ ಎಂದು ಹೇಳುತ್ತಲೇ ತಾನು ಹೇಗೆ ಬೀಗವನ್ನು ಸುಲಭವಾಗಿ ತೆಗೆಯುತ್ತಿದ್ದೆ ಎಂಬುದನ್ನು ಪೊಲೀಸರ ಮುಂದೆ ಮಾಡಿ ತೋರಿಸಿದ್ದಾನೆ.

ಬೀಗ ಒಡೆಯಲು ಕಳ್ಳ ಬಳಸುತ್ತಿದ್ದ ಟ್ರಿಕ್ಸ್ ಏನು?

ಬಾಗಿಲೊಂದಕ್ಕೆ ಬೀಗ ಹಾಕಿದ ಪೊಲೀಸರು ಕೀ ಇಲ್ಲದೇ ಬೀಗ ತೆಗೆಯುವಂತೆ ಕೇಳಿದ್ದಾರೆ. ಆಗ ಬಂತು ನೋಡಿ ಸಿರಿಂಜ್ ಹೌದು ಪೆಟ್ರೋಲ್ ತುಂಬಿದ ಸಿರಿಂಜ್ ಅನ್ನು ಕಳ್ಳ ಈ ಬೀಗ ಒಡೆಯುವುದಕ್ಕೆ ಬಳಸುತ್ತಿದ್ದ. ಅದು ಹೇಗೆ ಅಂತಿರಾ? ಸಿರಿಂಜ್‌ನಲ್ಲಿ ಪೆಟ್ರೋಲ್ ತುಂಬಿದ ಈತ ಆ ಬೀಗದಲ್ಲಿ ಕೀ ಹಾಕುವುದಕ್ಕೆ ಇರುವ ತೂತಿನೊಳಗೆ ಇಂಜೆಕ್ಟ್ ಮಾಡ್ತಿದ್ದ. ಬಳಿಕ ಸಿಗರ್‌ಲೈಟ್‌ನಿಂದ ಬೆಂಕಿ ಕೊಡುತ್ತಿದ್ದ. ಇದಾದ ನಂತರ ಬೀಗವನ್ನು ಹಿಡಿದು ಎಳೆದರೆ ಬೀಗ ಕೀ ಇಲ್ಲದೇ ತನ್ನಿಂದ ತಾನೇ ತೆರೆದುಕೊಳ್ಳುತ್ತಿತ್ತು.ಈ ವೇಳೆ ಅಚ್ಚರಿಗೊಂಡ ಪೊಲೀಸರು ಅದು ಹೇಗೆ ಅಷ್ಟು ಸುಲಭವಾಗಿ ಕಳಚಲು ಸಾಧ್ಯ ಎಂದು ಕಳ್ಳನನ್ನೇ ಕೇಳಿದ್ದಾರೆ. ಆಗ ಕಳ್ಳ ಬೀಗದೊಳಗೆ ಲಾಕ್ ಸ್ಟಕ್ ಆಗುವುದಕ್ಕೆ ಪ್ಲಾಸ್ಟಿಕ್‌ನಿಂದ ಮಾಡಿದ ತಡೆಯನ್ನು ಬಳಸಿರುತ್ತಾರೆ ಅದು ಬೆಂಕಿ ತಾಗುತ್ತಿದ್ದಂತೆ ಕರಗಿ ಹೋಗುವುದರಿಂದ ಬೀಗ ಸುಲಭವಾಗಿ ತೆರೆದುಕೊಳ್ಳುತ್ತದೆ ಎಂದಿದ್ದಾರೆ. ಕಳ್ಳನ ಈ ಮಾತು ಕೇಳಿ ಪೊಲೀಸರೇ ದಂಗಾಗಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಳ್ಳತನ ತಲೆಗೆ ವಾವ್ ಅಂತಿದ್ದಾರೆ ನೆಟ್ಟಿಗರು. ಆತನನ್ನು ಜೈಲಿನಲ್ಲಿಡಬೇಡಿ, ಲಂಡನ್‌ನ ಮ್ಯೂಸಿಯಂನಲ್ಲಿಡಿ, ಜೈಲಿನಲ್ಲಿಟ್ಟರೆ ಮತ್ತೆ ಹೊರಬರ್ತಾನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಕಳ್ಳನ ಈ ಐಡಿಯಾಗೆ ಅನೇಕರು ಧನ್ಯವಾದ ಹೇಳಿದ್ದಾರೆ. ಮತ್ತೆ ಕೆಲವರು ಇಡೀ ಜಗತ್ತಿಗೆ ಈ ವಿಚಾರ ತಿಳಿಸಿದಕ್ಕೆ ಧನ್ಯವಾದ ಸೋದರ ಎಂದು ಹೇಳಿದ್ದಾರೆ. ಈ ಟ್ರಿಕ್‌ ಅನ್ನು ಪ್ರಯತ್ನಿಸಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅವರ್ನೆಸ್ ಹೆಸರಲ್ಲಿ ಎಜುಕೇಷನ್ ಕೊಟ್ಟು ಬಿಟ್ಟಿರಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈಗ ನಗರದಲ್ಲಿರುವ ಕಳ್ಳರೆಲ್ಲಾ ಈ ಹೊಸ ಐಡಿಯಾದ ಪ್ರಯೋಗ ಮಾಡಲಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರ. ಒಟ್ಟಿನಲ್ಲಿ ಈ ವೀಡಿಯೋದಿಂದ ಬೀಗ ಹಾಕಿದ ಮನೆಯೂ ಸುರಕ್ಷಿತವಲ್ಲ ಎಂಬುದು ಖಚಿತವಾಗಿದ್ದು ನಗರದ ಜನರಲ್ಲಿ ಭಯ ಮೂಡಿಸಿದೆ.

View post on Instagram